Connect with us

Dvgsuddi Kannada | online news portal | Kannada news online

ಕೊನೆಗೂ ಕೊರೊನಾಗೆ ಸಿಕ್ಕೇ ಬಿಡ್ತು ಲಸಿಕೆ..!

ಅಂತರಾಷ್ಟ್ರೀಯ ಸುದ್ದಿ

ಕೊನೆಗೂ ಕೊರೊನಾಗೆ ಸಿಕ್ಕೇ ಬಿಡ್ತು ಲಸಿಕೆ..!

ಲಂಡನ್: ಕೊನೆಗೂ ಕೊರೊನಾಗೆ ಲಸಿಕೆ ಸಿಕ್ಕಿದೆ. ಶೇ. 95ರಷ್ಟು ಗುಣಪಡಿಸುವಂತ ಫೈಜರ್ ಲಸಿಕೆ ಬಳಕೆಗೆ ಇಂಗ್ಲೆಂಡ್  ನಲ್ಲಿ ಅನುಮತಿ ನೀಡಿದೆ.  ಈ ಮೂಲಕ ಕೊರೊನಾ ಲಸಿಕೆ ಕಂಡು ಹಿಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಇಂಗ್ಲೆಂಡ್  ಪಾತ್ರವಾಗಿದೆ.

ಮುಂದಿನ ವಾರದಿಂದ ಫಿಜರ್-ಬಯೋಎನ್ ಟೆಕ್ ಲಸಿಕೆಯನ್ನು ಯುನೈಟೆಡ್ ಕಿಂಗ್ ಡಮ್ ಅನುಮೋದಿಸಿದೆ ಎಂಬುದಾಗಿ ತಿಳಿದು ಬಂದಿದೆ. ಇದರೊಂದಿಗೆ, UK ಯು ಫಿಜರ್ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶವಾಗಿ ಮತ್ತು COVID-19 ವಿರುದ್ಧ ಲಸಿಕೆಯನ್ನು ಅನುಮೋದಿಸಿದ ಮೊದಲ ದೇಶವಾಗಿದೆ.

ಫಿಜರ್ ಇಂಕ್ ಮತ್ತು ಬಯೋನ್ ಟೆಕ್ ಮಂಗಳವಾರ, ತಮ್ಮ COVID-19 ಲಸಿಕೆಯನ್ನು ಷರತ್ತುಬದ್ಧ ದೃಢೀಕರಣಕ್ಕಾಗಿ ಯುರೋಪಿಯನ್ ಔಷಧಗಳ ನಿಯಂತ್ರಕಕ್ಕೆ ಅರ್ಜಿ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.ಅಂದಹಾಗೇ ನವೆಂಬರ್ 18ರಂದು ಅಂತಿಮ ಪ್ರಯೋಗ ಫಲಿತಾಂಶದಲ್ಲಿ ಯಶಸ್ಸು ಕಂಡಂತ ಯುನೈಟೆಡ್ ಸ್ಟೇಟ್ಸ್ ನ ಫೈಜರ್ ಮತ್ತು ಜರ್ಮನಿಯ ಬಯೋಎನ್ ಟೆಕ್, ಫೈಜರ್ ಲಸಿಕೆ, ಕೊರೋನಾ ಸೋಂಕಿತರನ್ನು ಶೇ.95ರಷ್ಟು ಗುಣಪಡಿಸಲಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

To Top