Connect with us

Dvgsuddi Kannada | online news portal | Kannada news online

ಭಾರತ ಮೂಲದ ರಿಶಿ ಸುನಕ್ ಇಂಗ್ಲೆಂಡ್ ನೂತನ ಪ್ರಧಾನಿ

ಅಂತರಾಷ್ಟ್ರೀಯ ಸುದ್ದಿ

ಭಾರತ ಮೂಲದ ರಿಶಿ ಸುನಕ್ ಇಂಗ್ಲೆಂಡ್ ನೂತನ ಪ್ರಧಾನಿ

ಲಂಡನ್‌: ರಿಶಿ ಸುನಕ್ ಅವರು ಯುನೈಟೆಡ್ ಕಿಂಗ್ಡಮ್ ( ಇಂಗ್ಲೆಂಡ್) ನ ಪ್ರಧಾನಿಯಾಗಿ ಮತ್ತು ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ಇಂದು (ಅ.24) ಆಯ್ಕೆ ಮಾಡಲಾಗಿದೆ. ಈ ಮೂಲಕ ಭಾರತ ಮೂಲದ ರಿಶಿ ಸುನಕ್ ಇಂಗ್ಲೆಂಡ್ ಪ್ರಧಾನಿಯಾದಂತಾಗಿದೆ.

ರುಶಿ ಅವರು 198 ಸಂಸದರ ಬೆಂಬಲ ಪಡೆದರು. ಪ್ರತಿಸ್ಪರ್ಧಿ ಪೆನ್ನಿ ಮೊರ್ಡಾಂಟ್ ಅವರು 28 ಸಂಸದರ ಬೆಂಬಲವನ್ನು ಗಳಿಸಲು ಶಕ್ತರಾದರು. ಪೆನ್ನಿ ಮೊರ್ಡೌಂಟ್ ಟ್ವೀಟ್ನಲ್ಲಿ ತಾನು ರೇಸ್ ನಿಂದ ಹೊರಗುಳಿಯುತ್ತಿದ್ದೇನೆ ಮತ್ತು ಯುಕೆ ಪ್ರಧಾನಿಯಾಗಿ ಸುನಕ್ ಅವರನ್ನು ಬೆಂಬಲಿಸುತ್ತಿದ್ದೇನೆ ಎಂದು ಘೋಷಿಸಿದರು. ಸುನಕ್ ಯುಕೆಯ 57 ನೇ ಪ್ರಧಾನ ಮಂತ್ರಿ ಮತ್ತು ದೇಶವನ್ನು ಮುನ್ನಡೆಸಲಿದ್ದು, ಅವರು ಯುಕೆಯ ಮೊದಲ ಪ್ರಧಾನ ಮಂತ್ರಿಯಾಗಿದ್ದಾರೆ.

ರಿಷಿ ಸುನಕ್ 2015ರಲ್ಲಿ ರಿಷಿ ಬ್ರಿಟನ್ ಸಂಸತ್ತನ್ನ ಪ್ರವೇಶಿಸಿದರು. 2020ರಲ್ಲಿ ಬ್ರಿಟನ್ ಸಚಿವ ಸಂಪುಟದ ಪ್ರಮುಖ ಹುದ್ದೆಗಳಲ್ಲಿ ಒಂದಾದ ಹಣಕಾಸು ಸಚಿವರಾಗಿದ್ದರು. ಸುನಕ್‌ ಈ ಹುದ್ದೆಗೇರಿದ ಭಾರತ ಮೂಲದ ಮೊದಲ ವ್ಯಕ್ತಿಯಾಗಿದ್ದಾರೆ. ಇನ್ನು ಪ್ರತಿಷ್ಠಿತ ವಿಂಚೆಸ್ಟರ್‌ ಕಾಲೇಜಿನಲ್ಲಿ ಅಧ್ಯಯನ ನಡೆಸಿರುವ ಸುನಕ್‌, ಆಕ್ಸ್‌ಫರ್ಡ್‌ ವಿವಿಯಲ್ಲಿ ರಾಜಕೀಯ, ಫಿಲಾಸಫಿ ಮತ್ತು ಅರ್ಥಶಾಸ್ತ್ರದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿದ್ದಾರೆ. ಅಮೆರಿಕಾ ಸ್ಟಾನ್‌ಫರ್ಡ್‌ ವಿವಿಯಿಂದ ಎಂಬಿಎ ಪದವಿಯನ್ನೂ ಪಡೆದುಕೊಂಡಿದ್ದಾರೆ.

ಸುನಕ್‌ ತಂದೆ ವೈದ್ಯರಾಗಿದ್ದು, ತಾಯಿ ರಾಸಾಯನಿಕ ವಸ್ತುಗಳ ಅಂಗಡಿ ನಡೆಸುತ್ತಿದ್ದರು. ಇನ್ನು ರಿಷಿ ಇನ್ಫೋಸಿಸ್ ನಾರಾಣಮೂರ್ತಿ ಅಳಿಯ. ನಾರಾಯಣ ಮೂರ್ತಿ ಮಗಳು ಅಕ್ಷತಾರನ್ನ ವಿವಾಹವಾಗಿ ಬ್ರಿಟನ್‌ನಲ್ಲಿ ನೆಲೆಸಿದ್ದಾರೆ. ಇವರಿಗೆ ಕೃಷ್ಣ ಮತ್ತು ಅನುಷ್ಕಾ ಎಂಬ ಇಬ್ಬರು ಮಕ್ಕಳಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಅಂತರಾಷ್ಟ್ರೀಯ ಸುದ್ದಿ

Advertisement

ದಾವಣಗೆರೆ

Advertisement
To Top