Connect with us

Dvgsuddi Kannada | online news portal | Kannada news online

ಕೇಂದ್ರ ಸರ್ಕಾರಿ ನೌಕರಿಗೆ ದಸರಾ ಭರ್ಜರಿ ಗಿಫ್ಟ್ : ಡಿಎ ಶೇ.4 ರಷ್ಟು ಹೆಚ್ಚಳ

ರಾಷ್ಟ್ರ ಸುದ್ದಿ

ಕೇಂದ್ರ ಸರ್ಕಾರಿ ನೌಕರಿಗೆ ದಸರಾ ಭರ್ಜರಿ ಗಿಫ್ಟ್ : ಡಿಎ ಶೇ.4 ರಷ್ಟು ಹೆಚ್ಚಳ

ನವದೆಹಲಿ: ಕೇಂದ್ರ ಸರ್ಕಾರ‌‌ ತನ್ನ ನೌಕರರಿಗೆ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್ ನೀಡಿದೆ. ತುಟ್ಟಿಭತ್ಯೆಯನ್ನು ಶೇ.34 ರಿಂದ ಶೇ.38 ಕ್ಕೆ ಹೆಚ್ಚಳ ಮಾಡಲಾಗಿದ್ದು, ಇದರಿಂದಾಗಿ ಶೇ.4 ಹೆಚ್ಚಳವಾದಂತಾಗಿದೆ.

ಈ ಸೌಲಭ್ಯ ಕೇಂದ್ರ ಸರ್ಕಾರದ 50 ಲಕ್ಷಕ್ಕೂ ಅಧಿಕ ನೌಕರರು ಹಾಗೂ 62 ಲಕ್ಷ ಪಿಂಚಣಿದಾರರಿಗೆ ಲಭ್ಯವಾಗಲಿದೆ.ಕೇಂದ್ರ ಸರ್ಕಾರಿ ನೌಕರರಿಗೆ ವರ್ಷಕ್ಕೆ ಎರಡು ಬಾರಿ ಅಥವಾ ಆರು ತಿಂಗಳಿಗೊಮ್ಮೆ ಡಿಎ ಹೆಚ್ಚಳ ಮಾಡಲಾಗುತ್ತದೆ. ಆದರೆ ಕಳೆದ ಹಲವು ತಿಂಗಳುಗಳಿಂದಲೂ ಈ ಹೆಚ್ಚಳ ಮಾಡಲಾಗಿರಲಿಲ್ಲ.

ಇವತ್ತು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಡಿಎ ಹೆಚ್ಚಳ ಕುರಿತಂತೆ ತೀರ್ಮಾನ ಕೈಗೊಳ್ಳಲಾಗಿದೆ. ಇದಲ್ಲದೆ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಅನ್ನ ಯೋಜನೆಯನ್ನೂ ಸಹ ಮತ್ತೆ ಮೂರು ತಿಂಗಳ ಕಾಲ ಮುಂದುವರೆಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top