ದಾವಣಗೆರೆ: ಸರ್ಕಾರ ಶಾಮನೂರು ಶುಗರ್ಸ್ ಕಾರ್ಖಾನೆಗೆ ಜಮೀನು ಮಂಜೂರು ಮಾಡಿದ್ದು, ಅದಕ್ಕೆ ಹಣ ಪಾವತಿಸುವಂತೆ ಸೂಚಿಸಿದ್ದರೂ ಇದುವರೆಗೆ ಹಣ ಪಾವತಿಸಿಲ್ಲ. ಈ ಬಗ್ಗೆ ವಿಧಾನಮಂಡಲದಲ್ಲಿ ಸತತ ಮೂರನೇ ಬಾರಿ ಪ್ರಶ್ನೆ ಮಾಡಿದ್ದು, ಇದುವರೆಗೂ ಉತ್ತರ ಸಿಕ್ಕಿಲ್ಲ ಎಂದು ಬಿಜೆಪಿ ಹರಿಹರ ಶಾಸಕ ಬಿ.ಪಿ. ಹರೀಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ: ಟ್ರ್ಯಾಕ್ಟರ್ ಗೆ ವಿದ್ಯುತ್ ಶಾಕ್ : ಟ್ರ್ಯಾಕ್ಟರ್ ಚಾಲಕ ರಕ್ಷಣೆ ಮಾಡಿದ ಯುವಕ ಸಾವು
ಪ್ರಶ್ನೋತ್ತರ ಕಲಾಪ ವೇಳೆ ವಿಷಯ ಪ್ರಸ್ತಾಪಿಸಿ, ನಾನು ಮೂರನೇ ಅಧಿವೇಶನದಲ್ಲಿ ಈ ಪ್ರಶ್ನೆ ಕೇಳಿದ್ದೇನೆ. ಇದಕ್ಕೆ ಸಂಬಂಧಿಸಿದವರು ಇದುವರೆಗೂ ಉತ್ತರ ನೀಡಿಲ್ಲ. ಹರಿಹರ ತಾಲ್ಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ 50 ಎಕರೆ ಸರ್ಕಾರಿ ಜಮೀನಲ್ಲಿ 20 ಎಕರೆ ಜಮೀನನ್ನು ರೈತರು ಉಳುಮೆ ಮಾಡುತ್ತಿದ್ದರು. ರೈತರನ್ನು ಒಕ್ಕಲೆಬ್ಬಿಸಲು ಸರ್ಕಾರ ಶಾಮನೂರು ಶುಗರ್ಸ್ ಗೆ ಜಮೀನು ಮಂಜೂರು ಮಾಡಿತ್ತು. ಅದಕ್ಕೆ 3.5 ಕೋಟಿ ಪಾವತಿಸುವಂತೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯು ಸಕ್ಕರೆ ಕಾರ್ಖಾನೆಗೆ ಸೂಚಿಸಿತ್ತು. ಸಕ್ಕರೆ ಕಾರ್ಖಾನೆ ಈವರೆಗೆ ಹಣ ಪಾವತಿಸಿಲ್ಲ. ಆದರೆ, ಸರ್ಕಾರ ರೈತರಿಂದ ಜಮೀನು ಕಿತ್ತುಕೊಂಡು, ಕಾರ್ಖಾನೆಗೆ ನೀಡಲಾಡಗಿದೆ ಎಂದು ದೂರಿದರು.
ದಾವಣಗೆರೆ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ಪ್ರಥಮ ದರ್ಜೆ ಸಹಾಯಕ
ತಮ್ಮ ಪ್ರಶ್ನೆಗೆ ಉತ್ತರ ಸಿಗದಿದ್ದಕ್ಕೆ ತೀವ್ರ ಬೇಸರ ಹೊರ ಹಾಕಿದ ಶಾಸಕ ಹರೀಶ್, ಶಾಮನೂರು ಶುಗರ್ಸ್ ಕಾರ್ಖಾನೆಗೆ ಸಂಬಂಧಿಸಿದ ಪ್ರಶ್ನೆ ಎಂಬ ಕಾರಣಕ್ಕೆ ಉತ್ತರ ನೀಡುತ್ತಿಲ್ಲವೆ? ಶಾಮನೂರು ವಿಚಾರ ಎಂಬ ಕಾರಣಕ್ಕೆ ನೀವೆಲ್ಲರೂ ಅವರ ಪರ ನಿಂತಿದ್ದೀರಾ ಸ್ಪೀಕರ್ ಅವರನ್ನೇ ಪ್ರಶ್ನಿಸಿದರು.
ಸಮಿತಿ ರಚನೆ: ಇದಕ್ಕೆ ಪ್ರತಿಕ್ರಿಯೆ ನೀಡಿದ ಸಭಾಧ್ಯಕ್ಷ ಯು.ಟಿ. ಖಾದರ್, ಈ ವಿಷಯದ ಬಗ್ಗೆ ನೀವು ಈಗಾಗಲೇ ನನ್ನನ್ನು ಭೇಟಿ ಮಾಡಿ ಚರ್ಚಿಸಿದ್ದೀರಿ. ಪ್ರಶ್ನೆಗಳಿಗೆ ಉತ್ತರ ನೀಡದೇ ಇರುವುದರ ಹಿಂದಿನ ಕಾರಣಗಳ ಕುರಿತು ತನಿಖೆ ನಡೆಸಲು ಉಪ ಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದೇನೆ. ಅವರು ನೀಡುವ ವರದಿ ಆಧರಿಸಿ ಕ್ರಮ ಕೈಗೊಳ್ಳುತ್ತೇನೆ.ನಿಮ್ಮ ಪ್ರಶ್ನೆಗೆ ತ್ವರಿತವಾಗಿ ಉತ್ತರ ಕೊಡಿಸುತ್ತೇನೆ. ನನ್ನ ಕಚೇರಿಗೆ ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿಕೊಂಡು ಚರ್ಚಿಸುತ್ತೇನೆ ಎಂದರು.