Connect with us

Dvgsuddi Kannada | online news portal | Kannada news online

ಬಡತನದಲ್ಲಿ ಅರಳಿದ ಜಾನಪದ ಪ್ರತಿಭೆ “ಉಮೇಶ್”

ಸ್ಪೆಷಲ್

ಬಡತನದಲ್ಲಿ ಅರಳಿದ ಜಾನಪದ ಪ್ರತಿಭೆ “ಉಮೇಶ್”

ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಓದೋಣ ಅಂದ್ರೆ ಅಕ್ಷರದ ಮೇಲೆ ಆಸಕ್ತಿ ಅಷ್ಟಕಷ್ಟೇ, ಉಳುಮೆ ಮಾಡೋಣ ಅಂದ್ರೆ ಜಮೀನು ಕೂಡ ಇಲ್ಲ. ಹೀಗೆ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಉಮೇಶ್ ಗೆ ಜನಪದ ಸಾಹಿತ್ಯದ ಮೇಲೆ ಅಪಾರ ಪ್ರೀತಿ….

ಕೂಲಿ ಕೆಲಸಕ್ಕೆ ಹೋದ ಕಡೆಯಲ್ಲಿ ತನ್ನ ಕಂಠ ಸಿರಿಯಿಂದ ಜನಪದ ಹಾಡುಗಳ ಮೂಲಕ  ಎಲ್ಲರ ಮೆಚ್ಚುಗೆ ಪಡೆದಿದ್ದ ಉಮೇಶ್, ಹೀಗೆ ಒಂದು ದಿನ ಗಣಪತಿ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಡಿದ `ಎಲ್ಲೋ ಜೋಗಪ್ಪ ನಿನ್ನ ಅರಮನೆ’  ಜನಪದ ಹಾಡು, ಸಂಗೀತ ಪ್ರತಿಭೆಯನ್ನು ಗುರುತಿಸಿದ ಮೊದಲ ವೇದಿಕೆ. ಇದಾದ ನಂತರ ಪಕ್ಕದ ಊರಾದ ನರಗನಹಳ್ಳಿಯಲ್ಲಿ ಅರ್ಕೆಸ್ಟ್ರಾದಲ್ಲಿ ಹಾಡಿದ `ಕೃಷ್ಣ ರುಕ್ಮೀಣಿ ‘ ಚಲಚಿತ್ರದ `ಕರ್ನಾಟಕದ ಇತಿಹಾಸದಲ್ಲಿ…’  ಹಾಡು ಭಾರೀ ಮೆಚ್ಚುಗೆ ವ್ಯಕ್ತವಾಯಿತು.. ಹೀಗೆ ಜನಪದ ಕ್ಷೇತ್ರದಲ್ಲಿ ಕಳೆದ 25 ವರ್ಷದಿಂದ ನಿರಂತರ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಉಮ್ಮೇಶ..

ಮೂಲತಃ ಲಂಬಾಣಿ ಸಮುದಾಯಕ್ಕೆ ಸೇರಿದ ಉಮೇಶ್ ಹುಟ್ಟಿದ್ದು, ದಾವಣಗೆರೆ ಜಿಲ್ಲೆ, ದಾವಣಗೆರೆ ತಾಲ್ಲೂಕಿನ  ಚಿನ್ನಸಮುದ್ರ ಗ್ರಾಮದಲ್ಲಿ. 1982 ರಲ್ಲಿ ಲಕ್ಷ್ಮೀ ಬಾಯಿ, ಹೇಮ್ಲಾ ನಾಯ್ಕ್ ದಂಪತಿಯ ಮೂರು ಮಕ್ಕಳಲ್ಲಿ 2 ನೇ ಪುತ್ರನಾಗಿ ಜನಿಸಿದ ಉಮೇಶ್,  ಕಡು ಬಡತನದಲ್ಲಿ ಅನುಭವಿಸಿದ ನೋವುಗಳನ್ನು ಮೆಟ್ಟಿನಿಂತು ಜನಪದ ಹಾಡಿನಲ್ಲಿ ಯಶಸ್ಸು ಕಂಡುಕೊಂಡವರು.  ಈ ಮೂಲಕ ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಜನಪದ ಕಾರ್ಯಕ್ರಮ ನೀಡಿದ  ಹಿರಿಮೆ ಇವರಿಗೆ ಸಲ್ಲುತ್ತದೆ.  ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಉಮೇಶ್ ನನ್ನು ಮೊಟ್ಟ ಮೊದಲು ಗುರುತಿಸಿದ್ದು ಚಿತ್ರದುರ್ಗದ ಆಕಾಶವಾಣಿ ಕೇಂದ್ರ. 2006 ರಲ್ಲಿ ಪ್ರಸಾರವಾದ ಯುವ ತರಂಗ ಕಾರ್ಯಕ್ರಮದಲ್ಲಿ ಉಮೇಶ್ ಗೆ ಜನಪದ ಗೀತೆ ಹಾಡವ ಅದ್ಭುತ ಅವಕಾಶ ಸಿಕ್ಕಿತು.

ಜನಪದ, ಸುಗಮ ಸಂಗೀತ, ಭಾವ ಗೀತೆ, ಲಾವಣಿ, ಜಾಗೃತಿ ಗೀತೆ, ಪರಿಸರ ಗೀತೆ, ಗೀಗೀ ಪದ, ಕರೋಕೆ  ರೈತಗೀತೆ,ನಾಡಗೀತೆ, ಲಂಬಾಣಿ ಹಾಡು, ಚಲನಚಿತ್ರ ಗೀತೆ ಸೇರಿದಂತೆ 150ಕ್ಕೂ ಹೆಚ್ಚು ಹಾಡುಗಳನ್ನು  ಸುಮದುರವಾಗಿ ಹಾಡುವ ಕಲೆ ಉಮೇಶ್ ಗೆ ಕರಗತವಾಗಿದೆ.  ಇದಲ್ಲದೆ, ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತೆ ಶಿಬಿರಗಳಲ್ಲಿ ಭಾಗಿಯಾಗಿ ಅಲ್ಲಿಯೂ ಕನ್ನಡ ಕಂಪಿನ ಸಂಗೀತ ಸುಧೆಯನ್ನು ಹರಿಸಿದ್ಧಾರೆ.

ಯಾವುದೇ ಗುರುಗಳ ಬಳಿ ಹೋಗಿ ಸಂಗೀತ ಕಲಿಯದಿದ್ದರೂ, ಶಾಸ್ತ್ರೋಕ್ತವಾಗಿ ಹಾಡುವ ಉಮೇಶ್ ಗೆ ತನ್ನ ತಂದೆಯೇ ಮೊದಲ ಗುರು. ಅವರ ತಂದೆ ಹೆಮ್ಲಾನಾಯ್ಕ್ ನಾಟಕ ಮಾಸ್ಟರ್ ಆಗಿದ್ದರು. ಅವರು ಬಾರಿಸುತ್ತಿದ್ದ ಘಟಂ ಉಮೇಶ್ ಅವರಿಗೆ ಸಂಗೀತ ಮೇಲಿನ ಒಲವು ಇನ್ನಷ್ಟು ಹೆಚ್ಚಾಗಲು ಕಾರಣವಾಯಿತು.

ಕಳೆದ 25 ವರ್ಷದಿಂದ ನಿರಂತರವಾಗಿ ಜನಪದ ಸೇವೆಯಲ್ಲಿ ತೊಡಗಿರುವ ಉಮೇಶ್ ಅವರಿಗೆ ನೆಹರೂ ಯುವ ಕೇಂದ್ರ ಪ್ರಶಸ್ತಿ,ಗ್ರಾಮೀಣ ಸಿರಿ, ಜಿಲ್ಲಾ ಯುವ ಪ್ರಶಸ್ತಿ, ಕನ್ನಡ ಸಂಸ್ಕೃತ ಇಲಾಖೆಯ ಪ್ರಶಸ್ತಿ, ಪ್ರಜಾವಣಿಯ ಯುವಸಾಧಕ 2020  ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು  ಪ್ರಶಸ್ತಿ ನೀಡಿ ಗೌರವಿಸಿವೆ. ಟಿವಿ ಸಂಗೀತ ಕಾರ್ಯಕ್ರಮಗಳ ರಿಯಾಲಿಟಿ ಶೋಗಳಲ್ಲಿಯೂ ಅಡಿಷನ್ ಗಳಲ್ಲಿ ಭಾಗಿಯಾಗುವ ಅವಕಾಶ ಕೂದಲೆಳೆ ಅಂತರದಲ್ಲಿ ಕೈ ತಪ್ಪಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶ ಗಳು ಉಮೇಶ್ ಅವರಿಗೆ ಸಿಗಲಿ ಎಂಬುದು ನಮ್ಮ ಆಶಯ….

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಸ್ಪೆಷಲ್

To Top