Connect with us

Dvgsuddi Kannada | online news portal | Kannada news online

ಹಿಜಾಬ್​ ವಿವಾದ : ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿಗೆ ಉಗ್ರ ಸಂಘಟನೆ ಅಲ್ ಖೈದಾ ಶಹಬ್ಬಾಸ್ ಗಿರಿ…! 

ಪ್ರಮುಖ ಸುದ್ದಿ

ಹಿಜಾಬ್​ ವಿವಾದ : ಅಲ್ಲಾಹು ಅಕ್ಬರ್ ಎಂದು ಕೂಗಿದ ವಿದ್ಯಾರ್ಥಿಗೆ ಉಗ್ರ ಸಂಘಟನೆ ಅಲ್ ಖೈದಾ ಶಹಬ್ಬಾಸ್ ಗಿರಿ…! 

ಬೆಂಗಳೂರು: ಹಿಜಾಬ್​ ವಿವಾದದಲ್ಲಿ  ‘ಅಲ್ಲಾಹು ಅಕ್ಬರ್, ಅಲ್ಲಾಹು ಅಕ್ಬರ್ ಎಂದು ಕೂಗಿದ   ಮಂಡ್ಯದ ಪಿಇಎಸ್ ಕಾಲೇಜಿನ ವಿದ್ಯಾರ್ಥಿನಿ ಮುಸ್ಕಾನ್​ ಗೆ  ಉಗ್ರ ಸಂಘಟನೆ ಅಲ್​ಖೈದಾ  ಶಹಬ್ಬಾಸ್ ಗಿರಿ ನೀಡಿದದೆ.

ಅಲ್​ಖೈದಾ ಮುಖ್ಯಸ್ಥ ಆಲ್​ ಜವಾಹಿರಿ ಈ ಬಗ್ಗೆ 9 ನಿಮಿಷದ ವಿಡಿಯೋ ಮಾಡಿ ಬಿಡುಗಡೆ ಮಾಡಿದ್ದು, ಮುಸ್ಕಾನ್​ ಭಾರತದ ಉದಾತ್ತ ಮಹಿಳೆ. ಅವಳ ಹೋರಾಟ ನನಗೆ ಸಂತಸ ತಂದಿದೆ. ಹಿಜಾಬ್  ದಬ್ಬಾಳಿಕೆ ವಿರುದ್ಧ ಭಾರತದ ಮುಸ್ಲಿಮರು ತಿರುಗಿ ಬೀಳಬೇಕು. ಮುಸ್ಕಾನ್​  ಹೋರಾಟ ನನಗೆ ಸಂತಸ ತಂದಿದೆ.  ಹಿಜಾಬ್​ ಹಾಕುವುದು ನಮ್ಮ ಧರ್ಮದ ಹಕ್ಕು ಎಂದು  ಬಣ್ಣಿಸಿ ಒಂದು ಪದ್ಯ ಬರೆಯುತ್ತೇನೆ ಎಂದು ಹೇಳಿಕೊಂಡಿದ್ದಾನೆ.

ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಕ್ಕೆ ಪ್ರತಿಯಾಗಿ ಅಲ್ಲಾ ಹು ಅಕ್ಬರ್ ಎಂದು ಘೋಷಣೆ ಕೂಗಿದ್ದಳು. ಈ ಬಗ್ಗೆ ಮಾತನಾಡಿದ  ಗೃಹ ಸಚಿವ ಅರಗ ಜ್ಞಾನೇಂದ್ರ, ಹಿಜಾಬ್​ ವಿವಾದದ ಹಿಂದೆ ಉಗ್ರರ ಕೈವಾಡ ಇದೆ. ಈ ಬಗ್ಗೆ ನಾನು ಹಿಂದೆಯೇ ಹೇಳಿದ್ದೆ,  ಹಿಜಾಬ್ ವಿವಾದದ ಹಿಂದೆ ಅಂತಾರಾಷ್ಟ್ರೀಯ ಸಂಚು ಇದೆ ಎಂದಿದ್ದಾರೆ.

 

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top