ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ 10 ನೇ ತರಗತಿಯ ಪೂರ್ವಸಿದ್ಧತಾ ಪರೀಕ್ಷೆಗಳು 2022 ರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪರೀಕ್ಷೆ ಫೆ. 21 ಮತ್ತು 26 ರವರೆಗೆ ನಡೆಯಲಿದೆ.ಮಂಡಳಿಯ ವೆಬ್‌ಸೈಟ್ sslc.karnataka.gov.in ನಲ್ಲಿ ವೇಳಾಪಟ್ಟಿ ಪರಿಶೀಲಿಸಬಹುದು. ಕರ್ನಾಟಕ SSLC ಪೂರ್ವಸಿದ್ಧತಾ ಪರೀಕ್ಷೆ ವೇಳಾಪಟ್ಟಿ ಈ ರೀತಿ ಇದೆ.
- ಫೆಬ್ರವರಿ 21 – ಪ್ರಥಮ ಭಾಷೆ
- ಫೆಬ್ರವರಿ 22 – ಮುಖ್ಯ ವಿಷಯ (ಸಮಾಜ ವಿಜ್ಞಾನ)
- ಫೆಬ್ರವರಿ 23 – ದ್ವಿತೀಯ ಭಾಷೆ
- ಫೆಬ್ರವರಿ 24 – ಮುಖ್ಯ ವಿಷಯ (ಗಣಿತ)
- ಫೆಬ್ರವರಿ 25 – ತೃತೀಯ ಭಾಷೆ
- ಫೆಬ್ರವರಿ 26 – ಮುಖ್ಯ ವಿಷಯ (ವಿಜ್ಞಾನ)