ಆಂಟಿಗುವಾ: ವೆಸ್ಟ್ ಇಂಡೀಸ್ ನ ನಾಯಕ ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಂದು ಓವರ್ ನಲ್ಲಿ 6 ಸಿಕ್ಸರ್ ಬಾರಿಸುವ ಮೂಲಕ, ಯುವರಾಜ್ ಸಿಂಗ್ , ಹರ್ಷಲ್ ಗಿಬ್ಸ್ ದಾಖಲೆ ಸರಿಗಟ್ಟಿದ್ದಾರೆ. ಈ ಮೂಲಕ ಒಂದೇ ಒವರ್ ನಲ್ಲಿ ಆರು ಸಿಕ್ಸ್ ಸಿಡಿಸಿದ ಬ್ಯಾಟ್ಸ್ ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಂಟಿಗುವಾದ ಕೂಲಿಡ್ಜ್ ಕ್ರಿಕೆಟ್ ಮೈದಾನದಲ್ಲಿ ಶ್ರೀಲಂಕಾದ ವಿರುದ್ಧ ನಡೆದ ಮೊದಲ ಟಿ20 ಪಂದ್ಯದಲ್ಲಿ ಶ್ರೀಲಂಕಾದ ಅಕಿಲಾ ಧನಂಜಯ ಅವರ ಒವರ್ ನಲ್ಲಿ 6ಸಿಕ್ಸರ್ ಸಿಡಿಸುವ ಮೂಲಕ ಪೊಲಾರ್ಡ್ ಈ ಸಾಧನೆ ಮಾಡಿದ್ದಾರೆ.
2007ರಲ್ಲಿ ಇಂಗ್ಲೆಂಡ್ ವಿರುದ್ಧ ಟಿ20 ವಿಶ್ವಕಪ್ ನ ಉದ್ಘಾಟನಾ ಆವೃತ್ತಿಯಲ್ಲಿ ಯುವರಾಜ್ ಸಿಂಗ್ ಒಂದು ಓವರ್ ನಲ್ಲಿ 6 ಸಿಕ್ಸರ್ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.
*6 Sixes in an Over in International Cricket*😱😱😱
✅Yuvraj Singh v England 2007
✅ Herschelle Gibbs v Netherlands 2017
✅ Kieron Pollard v Sri Lanka TODAY!! 💥💥💥💥💥💥 pic.twitter.com/NY2zgucDXB— Windies Cricket (@windiescricket) March 4, 2021
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಂಕಾ ಒಂಬತ್ತು ವಿಕೆಟ್ ನಷ್ಟಕ್ಕೆ 131 ರನ್ ಗಳಿಸಲಷ್ಟೇ ಶಕ್ತವಾಗಿತ್ತು.ಬಳಿಕ ಗುರಿ ಬೆನ್ನಟ್ಟಿದ ವಿಂಡೀಸ್, ಪೊಲಾರ್ಡ್ ಅಬ್ಬರದ ನೆರವಿನೊಂದಿಗೆ 13.1 ಓವರ್‌ಗಳಲ್ಲೇ ಆರು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿದೆ.



