Connect with us

Dvgsuddi Kannada | online news portal | Kannada news online

ಭದ್ರಾ ಎಡ ದಂಡೆಗೆ ಇಂದಿನಿಂದ ನೀರು; ಬಲ ದಂಡೆಗೆ ಜ. 6ರಿಂದ 120 ದಿನ ನೀರು ..!

ಪ್ರಮುಖ ಸುದ್ದಿ

ಭದ್ರಾ ಎಡ ದಂಡೆಗೆ ಇಂದಿನಿಂದ ನೀರು; ಬಲ ದಂಡೆಗೆ ಜ. 6ರಿಂದ 120 ದಿನ ನೀರು ..!

ಮಲೇಬೆನ್ನೂರು: ಭದ್ರಾ ಅಚ್ಚುಕಟ್ಟಿನ ಪ್ರದೇಶದ ಈ ಬಾರಿಯ ಬೇಸಿಗೆ ಬೆಳೆಗಳಿಗೆ ಭದ್ರಾ ಜಲಾಶಯದ ಎಡದಂಡೆ ನಾಲೆಗೆ  ಇಂದಿನಿಂದ (ಜ.1)  ಹಾಗೂ ಬಲದಂಡೆ ನಾಲೆಗೆ ಜನವರಿ 6 ರಿಂದ ಸತತ  120 ದಿವಸ ನೀರು ಹರಿಸಲು ಭದ್ರಾ ಕಾಡಾ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ನೀರಾವರಿ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ಭದ್ರಾ ಕಾಡಾ ಅಧ್ಯಕ್ಷೆ  ಪವಿತ್ರ ರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 12 ದಿನಗಳ ಕಾಲ ಸತತವಾಗಿ ನೀರು ಹರಿಯಲಿದ್ದು,  ಕೊನೆ ಭಾಗದ ರೈತರಿಗೆ ನೀರಿನ ತೊಂದರೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.

ಸಭೆಯ ಆರಂಭದಲ್ಲಿ ಭದ್ರಾ ಅಧೀಕ್ಷಕ ಅಭಿಯಂತರ ಚಂದ್ರಹಾಸ ಮಾತನಾಡಿ, ಜಲಾಶಯದಲ್ಲಿ  ಸದ್ಯ  62.456 (178 ಅಡಿ 6 ಇಂಚು) ಟಿಎಂಸಿ ನೀರಿದ್ದು, ಇದರಲ್ಲಿ ಬೇಸಿಗೆ ಬೆಳೆಗಳಿಗೆ 37.32 ಟಿಎಂಸಿ ಕುಡಿಯುವ ನೀರು, ಕೈಗಾರಿಕೆ ಉದ್ದೇಶಗಳಿಗೆ, ನೀರಿನ ಯೋಜನೆಗಳಿಗೆ, ಜಾತ್ರೆಗಳಿಗೆ ಮತ್ತು ಆವಿಯಾಗುವ ನೀರಿನ ಪ್ರಮಾಣ ಸೇರಿ ಒಟ್ಟು 48.16 ಟಿಎಂಸಿ ನೀರು ಬೇಕಾಗುತ್ತದೆ ಎಂದು ತಿಳಿಸಿದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top
(adsbygoogle = window.adsbygoogle || []).push({});