Connect with us

Dvgsuddi Kannada | online news portal | Kannada news online

ಸಿಲಿಂಡರ್ ಬೆಲೆಯಲ್ಲಿ ಏರಿಕೆ

ಪ್ರಮುಖ ಸುದ್ದಿ

ಸಿಲಿಂಡರ್ ಬೆಲೆಯಲ್ಲಿ ಏರಿಕೆ

ನವದೆಹಲಿ: ದೇಶದ ಜನತೆಗೆ ಇಂಡಿಯನ್​ ಆಯಿಲ್​ ಕಾರ್ಪೋರೇಷನ್​ ದರ ಏರಿಕೆ ಶಾಕ್ ನೀಡಿದ್ದು, ಮಾಸಿಕ ಪರಿಷ್ಕರಣೆ ಮಾಡಿರುವ ಸಂಸ್ಥೆ ದೇಶಾದ್ಯಂತ ಎಲ್​ಪಿಜಿ ಸಿಲಿಂಡರ್​ ದರವನ್ನು ಹೆಚ್ಚಿಸಿದೆ.

ದೇಶೀಯ ಬಳಕೆಯ 14.2 ಕೆಜಿ ಎಲ್​ಪಿಜಿ ಸಿಲಿಂಡರ್ ಬೆಲೆಯನ್ನು 50 ರೂಪಾಯಿ ಹೆಚ್ಚಿಸಲಾಗಿದೆ. 5 ಕೆಜಿ ಸಿಲಿಂಡರ್​ ಬೆಲೆಯನ್ನು 18 ರೂಪಾಯಿ ಏರಿಸಲಾಗಿದೆ. ಅದೇ ರೀತಿ 19 ಕೆಜಿ ಸಿಲಿಂಡರ್​ ದರವನ್ನು 36.50 ರೂಪಾಯಿ ಹೆಚ್ಚಳ ಮಾಡಲಾಗಿದೆ.

ಬೆಲೆ ಹೆಚ್ಚಳದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಬ್ಸಿಡಿ ರಹಿತ 14.2 ಕೆಜಿ ಸಿಲಿಂಡರ್​ ಬೆಲೆ ಈಗ 644 ರೂಪಾಯಿಯಾಗಿದೆ. ಹಾಗೆಯೇ ಕೋಲ್ಕತದಲ್ಲಿ 670.50 ರೂ, ಮುಂಬೈನಲ್ಲಿ 644 ಮತ್ತು ಚೆನ್ನೈನಲ್ಲಿ 660 ರೂ.ನಷ್ಟಾಗಿದೆ. ಬೆಲೆ ಹೆಚ್ಚಳಕ್ಕೂ ಮೊದಲು, ದೆಹಲಿಯಲ್ಲಿ 594 ರೂ., ಕೋಲ್ಕತ್ತಾದಲ್ಲಿ 620.50 ರೂ., ಮುಂಬೈನಲ್ಲಿ 594 ಮತ್ತು ಚೆನ್ನೈನಲ್ಲಿ 610 ರೂ.ಗೆ ಸಿಲಿಂಡರ್​ ಮಾರಾಟ ಮಾಡಲಾಗುತ್ತಿತ್ತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top