Connect with us

Dvgsuddi Kannada | online news portal | Kannada news online

ನ್ಯಾಯಾಲಯದಲ್ಲಿ ಖಾಲಿ ಇರುವ  45 ಜವಾನ ಹುದ್ದೆ ಸೇರಿ 59 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

ನ್ಯಾಯಾಲಯದಲ್ಲಿ ಖಾಲಿ ಇರುವ  45 ಜವಾನ ಹುದ್ದೆ ಸೇರಿ 59 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಮೈಸೂರು: ಮೈಸೂರು ಜಿಲ್ಲಾ ನ್ಯಾಯಾಲಯದ  ಅಧಿಕೃತ ಅಧಿಸೂಚನೆ ಏಪ್ರಿಲ್ 2023 ರ ಮೂಲಕ ಜವಾನ ( ಪ್ಯೂನ್), ಸ್ಟೆನೋಗ್ರಾಫರ್, ಟೈಪಿಸ್ಟ್  ಸೇರಿ ಪಟ್ಟು 59 ಹುದ್ದೆ ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ  ಮೈಸೂರು ಇಕೋರ್ಟ್  ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 04-Jul-2023ರೊಳಗೆ ವೆಬ್ ಸೈಟ್  districts.ecourts.gov.in  ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು

  • ಹುದ್ದೆ ವಿವರ:
  • ಹುದ್ದೆಗಳ ಸಂಖ್ಯೆ: 59
  • ಉದ್ಯೋಗ ಸ್ಥಳ: ಮೈಸೂರು – ಕರ್ನಾಟಕ
  • ಹುದ್ದೆಯ ಹೆಸರು: ಪ್ಯೂನ್, ಸ್ಟೆನೋಗ್ರಾಫರ್, ಟೈಪಿಸ್ಟ್
  • ವೇತನ: ರೂ.17000-52650/- ಪ್ರತಿ ತಿಂಗಳು
  • ಪ್ಯೂನ್- 45
  • ಟೈಪಿಸ್ಟ್- 3

 ಅರ್ಹತೆ: ಪ್ಯೂನ್- 10 ನೇ ತರಗತಿ, ಟೈಪಿಸ್ಟ್- ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್,  ಸ್ಟೆನೋಗ್ರಾಫರ್ ಗ್ರೇಡ್-III- ಪಿಯುಸಿ, ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ವಯೋಮಿತಿ: ಮೈಸೂರು ಇಕೋರ್ಟ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 04-Jul-2023 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು. ವಯೋಮಿತಿ ಸಡಿಲಿಕೆ: SC/ST/Cat-I ಅಭ್ಯರ್ಥಿಗಳು: 05 ವರ್ಷಗಳು, Cat-2A/2B/3A & 3B ಅಭ್ಯರ್ಥಿಗಳು: 03 ವರ್ಷಗಳು, PH/ವಿಧವೆ ಅಭ್ಯರ್ಥಿಗಳು: 10 ವರ್ಷಗಳು

ಅರ್ಜಿ ಶುಲ್ಕ: ಪ್ಯೂನ್ ಹುದ್ದೆಗಳಿಗೆ: SC/ST/Cat-I & PH ಅಭ್ಯರ್ಥಿಗಳು: ಇಲ್ಲ,  -2A/2B/3A & 3B ಅಭ್ಯರ್ಥಿಗಳು: ರೂ.100/-, ಸಾಮಾನ್ಯ ಅಭ್ಯರ್ಥಿಗಳು: ರೂ.200/- ಟೈಪಿಸ್ಟ್ ಹುದ್ದೆಗಳಿಗೆ:  PH ಅಭ್ಯರ್ಥಿಗಳು: ಇಲ್ಲ,  -, 2A/2B/3A & 3B ಅಭ್ಯರ್ಥಿಗಳು ರೂ.150, ಸಾಮಾನ್ಯ ಅಭ್ಯರ್ಥಿಗಳು: ರೂ.300/ ಸ್ಟೆನೋಗ್ರಾಫರ್ ಹುದ್ದೆಗಳಿಗೆ : SC/ST/Cat-I & PH ಅಭ್ಯರ್ಥಿಗಳು: ಇಲ್ಲ, 2A/2B/3A & 3B ಅಭ್ಯರ್ಥಿಗಳು: ರೂ.150/, ಸಾಮಾನ್ಯ ಅಭ್ಯರ್ಥಿಗಳು: ರೂ.300/-, ಪಾವತಿ ವಿಧಾನ: ಆನ್‌ಲೈನ್/ಚಲನ್, ಆಯ್ಕೆ ಪ್ರಕ್ರಿಯೆ: ಮೆರಿಟ್ ಪಟ್ಟಿ, ಟೈಪಿಂಗ್ ಪರೀಕ್ಷೆ ಮತ್ತು ಸಂದರ್ಶನ.

ಮೈಸೂರು ಜಿಲ್ಲಾ ನ್ಯಾಯಾಲಯದ ವೇತನ ವಿವರ : ಪ್ಯೂನ್ ರೂ.17000-28950/-, ಬೆರಳಚ್ಚುಗಾರ ರೂ.21400-42000/-, ಸ್ಟೆನೋಗ್ರಾಫರ್ ಗ್ರೇಡ್-III ರೂ.27650-52650/. ಪ್ರಮುಖ ದಿನ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಾರಂಭ: 05-06-2023, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನ: 04-ಜುಲೈ-2023, ಚಲನ್ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಲು ಕೊನೆಯ ದಿನ :08-ಜುಲೈ-2023, ಅಧಿಕೃತ ವೆಬ್‌ಸೈಟ್: districts.ecourts.gov.in.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top