Connect with us

Dvgsuddi Kannada | online news portal | Kannada news online

ಹುಬ್ಬಳ್ಳಿ–ಚಿಕ್ಕಜಾಜೂರು ಜೋಡಿ ಮಾರ್ಗ ಕಾಮಗಾರಿ; ರೈಲು ಸಂಚಾರದಲ್ಲಿ ಕೆಲ ದಿನ ವ್ಯತ್ಯಯ

ಪ್ರಮುಖ ಸುದ್ದಿ

ಹುಬ್ಬಳ್ಳಿ–ಚಿಕ್ಕಜಾಜೂರು ಜೋಡಿ ಮಾರ್ಗ ಕಾಮಗಾರಿ; ರೈಲು ಸಂಚಾರದಲ್ಲಿ ಕೆಲ ದಿನ ವ್ಯತ್ಯಯ

ಬೆಂಗಳೂರು: ಹುಬ್ಬಳ್ಳಿ – ಚಿಕ್ಕಜಾಜೂರು ಭಾಗದ ರೈಲು ಹಳಿಯ ಜೋಡಿ ಮಾರ್ಗ ಎರಡನೇ ಹಂತದ ಕಾಮಗಾರಿ ಕೈಗೊಳ್ಳಲಾಗಿದೆ. ಈ ಹಿನ್ನೆಲೆ ರೈಲು ಸಂಚಾರದಲ್ಲಿ ಕೆಲ ದಿನ ಚಾರದಲ್ಲಿ ವ್ಯತ್ಯಯವಾಗಲಿದೆ. ರೈಲು ರದ್ದು, ಮಾರ್ಗ ಬದಲಾವಣೆ ಹಾಗೂ ಭಾಗಶಃ ರದ್ದತಿಯ ವಿವರ‌ ಇಲ್ಲಿದೆ.

  • ರೈಲು ಸಂಖ್ಯೆ 16214 ಎಸ್​ಎಸ್​ಎಸ್ ಹುಬ್ಬಳ್ಳಿ ಅರಸೀಕೆರೆ ಡೈಲಿ ಎಕ್ಸ್​​ಪ್ರೆಸ್​ ಸಂಚಾರ ಮಾರ್ಚ್​ 4ರ ವರೆಗೆ ರದ್ದಾಗಿದೆ.
  • ರೈಲು ಸಂಖ್ಯೆ 16213 ಅರಸೀಕೆರೆ ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​​ಪ್ರೆಸ್​ ಸಂಚಾರ ಮಾರ್ಚ್​ 1ರಿಂದ ರದ್ದಾಗಿದೆ.
  • ರೈಲು ಸಂಖ್ಯೆ 17347/48 ಎಸ್​ಎಸ್​ಎಸ್ ಹುಬ್ಬಳ್ಳಿ – ಚಿತ್ರದುರ್ಗ ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಎಕ್ಸ್​​ಪ್ರೆಸ್ ಸಂಚಾರ ಮಾರ್ಚ್​ 4ರ ವರೆಗೆ ರದ್ದಾಗಿದೆ.
  • ರೈಲು ಸಂಖ್ಯೆ 12079 ಕೆಎಸ್​ಆರ್ ಬೆಂಗಳೂರು – ಎಸ್​ಎಸ್​ಎಸ್ ಹುಬ್ಬಳ್ಳಿ ಡೈಲಿ ಜನಶತಾಬ್ಧಿ ಎಕ್ಸ್​ಪ್ರೆಸ್ ಸಂಚಾರ ಮಾರ್ಚ್​ 1ರಿಂದ 4ರ ವರೆಗೆ ಹರಿಹರ – ಹುಬ್ಬಳ್ಳಿ ಮಧ್ಯೆ ಭಾಗಶಃ ರದ್ದಾಗಿರುತ್ತದೆ.
  • ರೈಲು ಸಂಖ್ಯೆ 12080 ಎಸ್​ಎಸ್​ಎಸ್ ಹುಬ್ಬಳ್ಳಿ – ಕೆಎಸ್​ಆರ್ ಬೆಂಗಳೂರು ಜನಶತಾಬ್ಧಿ ಎಕ್ಸ್​ಪ್ರೆಸ್ ಸಂಚಾರ ಭಾಗಶಃ ರದ್ದಾಗಿದೆ.
  • ರೈಲು ಸಂಖ್ಯೆ 11021 ದಾದರ್ ತಿರುನ್ವೇಲಿ ಟ್ರಿ-ವೀಕ್ಲಿ ಎಕ್ಸ್​​ಪ್ರೆಸ್ ಮಾರ್ಚ್​ 1ರಿಂದ ಎಸ್​ಎಸ್​ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
  • ರೈಲು ಸಂಖ್ಯೆ 11035 ದಾದರ್ – ಮೈಸೂರು ಶರಾವತಿ ವಾರದ ಎಕ್ಸ್​​ಪ್ರೆಸ್ ಮಾರ್ಚ್​ 2ರಿಂದ ಎಸ್​ಎಸ್​ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
  • ರೈಲು ಸಂಖ್ಯೆ 16507 ಜೋಧಪುರ – ಕೆಎಸ್​ಆರ್ ಬೆಂಗಳೂರು ಬೈ ವೀಕ್ಲಿ ಎಕ್ಸ್​ಪ್ರೆಸ್ ಮಾರ್ಚ್ 2ರಿಂದ ಎಸ್​ಎಸ್​ಎಸ್ ಹುಬ್ಬಳ್ಳಿಯಿಂದ ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
  • ರೈಲು ಸಂಖ್ಯೆ 16209 ಅಜ್ಮೇರ್ – ಮೈಸೂರು ಬೈ ವೀಕ್ಲಿ ಎಕ್ಸ್​ಪ್ರೆಸ್ ಕೂಡ ಮಾರ್ಚ್ 3ರಿಂದ ಎಸ್​ಎಸ್​ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿದೆ. ಈ ರೈಲು ಹಾವೇರಿ, ರಾಣೆಬೆನ್ನೂರು ಹಾಗೂ ಹರಿಹರ ಮೂಲಕ ತೆರಳುವುದಿಲ್ಲ.
  • ರೈಲು ಸಂಖ್ಯೆ 11005 ದಾದರ್ – ಪುದುಚೇರಿ ಟ್ರಿ ವೀಕ್ಲಿ ಎಕ್ಸ್​ಪ್ರೆಸ್, ರೈಲು ಸಂಖ್ಯೆ 20656 ಎಸ್​ಎಸ್​ಎಸ್ ಹುಬ್ಬಳ್ಳಿ – ಯಶವಂತಪುರ ವೀಕ್ಲಿ ಎಕ್ಸ್​ಪ್ರೆಸ್ ಮಾರ್ಚ್ 4ರಿಂದ ಎಸ್​ಎಸ್​ಎಸ್ ಹುಬ್ಬಳ್ಳಿ, ಹೊಸಪೇಟೆ ಬೈಪಾಸ್, ಕೊತ್ತನೂರು, ಅಮರಾವತಿ ಕಾಲೊನಿ, ದಾವಣಗೆರೆ ಮಾರ್ಗವಾಗಿ ಸಂಚರಿಸಲಿವೆ

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top