Connect with us

Dvgsuddi Kannada | online news portal | Kannada news online

ಹುಬ್ಬಳ್ಳಿ – ಚಿಕ್ಕಜಾಜೂರು ಮಾರ್ಗದ ಹೊಸ ದ್ವಿಪಥ ರೈಲಿನ ವೇಗದ ಚಾಲನೆ ಪರಿಶೀಲನೆ ಇಂದು; ಟ್ರ್ಯಾಕ್‌ಗಳ ಮೇಲೆ ಓಡಾದಂತೆ ಎಚ್ಚರಿಕೆ

ಪ್ರಮುಖ ಸುದ್ದಿ

ಹುಬ್ಬಳ್ಳಿ – ಚಿಕ್ಕಜಾಜೂರು ಮಾರ್ಗದ ಹೊಸ ದ್ವಿಪಥ ರೈಲಿನ ವೇಗದ ಚಾಲನೆ ಪರಿಶೀಲನೆ ಇಂದು; ಟ್ರ್ಯಾಕ್‌ಗಳ ಮೇಲೆ ಓಡಾದಂತೆ ಎಚ್ಚರಿಕೆ

ಹುಬ್ಬಳ್ಳಿ; ನೈಋತ್ಯ ರೈಲ್ವೆಯ ಹುಬ್ಬಳ್ಳಿ-ಚಿಕ್ಕಜಾಜೂರು ಮಾರ್ಗದ ಹೊಸ ದ್ವಿಪಥ ವೇಗದ ಪರಿಶೀಲನೆ ಇಂದು (ಮಾ.27)ನಡೆಯಲಿದ್ದು, ಟ್ರ್ಯಾಕ್‌ಗಳ ಮೇಲೆ ಓಡಾದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ.

ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರಿಂದ ಹುಬ್ಬಳ್ಳಿ ದಕ್ಷಿಣ – ಸಂಶಿ ನಿಲ್ದಾಣಗಳ ನಡುವೆ ಹುಬ್ಬಳ್ಳಿ – ಚಿಕ್ಕಜಾಜೂರು ಮಾರ್ಗದ ಹೊಸ ದ್ವಿಪಥದ ಮೇಲೆ ಶಾಸನಬದ್ಧ ವೇಗದ ಚಾಲನೆ ಪರಿಶೀಲನೆಯನ್ನು ನಡೆಸಲಾಗುವುದು. ಸಾರ್ವಜನಿಕರು ಯಾವುದೇ ಕಾರಣಕ್ಕೂ ಟ್ರ್ಯಾಕ್‌ಗಳ ಮೇಲೆ ನಡೆಯುವುದಾಗಲಿ, ದಾಟುವುದಾಗಲಿ ಮಾಡುವಂತಿಲ್ಲ.ಈ ದ್ವಿಪಥವು ರೈಲ್ವೇ ಸುರಕ್ಷತಾ ಆಯುಕ್ತರ ಪ್ರಮಾಣೀಕರಣದ ನಂತರವಷ್ಟೇ ಸಾರ್ವಜನಿಕರ
ಉಪಯೋಗಕ್ಕಾಗಿ ಉದ್ಘಾಟನೆ ಮಾಡಲಾಗುವುದು ಎಂದು ಮುಖ್ಯ ಇಂಜಿನಿಯರ್ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top