Connect with us

Dvgsuddi Kannada | online news portal | Kannada news online

ಇಂದಿನಿಂದ 6,7,8 ನೇ ತರಗತಿ ಆರಂಭ; ಹೊಸ ಮಾರ್ಗ ಸೂಚಿಯೊಂದಿಗೆ ಶಾಲೆ ಒಪನ್

ಪ್ರಮುಖ ಸುದ್ದಿ

ಇಂದಿನಿಂದ 6,7,8 ನೇ ತರಗತಿ ಆರಂಭ; ಹೊಸ ಮಾರ್ಗ ಸೂಚಿಯೊಂದಿಗೆ ಶಾಲೆ ಒಪನ್

ಬೆಂಗಳೂರು: ಕೊರೊನಾ ಮತ್ತು ಲಾಕ್​ಡೌನ್​ನಿಂದಾಗಿ ಶಾಲೆಗಳ ಬಂದ್ ಆಗಿದ್ದ ಶಾಲೆಗಳು ಇಂದಿನಿಂದ 1 ವರ್ಷ ಸ್ಕೂಲ್​ಗಳು ಬಂದ್ ಆಗುತ್ತಿವೆ. ಈಗಾಗಲೇ 9, 10, ಪ್ರಥಮ ಮತ್ತು ದ್ವಿತೀಯ ಪಿಯು ಕ್ಲಾಸ್ ಓಪನ್ ಆಗಿದೆ. ಇಂದಿನಿಂದ 6, 7, 8ನೇ ತರಗತಿಗಳು ಪ್ರಾರಂಭವಾಗಲಿವೆ.

6, 7, 8ನೇ ತರಗತಿಗಳನ್ನ ಆರಂಭಿಸಲು ನಿರ್ಧರಿಸಿರೋ ಶಿಕ್ಷಣ ಇಲಾಖೆ, ಮಾರ್ಗಸೂಚಿಗಳನ್ನೂ ಪ್ರಕಟಿಸಿದೆ. ಆ ಗೈಡ್​ಲೈನ್ಸ್​ನ್ನು ಕಡ್ಡಾಯವಾಗಿ ಪಾಲಿಸಬೇಕು ಅಂತಾ ಖಡಕ್ ಆಗಿ ಹೇಳಿದೆ.ಕ್ಲಾಸ್ ಗೈಡ್​ಲೈನ್ಸ್ ವಿದ್ಯಾರ್ಥಿಗಳು ಶಾಲೆಗೆ ಬರುವುದು ಕಡ್ಡಾಯವಲ್ಲ ಅಂತಾ ಶಿಕ್ಷಣ ಇಲಾಖೆ ಮಾರ್ಗಸೂಚಿಯಲ್ಲಿ ಹೇಳಿದೆ. ಕೊವಿಡ್ ನೆಗೆಟಿವ್ ರಿಪೋರ್ಟ್ ಇದ್ರಷ್ಟೇ ವಿದ್ಯಾರ್ಥಿಗಳಿಗೆ ತರಗತಿಗೆ ಬರಲು ಅವಕಾಶ ಇರುತ್ತೆ.

ಕೊರೊನಾ ಲಕ್ಷಣಗಳಿದ್ರೆ ಅವಕಾಶ ಇರಲ್ಲ. ಇದ್ರ ಜೊತೆಗೆ ವಿದ್ಯಾರ್ಥಿಗಳು ಆನ್​ಲೈನ್​ನಲ್ಲೂ ಪಾಠ ಕೇಳಬಹುದು. ಆದ್ರೆ, ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಅನುಮತಿ ಕಡ್ಡಾಯವಾಗಿರಬೇಕು ಅಂತಾ ಶಿಕ್ಷಣ ಇಲಾಖೆ ಗೈಡ್​ಲೈನ್ಸ್​ನಲ್ಲಿ ತಿಳಿಸಿದೆ.

ರಾಜ್ಯದಲ್ಲಿ 6ರಿಂದ 8ನೇ ತರಗತಿ ಶುರು ಆಗ್ತಿವೆ. ಬೆಂಗಳೂರಿಗೆ ಮಾತ್ರ ಈ ಆದೇಶ ಅನ್ವಯ ಆಗಲ್ಲ. ಯಾಕಂದ್ರೆ, ಬೆಂಗಳೂರು ನಗರವನ್ನ ವಿಶೇಷವಾಗಿ ಪರಿಗಣಿಸಲಾಗ್ತಿದೆ. ಹೀಗಾಗೇ, ರಾಜಧಾನಿಯಲ್ಲಿ 6 ಮತ್ತು 7ನೇ ತರಗತಿ ಆರಂಭ ಆಗಲ್ಲ. ಕೇವಲ 8ನೇ ತರಗತಿ ಮಾತ್ರ ಶುರು ಆಗುತ್ತಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});