ವಿಶ್ವಸಂಸ್ಥೆ: ತುರ್ತು ಸಂದರ್ಭದಲ್ಲಿ ಫೈಜರ್-ಬಯೋಎನ್‍ಟೆಕ್ ಕೊರೊನಾ ಲಸಿಕೆ ಬಳಕಗೆ ವಿಶ್ವ ಆರೋಗ್ಯ ಸಂಸ್ಥೆ ಗ್ರೀನ್ ಸಿಗ್ನಲ್ ನೀಡಿದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಕೊರೊನಾ ಲಸಿಕೆ ಲಭ್ಯವಾಗಲಿ ಎಂಬ ಉದ್ದೇಶದಿಂದ ಫೈಜರ್ ಲಸಿಕೆ ಪ್ರಯೋಗಕ್ಕೆ ಅನುಮತಿ ನೀಡಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಇಡೀ ಜಗತ್ತಿನಲ್ಲಿಯೇ ಮೊದಲ ಕೊರೊನಾ ಲಸಿಕೆ ಎಂಬ ಹೆಗ್ಗಳಿಕೆ ಪಡೆದಿದ್ದ ಫೈಜರ್ ಲಸಿಕೆಗೆ ವಿಶ್ವ ಸಂಸ್ಥೆ ಮನ್ನಣೆ ನೀಡಿದೆ. ಲಸಿಕೆಯನ್ನು ಅವಶ್ಯ ಇರುವ ದೇಶಗಳಿಗೆ ಸರಬರಾಜು ಮಾಡಲು ಯುನಿಸೆಫ್ ಮತ್ತು ಪ್ಯಾನ್ ಅಮೆರಿಕಾ ಆರೋಗ್ಯ ಒಕ್ಕೂಟಕ್ಕೆ ಅನುಮತಿ ನೀಡಲಾಗಿದೆ.
ಇಡಿ ವಿಶ್ವವೇ ಕೊರೊನಾ ಸೋಂಕಿನಿಂದ ತತ್ತರಿಸುತ್ತಿರುವ ಸಂದರ್ಭದಲ್ಲಿ ಫೈಜರ್ ಲಸಿಕೆಗೆ ಅನುಮತಿ ನೀಡಿರುವುದರಿಂದ ಅವಶ್ಯಕತೆ ಇರುವ ದೇಶಗಳಿಗೆ ಮದ್ದು ದೊರೆತಂತಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಹಾಯಕ ಮಹಾ ನಿರ್ದೇಶಕ ಡಾ.ಮರಿಯನ್‍ಗೆಲಾ ಸಿಮಾವೋ ಅಭಿಪ್ರಾಯಪಟ್ಟಿದ್ದಾರೆ. ಫೈಜರ್ ಬಯೋಎನ್‍ಟೆಕ್ ಲಸಿಕೆ ಬಳಕೆಯಂದ ಯಾವುದೇ ಅಡ್ಡ ಪರಿಣಾಮ ಕಂಡು ಬಂದಿಲ್ಲ.
ಫೈಜರ್ ಲಸಿಕೆಯನ್ನು ಅಮೆರಿಕಾ, ಕೆನಡಾ, ಕತಾರ್, ಬಹ್ರೇನ್ ಮತ್ತು ಮೆಕ್ಸಿಕೋ ರಾಷ್ಟ್ರಗಳಲಿ ಬಳಕೆ ಮಾಡಲಾಗುತ್ತಿದೆ. ಕೊರೊನಾ ಲಸಿಕೆಗಳನ್ನು ಶ್ರೀಮಂತ ರಾಷ್ಟ್ರಗಳು ತಮ್ಮಲ್ಲೇ ಇರಿಸಿಕೊಂಡು ಅವಶ್ಯಕತೆ ಇರುವ ದೇಶಗಳಿಗೆ ಸರಬರಾಜು ಮಾಡುತ್ತಿಲ್ಲ ಎಂದು ಕೆಲವು ಅಂತಾರಾಷ್ಟ್ರೀಯ ಸಂಘ ಸಂಸ್ಥೆಗಳು ಆರೋಪಿಸಿದ್ದವು. ಇದೀಗ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತ ಮುದ್ರೆ ದೊರೆತಿರುವ ಫೈಜರ್ ಲಸಿಕೆ ಎಲ್ಲಾ ರಾಷ್ಟ್ರಗಳಿಗೂ ಸರಬರಾಜಗಲಿದ್ದು, ಹೊಸ ವರ್ಷದ ಆರಂಭದಲ್ಲೇ ಅವಶ್ಯಕತೆ ಇರುವ ರಾಷ್ಟ್ರಗಳಿಗೆ ಲಸಿಕೆ ದೊರೆಯುವ ಸಾಧ್ಯತೆಗಳಿವೆ.



