Connect with us

Dvgsuddi Kannada | online news portal | Kannada news online

ನೂತನ ಮೋಟರ್ ವಾಹನ ಕಾಯ್ದೆ ವಿರೋಧಿಸಿ ಹೆಲ್ಮೆಟ್ ಧರಿಸಿ ಪ್ರತಿಭಟನೆ

ದಾವಣಗೆರೆ

ನೂತನ ಮೋಟರ್ ವಾಹನ ಕಾಯ್ದೆ ವಿರೋಧಿಸಿ ಹೆಲ್ಮೆಟ್ ಧರಿಸಿ ಪ್ರತಿಭಟನೆ

ಡಿವಿಜಿಸುದ್ದಿ ಕಾಂ, ದಾವಣಗೆರೆ: ಮೋಟರ್ ವಾಹನ ಕಾಯ್ದೆ ವಿರೋಧಿಸಿ ವಿವಿಧ ರಾಜಕೀಯ ಪಕ್ಷಗಳು ಮತ್ತು ಸಂಘಟನೆ ನೇತೃತ್ವದಲ್ಲಿ, ಸೆ.17 ರಂದ ಜಯದೇವ ಸರ್ಕಲ್‌ನಿಂದ ಉಪ ವಿಭಾಗೀಯ ಕಚೇರಿ ವರೆಗೆ ಹೆಲ್ಮೆಟ್ ಧರಿಸಿ ಕಾಲ್ನೆಡಿಗೆ ಮೂಲಕ ವಿನೂತನವಾಗಿ ಪ್ರತಿಭಟಿಸಲು ಸಜ್ಜಾಗಿವೆ.

ರೈತ ಸಂಘ, ವಿದ್ಯಾರ್ಥಿ ಸಂಘಟನೆ, ಎಡಪಕ್ಷ, ಕಾಂಗ್ರೆಸ್ ಪಕ್ಷ, ಕನ್ನಡ ಪರ ಸಂಘಟನೆ , ಆಟೋ, ಟ್ಯಾಕ್ಸಿ, ಲಾರಿ ಚಾಲಕರ ಸಂಘಟನೆ ಸೇರಿದಂತೆ ಪಕ್ಷಾತೀತವಾಗಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಭಾಗಿಯಾಗಲಿದ್ದಾರೆ. ಮೋಟರ್ ವಾಹನ ಕಾಯ್ದೆ ನೂತನ ದರವನ್ನು ಹಿಂಪಡೆಯಬೇಕೆಂದು ಉಪ ವಿಭಾಗೀಯ ಅಧಿಕಾರಿಗಳ ಮೂಲಕ ಮುಖ್ಯಮಂತ್ರಿ ಮತ್ತು ರಾಜ್ಯಪಾಲರಿಗೆ ಮನವಿ ಸಲ್ಲಿಸಲು ನಿರ್ಧರಿಸಿವೆ.

ಸೆ.17 ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿವಿಧ ಸಂಘಟನೆ ನಾಯಕರು, ಕಾರ್ಯಕರ್ತರು ಜಯದೇವ ಸರ್ಕಲ್ ಬಳಿ ಸೇರಿ ಅಲ್ಲಿಂದ ಹೆಲ್ಮೆಟ್ ಧರಿಸಿ ಜಾಥಾ ನಡೆಸಲಿದ್ದು, ಗಾಂಧಿ ಸರ್ಕಲ್, ಪಿಬಿ ರಸ್ತೆ ಮೂಲಕ ತೆರಳಿ ಎಸಿ ಕಚೇರಿ ತಲುಪಲಿದೆ.

ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ, ಕೇಂದ್ರ ಸರ್ಕಾರ ಸೆ.೧ ರಿಂದ ನೂತನ ಮೋಟರ್ ವಾಹನ ಜಾರಿಗೆ ತರುವುದರ ಮೂಲಕ ಜನ ಸಾಮಾನ್ಯರ ಮೇಲೆ ಭಾರೀ ದಂಡದ ಹೊರೆಯನ್ನು ಹೇರಿದೆ. ಈ ನೂತನ ದಂಡದಿಂದ ಬಡವರು, ರೈತರು, ಕೂಲಿ ಕಾರ್ಮಿಕರು ದುಡಿದ ಹಣವವನ್ನೆಲ್ಲ ದಂಡದ ರೂಪದಲ್ಲಿ ಕಟ್ಟುವಂತಾಗಿದೆ. ಇದಲ್ಲದೆ ಈ ಕಾಯ್ದೆ ಭಾರೀ ಭ್ರಷ್ಟಾಚಾರಕ್ಕೂ ಅನುವು ಮಾಡಿಕೊಡುವಂತಾಗಿದ್ದು, ಅವೈಜ್ಞಾನಿಕವಾಗಿದೆ. ಹೀಗಾಗಿ ಈ ಕಾಯ್ದೆಯನ್ನು ಹಿಂಪಡೆದು ಹಿಂದೆ ಇದ್ದ ದರವನ್ನೇ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಅವರಗೆರೆ ಚಂದ್ರು, ಕನ್ನಡಪರ ಸಂಘಟನೆಯ ಯಲ್ಲಪ್ಪ, ರೈತ ಸಂಘದ ಹುಚ್ಚವ್ವನಳ್ಳಿ ಮಂಜುನಾಥ, ರಂಗನಾಥ್ ಹುಣಸೆಕಟ್ಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

0 Comments

  1. ಸಾಬೀರ್ ಅಲಿ

    September 14, 2019 at 9:21 am

    ಸುದ್ದಿ ಹೀಗೆ ಇನ್ನಷ್ಟು ಉತ್ತಮವಾಗಿ ಬರಲಿ

Leave a Reply

Your email address will not be published. Required fields are marked *

More in ದಾವಣಗೆರೆ

To Top