Connect with us

Dvgsuddi Kannada | online news portal | Kannada news online

ನೈಋತ್ಯ ರೈಲ್ವೆ ಜೋಡಿ ಹಳಿ ಕಾಮಗಾರಿ; ಫೆ.08ರವರೆಗೆ ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆಯಲ್ಲಿ ವ್ಯತ್ಯಯ

ಪ್ರಮುಖ ಸುದ್ದಿ

ನೈಋತ್ಯ ರೈಲ್ವೆ ಜೋಡಿ ಹಳಿ ಕಾಮಗಾರಿ; ಫೆ.08ರವರೆಗೆ ಹುಬ್ಬಳ್ಳಿ-ಬೆಂಗಳೂರು ರೈಲು ಸೇವೆಯಲ್ಲಿ ವ್ಯತ್ಯಯ

ಬೆಂಗಳೂರು: ನೈಋತ್ಯ ರೈಲ್ವೆಯು ಜೋಡಿ ಹಳಿ ಕಾಮಗಾರಿ ಹಿನ್ನೆಲೆ ಫೆ.2ರಿಂದ ಫೆ.8ರವರೆಗೆ ಹುಬ್ಬಳ್ಳಿ-ಬೆಂಗಳೂರು ಸಂಪರ್ಕ ರೈಲು ಸೇವೆ ರದ್ದುಗೊಳಿಸಲಾಗಿದೆ. ಬೆಂಗಳೂರು, ದಾವಣಗೆರೆ ಮೂಲಕ ಉತ್ತರ ಕರ್ನಾಟಕ ಸಂಪರ್ಕಿಸುವ ವಿವಿಧ ರೈಲುಗಳ ವೇಳಾಪಟ್ಟಿ ಬದಲಾಗಿದೆ.ಸುಮಾರು 24 ರೈಲುಗಳ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಈ ಬಗ್ಗೆ ರೈಲು ಪ್ರಯಾಣಿಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ. ಫೆಬ್ರವರಿ 8ರ ಬಳಿಕ ಎಂದಿನಂತೆ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

  • ವ್ಯತ್ಯಯಗೊಂಡ ರೈಲು ಗಳ ಪಟ್ಟಿ
  • ರೈಲು ನಂಬರ್ 16214 ಹುಬ್ಬಳ್ಳಿ-ಅರಸೀಕೆರೆ ಎಕ್ಸ್‌ಪ್ರೆಸ್ ಜನವರಿ 31 ರಿಂದ ಫೆಬ್ರವರಿ 9ರ ತನಕ ರದ್ದಾಗಿದೆ. ರೈಲು ನಂಬರ್ 16213 ಅರಸೀಕೆರೆ-ಹುಬ್ಬಳ್ಳಿ ರೈಲು ಫೆಬ್ರವರಿ 8ರವರೆಗೆ ವ್ಯತ್ಯಯ
  • ರೈಲು ಸಂಖ್ಯೆ 17347 ಹುಬ್ಬಳ್ಳಿ-ಚಿತ್ರದುರ್ಗ ಎಕ್ಸ್‌ಪ್ರೆಸ್ ಫೆಬ್ರವರಿ 7ರ ತನಕ ರದ್ದಾಗಿದೆ. ರೈಲು ನಂಬರ್ 17348 ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ಫೆಬ್ರವರಿ 7ರವರೆಗೆ
  • ರೈಲು ನಂಬರ್ 17325 ಬೆಳಗಾವಿ-ಮೈಸೂರು ವಿಶ್ವಮಾನವ ಎಕ್ಸ್‌ಪ್ರೆಸ್ ಮತ್ತು 17326 ಮೈಸೂರು-ಬೆಳಗಾವಿ ವಿಶ್ವಮಾನವ ಎಕ್ಸ್‌ಪ್ರೆಸ್ ರೈಲು ಫೆಬ್ರವರಿ 7ರಂದು ಮಾತ್ರ
  • ಜೋಧ್‌ಪುರ-ಬೆಂಗಳೂರು ರೈಲು ನಂಬರ್ 16507 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 2 ಮತ್ತು 4ರಂದು ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ-ಹರಿಹರ ನಿಲ್ದಾಣ ಇರುವುದಿಲ್ಲ.
  • ದಾದರ್-ತಿರುನಲ್ವೇಲಿ ರೈಲು ನಂಬರ್ 11021 ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ 31ನೇ ಜನವರಿ 1, 4, 7ನೇ ಫೆಬ್ರವರಿ ತನಕ ಬದಲಾಯಿಸಲಾಗಿದೆ. ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ
  • ರೈಲು ನಂಬರ್ 12079 ಬೆಂಗಳೂರು-ಹುಬ್ಬಳ್ಳಿ ಜನ ಶತಾಬ್ದಿ ಎಕ್ಸ್‌ಪ್ರೆಸ್ ಹರಿಹರ-ಹುಬ್ಬಳ್ಳಿ ನಡುವೆ ಫೆಬ್ರವರಿ 7ರ ತನಕ ಭಾಗಶಃ ರದ್ದು. ಹರಿಹರದಲ್ಲಿಯೇ ರೈಲು ನಿಲುಗಡೆಗೊಳ್ಳಲಿದೆ
  • ರೈಲು ನಂಬರ್ 12080 ಹುಬ್ಬಳ್ಳಿ-ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ -ಹರಿಹರ ನಡುವೆ ಫೆಬ್ರವರಿ 7ರ ತನಕ ಭಾಗಶಃ ರದ್ದು. ಹುಬ್ಬಳ್ಳಿ ಬದಲು ಹರಿಹರದಿಂದ ರೈಲು ಹೊರಡಲಿದೆ.
  • ರೈಲು ನಂಬರ್ 12778 ಕೊಚುವೇಲಿ-ಹುಬ್ಬಳ್ಳಿ ಹಾವೇರಿ-ಹುಬ್ಬಳ್ಳಿ ನಡುವೆ ಫೆಬ್ರವರಿ 2ರಂದು ಭಾಗಶಃ ರದ್ದು. ಖಾಲಿ ಬೋಗಿಯನ್ನು ಹುಬ್ಬಳ್ಳಿಗೆ ಸಾಗಿಸಲಾಗುತ್ತದೆ
  • ರೈಲು ನಂಬರ್ 11035 ದಾದರ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗಕ್ಕೆ ಫೆಬ್ರವರಿ 2ರಂದು ಬದಲಾಯಿಸಲಾಗಿದ್ದು, ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ
  • ರೈಲು ನಂಬರ್ 16209 ಅಜ್ಮೀರ್-ಮೈಸೂರು ಎಕ್ಸ್‌ಪ್ರೆಸ್ ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 3 ಮತ್ತು 5ರಂದು ಬದಲಾವಣೆ ಮಾಡಲಾಗಿದೆ. ಹುಬ್ಬಳ್ಳಿ, ಹರಿಹರ ನಿಲುಗಡೆ ಇರುವುದಿಲ್ಲ
  • ವೇಳಾಪಟ್ಟಿಯಲ್ಲಿ ಬದಲಾವಣೆಗಳು
  • ರೈಲು ನಂಬರ್ 17392 ಹುಬ್ಬಳ್ಳಿ-ಬೆಂಗಳೂರು ಎಕ್ಸ್‌ಪ್ರೆಸ್ ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 7ರಂದು ಸಂಚಾರ ನಡೆಸಲಿದೆ.
  • ಪುದುಚೇರಿ-ದಾದರ್ ಎಕ್ಸ್‌ಪ್ರೆಸ್ 11006 ರೈಲು ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮೂಲಕ ಫೆಬ್ರವರಿ 7ರಂದು ಸಂಚಾರ ನಡೆಸಲಿದೆ.
  • ರೈಲು ನಂಬರ್ 11036 ಮೈಸೂರು-ದಾದರ್ ಎಕ್ಸ್‌ಪ್ರೆಸ್ ಫೆಬ್ರವರಿ 5ರಂದು 70 ನಿಮಿಷ ತಡವಾಗಿ ಸಂಚಾರ. 11006 ಪುರುಚೇರಿ-ದಾದರ್ ಎಕ್ಸ್‌ಪ್ರೆಸ್ ಜನವರಿ 31, ಫೆಬ್ರವರಿ 5ರಂದು 70 ನಿಮಿಷ ತಡ.
  • ರೈಲು ಸಂಖ್ಯೆ 11022 ತಿರುನಲ್ವೇಲಿ-ದಾದರ್ ಫೆಬ್ರವರಿ 2, 3 ಮತ್ತು 6ರಂದು 70 ನಿಮಿಷ ತಡವಾಗಿ ಸಂಚಾರ

ಬದಲಾವಣೆಗೊಂಡ ಮಾರ್ಗಗಳ ವಿವರ

  • ದಾದರ್ ಪುದುಚೇರಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 11005 ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 3, 5 ಮತ್ತು 6ರಂದು ಸಂಚಾರ ನಡೆಸಲಿದೆ. ಹುಬ್ಬಳ್ಳಿ, ಹರಿಹರ ನಿಲ್ದಾಣ ಇರುವುದಿಲ್ಲ.
  • ರಾಮೇಶ್ವರಂ-ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 07356 ರೈಲನ್ನು ಹುಬ್ಬಳ್ಳಿ, ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 5ರಂದು ಸಂಚಾರ ನಡೆಸಲಿದೆ.
  • ರೈಲು ನಂಬರ್ 14805 ಯಶವಂತಪುರ-ಬರ್ಮಾರ್ ಎಕ್ಸ್‌ಪ್ರೆಸ್ ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮಾರ್ಗವಾಗಿ ಫೆಬ್ರವರಿ 5ರಂದು ಸಂಚಾರ ನಡೆಸಲಿದೆ.
    ಯಶವಂತಪುರ-ಬಿಕನೇರ್ ಎಕ್ಸ್‌ಪ್ರೆಸ್ ರೈಲು ಸಂಖ್ಯೆ 16587 ದಾವಣಗೆರೆ, ಹೊಸಪೇಟೆ ಬೈಪಾಸ್, ಗದಗ ಮಾರ್ಗವಾಗಿ ಫೆಬ್ರವರಿ 3 ಮತ್ತು 5ರಂದು ಸಂಚಾರ ನಡೆಸಲಿದೆ
  • ರೈಲು ನಂಬರ್ 20656 ಹುಬ್ಬಳ್ಳಿ-ಯಶವಂತಪುರ ರೈಲು ಹೊಸಪೇಟೆ, ಅಮರಾವತಿ ಕಾಲೋನಿ, ದಾವಣಗೆರೆ ಮಾರ್ಗವಾಗಿ ಫೆಬ್ರವರಿ 4ರಂದು ಸಂಚಾರ ನಡೆಸಲಿದೆ

Continue Reading
Advertisement
You may also like...

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top