Connect with us

Dvgsuddi Kannada | online news portal | Kannada news online

ಅಮೆರಿಕ ಅಧ್ಯಕ್ಷೀಯ ಚುನಾವಣೆ; ಜೋ ಬೈಡೆನ್​ ಗೆಲುವು ಅಧಿಕೃತವಾಗಿ ಘೋಷಿಸಿದ ಚುನಾವಣೆ ಆಯೋಗ

ಅಂತರಾಷ್ಟ್ರೀಯ ಸುದ್ದಿ

ಅಮೆರಿಕ ಅಧ್ಯಕ್ಷೀಯ ಚುನಾವಣೆ; ಜೋ ಬೈಡೆನ್​ ಗೆಲುವು ಅಧಿಕೃತವಾಗಿ ಘೋಷಿಸಿದ ಚುನಾವಣೆ ಆಯೋಗ

 ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಬಂದು ತಿಂಗಳು ಕಳೆದರೂ, ಜೋ ಬೈಡೆನ್​ ಗೆಲು ಸಾಧಿಸಿದ್ದರೂ,  ಡೊನಾಲ್ಡ್​ ಟ್ರಂಪ್​ ಸೋಲು ಒಪ್ಪಿಕೊಂಡಿರಲಿಲ್ಲ. ಇನ್ನು ಅವರ ಅಧಿಕಾರಾವಧಿ ತಿಂಗಳು ಮಾತ್ರವಿದ್ದು, ನಂತರವೂ ತಾವೇ ಅಧ್ಯಕ್ಷರು ಎಂದು ಹೇಳುತ್ತಿದ್ದರು.

ಈ ಬಗ್ಗೆ  ಟ್ರಂಪ್​ ಕೋರ್ಟ್​ ಮೆಟ್ಟಿಲೇರಿದ್ದರು.  ತಮಗೆ ಸಂದೇಹವಿದ್ದ ಅನೇಕ ಕಡೆಗಳಲ್ಲಿ ಮರು ಎಣಿಕೆಯನ್ನು ಮಾಡಿಸಿದ್ದರು.  ಇವೆಲ್ಲವೂ ಮುಗಿದ ಮೇಲೆ ಇದೀಗ ಅಮೆರಿಕದ ಚುನಾವಣಾ ಆಯೋಗ (ಎಲೆಕ್ಟೊರಲ್ ಕಾಲೇಜ್​) ವಿಜೇತರನ್ನು ಘೋಷಣೆ ಮಾಡಿದೆ. ಅದರ ಪ್ರಕಾರ ಜೋ ಬೈಡೆನ್​  ಅವರೇ ಗೆಲುವು ಸಾಧಿಸಿರುವುದು ಎಂದು ಖಚಿತಪಡಿಸಿದೆ.

ಈ ಮೂಲಕ ಅಮೆರಿಕ ಅಧ್ಯಕ್ಷ ಹುದ್ದೆಯನ್ನು ಜೋ ಬೈಡೆನ್ ಅಲಂಕರಿಸಲಿರುವುದು ಕೊನೆಗೂ ನಿಶ್ವಿತವಾಗಿದೆ. 538 ಸದಸ್ಯರ ಎಲೆಕ್ಟೊರಲ್ ಕಾಲೇಜ್, ಬೈಡೆನ್ ತಮ್ಮ ಗೆಲುವಿಗೆ ಬೇಕಾದ 270 ಸ್ಥಾನಗಳಿಗೂ ಹೆಚ್ಚು ಮತಗಳನ್ನು ಪಡೆದು ಶ್ವೇತಭವನ ಪ್ರವೇಶದ ಅಂತಿಮ ಹಂತಕ್ಕೆ ತಲುಪಿದ್ದಾರೆ ಎಂದು ತಿಳಿಸಿದೆ. ಬೈಡೆನ್-ಹ್ಯಾರಿಸ್ 306 ಎಲೆಕ್ಟೊರಲ್ ಮತಗಳನ್ನು ಪಡೆದಿದ್ದಾರೆ.

ನವಂಬರ್ 3ರಂದು ನಡೆದ ಚುನಾವಣೆಯಲ್ಲಿ 81 ದಶಲಕ್ಷದಷ್ಟು ದಾಖಲೆ ಸಂಖ್ಯೆಯ ಮತಗಳನ್ನು ಪಡೆದಿದ್ದಾರೆ ಜೋ ಬೈಡನ್- ಕಮಲಾ ಹ್ಯಾರಿಸ ಪಡೆದಿದ್ದಾರೆ.  ಇದು ಅಮೆರಿಕದ ಇತಿಹಾಸದಲ್ಲೇ ಹೊಸ ದಾಖಲೆಯಾಗಿದೆ.ಈ ನಡುವೆಯೇ ಟ್ರಂಪ್​ಗೆ ತಿರುಗೇಟು ನೀಡಿರುವ ಬೈಡೆನ್​, ಅಮೆರಿಕದ ಹೊಸ ಅಧ್ಯಾಯ ತೆರೆಯಲು ಸಕಾಲವಿದು. ನನ್ನ ಗೆಲುವಿನ ಬಗ್ಗೆ ಯಾರಿಗಾದರೂ ಅನುಮಾನವಿದ್ದರೆ, ಅವರು ತಮ್ಮ ಸಂಶಯಗಳನ್ನು ಈಗ ಬಗೆಹರಿಸಿಕೊಂಡಿರಬಹುದು ಎಂದಿದ್ದಾರೆ.

 

Continue Reading
Advertisement
You may also like...

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

Advertisement

ದಾವಣಗೆರೆ

Advertisement
To Top