Connect with us

Dvgsuddi Kannada | online news portal | Kannada news online

ಮತ್ತೆ ಗೃಹ ಬಳಕೆ LpG ಸಿಲಿಂಡರ್ ಬೆಲೆ‌‌ 50 ರೂ. ಏರಿಕೆ ಶಾಕ್ ..!

ಪ್ರಮುಖ ಸುದ್ದಿ

ಮತ್ತೆ ಗೃಹ ಬಳಕೆ LpG ಸಿಲಿಂಡರ್ ಬೆಲೆ‌‌ 50 ರೂ. ಏರಿಕೆ ಶಾಕ್ ..!

ನವದೆಹಲಿ: ಇಂದಿನಿಂದ ಗೃಹ ಬಳಕೆಯ ಎಲ್‌.ಪಿ.ಜಿ. ಸಿಲಿಂಡರ್‌ ಗಳ ಬೆಲೆ 50 ರೂ ಏರಿಕೆ ಮಾಡಲಾಗಿದೆ. ಇಂದಿನಿಂದಲೇ (ಜು.06) ಸಿಲಿಂಡರ್ ಬೆಲೆಯನ್ನು ರೂ. 50 ಹೆಚ್ಚಳವಾಗಿದೆ.

ರಾಜಧಾನಿ ದೆಹಲಿಯಲ್ಲಿ ಎಲ್‌.ಪಿ.ಜಿ. ಸಿಲಿಂಡರ್‌ದರ 1,003 ರಿಂದ 1,053 ರೂ.ಗೆ ಏರಿಕೆಯಾಗಿದೆ.ಇಂಡೇನ್‌ 14.2 ಕೆಜಿ ಸಿಲಿಂಡರ್ ಸಬ್ಸಿಡಿ ರಹಿತ ಬೆಲೆಗಳು ಇಂತಿವೆ. ದೆಹಲಿ – 1,053 ರೂ.,ಮುಂಬೈ – 1,052.50 ರೂ., ಕೋಲ್ಕತ್ತಾ – 1,079 ರೂ., ಚೆನ್ನೈ – 1068.50 ರೂ.

ಇಂದಿನಿಂದಲೇ ದೇಶಾದ್ಯಂತ ಗೃಹಬಳಕೆಯ ಅಡುಗೆ ಸಿಲಿಂಡರ್‌ಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ ಸಿಲಿಂಡರ್‌ ಗಳ ಬೆಲೆ 50 ರೂ ಏರಿಲೆಯಾಗಿದೆ.ಗೃಹಬಳಕೆಯ 5 ಕೆಜಿ ಸಿಲಿಂಡರ್ ಬೆಲೆಯನ್ನು ಸಹ ಪ್ರತಿ ಸಿಲಿಂಡರ್‌ ಗೆ 18 ರೂ. ಹೆಚ್ಚಿಸಲಾಗಿದೆ ಮತ್ತು 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 8.50 ರೂ. ಇಳಿಕೆಯಾಗಿದೆ.

ಕಳೆದ ಒಂದು ವರ್ಷದಲ್ಲಿ ದೆಹಲಿಯಲ್ಲಿ 14.2 ಕೆಜಿ ಗೃಹಬಳಕೆಯ ಎಲ್‌.ಪಿ.ಜಿ. ಸಿಲಿಂಡರ್‌ ಗಳ ದರ 834.50 ರೂ.ನಿಂದ 1,003 ರೂ.ಗೆ ಏರಿಕೆಯಾಗಿದೆ. ಗೃಹ ಬಳಕೆ ಗ್ಯಾಸ್ ಬೆಲೆ ಮಾರ್ಚ್ 22, 2022 ರಂದು 50 ರೂ. ಏರಿಕೆ ನಂತರ 999.50 ರೂ.ಗೆ ತಲುಪಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top