Connect with us

Dvgsuddi Kannada | online news portal | Kannada news online

ಬ್ರಿಟನ್ ನಿಂದ ಬಂದ 75 ಪ್ರಯಾಣಿಕರು ಇನ್ನೂ ಪತ್ತೆಯಾಗಿಲ್ಲ: ಸಚಿವ ಕೆ. ಸುಧಾಕರ್

ಪ್ರಮುಖ ಸುದ್ದಿ

ಬ್ರಿಟನ್ ನಿಂದ ಬಂದ 75 ಪ್ರಯಾಣಿಕರು ಇನ್ನೂ ಪತ್ತೆಯಾಗಿಲ್ಲ: ಸಚಿವ ಕೆ. ಸುಧಾಕರ್

ಬೆಂಗಳೂರು:  ಬ್ರಿಟನ್‍ನಿಂದ ಆಗಮಿಸಿದವರಲ್ಲಿ ಇನ್ನೂ 75 ಪ್ರಯಾಣಿಕರು ಪತ್ತೆಯಾಗಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ 70 ಹಾಗೂ ಇತರೆ ಜಿಲ್ಲೆಗಳಿಗೆ ಸಂಬಂಧಿಸಿದ 5 ಜನರು ಸೇರಿದ್ದಾರೆ. ಪತ್ತೆಯಾಗದ ಇವರನ್ನು ಸಂಜೆ ವೇಳೆಗೆ ಪತ್ತೆ ಹಚ್ಚುವುದಾಗಿ ಗೃಹ ಇಲಾಖೆ ಭರವಸೆ ನೀಡಿದೆ ಎಂದರು.

ಬ್ರಿಟನ್ ನಿಂದ  ಬಂದ 33 ಪ್ರಯಾಣಿಕರ ಆರ್‍ಟಿಪಿಸಿಆರ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದೆ. ಇವರ ಸಂಪರ್ಕದಲ್ಲಿದ್ದ ಇತರೆ ಐದು ಜನರಿಗೂ ಪಾಸಿಟಿವ್ ಬಂದಿದ್ದು, ಒಟ್ಟು 38 ಜನರಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಏಳು ಮಂದಿಯಲ್ಲಿ ರೂಪಾಂತರಗೊಂಡ ವೈರಾಣು ದೃಢಪಟ್ಟಿದೆ ಎಂದು ಹೇಳಿದರು.

ಬ್ರಿಟನ್‍ನಿಂದ ನ.25ರಿಂದ ನಿನ್ನೆಯವರೆಗೆ 5,068 ಜನರು ಬಂದಿದ್ದರು. ಅವರಲ್ಲಿ 4238 ಜನರು ಡಿಸೆಂಬರ್ 9ರಿಂದ ಬಂದಿದ್ದಾರೆ. ಈ ಪೈಕಿ 810 ಹೊರ ರಾಜ್ಯದವರಾಗಿದ್ದಾರೆ. ಹೊರರಾಜ್ಯದವರ ಪ್ರಯಾಣಿಕರ ಎಲ್ಲ ಮಾಹಿತಿಯನ್ನು ಆಯಾ ರಾಜ್ಯದವರೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ತಿಳಿಸಿದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top