ಡಿವಿಜಿ ಸುದ್ದಿ, ಬೆಂಗಳೂರು: ತಮ್ಮ ಬಳಿ ಇದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ವಾಪಸ್ ಪಡೆದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಸಚಿವ ಶ್ರೀರಾಮುಲು ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸದಿದ್ದರೂ , ತಮ್ಮ ಆಪ್ತರ ಬಳಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು ಎಂದು ಗೊತ್ತಾಗಿದೆ.
ತಮ್ಮ ಖಾತೆಯನ್ನು ವಾಪಸ್ ಪಡೆದ ಮೇಲೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದಲ್ಲಿ, ಸಚಿವರಾಗಿ ಉಳಿಯಲು ಸಾಧ್ಯವಿಲ್ಲ ಎಂದು ಶ್ರೀರಾಮುಲು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಖಾತೆ ವಾಪಸ್ ಪಡೆದ ನಂತರ ಸಿಎಂ ಯಡಿಯೂರಪ್ಪ ಅವರನನ್ನು ಭೇಟಿಯಾಗಿ 15 ನಿಮಿಷ ಮಾತನಾಡಿದ ಸಚಿವ ಶ್ರೀರಾಮುಲು ಸರ್ಕಾರಿ ಕಾರು ಉಪಯೋಗಿದೇ, ಖಾಸಗಿ ಕಾರಿನಲ್ಲಿ ಬಂದಿದ್ದರು.
ಸಿಎಂ ಭೇಟಿ ವೇಳೆ ಶ್ರೀರಾಮುಲು ನಿಮ್ಮ ನಿಲುವಿಗೆ ನಾನು ಬದ್ಧವಾಗಿದ್ದೇನೆ ಎಂದು ಹೇಳಿದ್ದಾರೆ. ಮುಂಬರುವ ಉಪ ಚುನಾವಣೆಯಲ್ಲಿ ಪ್ರಚಾರದಲ್ಲಿ ಭಾಗಿಯಾಗುವುದಾಗಿ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.



