Connect with us

Dvgsuddi Kannada | online news portal | Kannada news online

ಜಗಳೂರು ಎಚ್‌. ಪಿ.‌ ರಾಜೇಶ್, ಹರಪನಹಳ್ಳಿ ಲತಾ ಮಲ್ಲಿಕಾರ್ಜುನ, ಮಾಯಕೊಂಡ ಸವಿತಾ ಸೇರಿ 24 ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷ ಉಚ್ಚಾಟನೆ

ಪ್ರಮುಖ ಸುದ್ದಿ

ಜಗಳೂರು ಎಚ್‌. ಪಿ.‌ ರಾಜೇಶ್, ಹರಪನಹಳ್ಳಿ ಲತಾ ಮಲ್ಲಿಕಾರ್ಜುನ, ಮಾಯಕೊಂಡ ಸವಿತಾ ಸೇರಿ 24 ನಾಯಕರನ್ನು ಕಾಂಗ್ರೆಸ್ ಪಕ್ಷದಿಂದ 6 ವರ್ಷ ಉಚ್ಚಾಟನೆ

ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಕಾರಣಕ್ಕೆ ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಕಣಕ್ಕಿಳಿದ ದಾವಣಗೆರೆ ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ಎಚ್‌.ಪಿ. ರಾಜೇಶ್‌,ಸವಿತಾ ಮಲ್ಲೇಶ್‌ ನಾಯ್ಕ್ (ಮಾಯಕೊಂಡ), ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ (ಹರಪನಹಳ್ಳಿ), ಮಾಜಿ ಶಾಸಕರಾದ ರಾಮಕೃಷ್ಣ ದೊಡ್ಡಮನಿ (ಶಿರಹಟ್ಟಿ), ಬಿ.ಬಿ. ರಾಮಸ್ವಾಮಿಗೌಡ (ಕುಣಿಗಲ್‌), ಸೇರಿ 24 ಅಭ್ಯರ್ಥಿಗಳನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಆರು ವರ್ಷಗಳ ಕಾಲ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಉಚ್ಚಾಟಿಸಿದೆ.

ಜಗಳೂರಿನಲ್ಲಿ ಎಚ್‌.ಪಿ. ರಾಜೇಶ್‌, ಕೆ.ಪಿ. ಪಾಲಯ್ಯ ಮತ್ತು ಬಿ. ದೇವೇಂದ್ರಪ್ಪ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿತ್ತು. ದೇವೇಂದ್ರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್‌ ಘೋಷಣೆಯಾಗುತ್ತಿದ್ದಂತೆ ರಾಜೇಶ್ ತನ್ನ ಬೆಂಬಲಿಗರ ಸಭೆ ಕರೆದು ಪಕ್ಷೇತರನಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಹೀಗಾಗಿ ಪಕ್ಷೇತ್ರವಾಗಿ ಸ್ಪರ್ಧಿಸಿ ಕಾಂಗ್ರೆಸ್ ಗೆ ಬಂಡಾಯ ಬಿಸಿ‌ ಮುಟ್ಟಿಸಿದ್ದರು. ಇನ್ನೂ ಸವಿತಾ ಮಲ್ಲೇಶ್‌ ನಾಯ್ಕ್ ಕಾಂಗೆಸ್ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಸಾರಿದ್ದರು. ಹಾಗೆಯೇ ಹರಪನಹಳ್ಳಿಯಲ್ಲಿ ಲತಾ ಮಲ್ಲಿಕಾರ್ಜುನ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರೂ, ಟಿಕೆಟ್ ಸಿಕ್ಕಿರಲಿಲ್ಲ.‌ ಹೀಗಾಗಿ ಪಕ್ಷೇತರ ವಾಗಿ ಸ್ಪರ್ಧಿಸಿದ್ದಾರೆ.

ಉಚ್ಚಾಟನೆಗೊಂಡವರು: ನಾಯಕ ಕೃಷ್ಣೇಗೌಡ (ಅರಕಲಗೂಡು), ಕೆಪಿಸಿಸಿ ಸಂಯೋಜಕ ಚಂದ್ರಾ ಸಿಂಗ್‌ (ಬೀದರ್‌ ದಕ್ಷಿಣ), ಚಿಕ್ಕಮಗಳೂರು ಡಿಸಿಸಿ ಉಪಾಧ್ಯಕ್ಷ ಗೋಪಿಕೃಷ್ಣ (ತರೀಕೆರೆ), ಬೆಳಗಾವಿ ಯುವ ಕಾಂಗ್ರೆಸ್‌ ಮುಖಂಡ ಇರ್ಫಾನ್‌ ತಾಳಿಕೋಟೆ (ಖಾನಾಪುರ), ಕಿಸಾನ್‌ ಸೆಲ್‌ ಉಪಾಧ್ಯಕ್ಷ ಪದ್ಮಜಿತ್‌ ನಾಡಗೌಡ (ತೇರದಾಳ‌), ಬಸವರಾಜ್‌ ಮಲ್ಕಾರಿ ( ಹುಬ್ಬಳ್ಳಿ-ಧಾರವಾಡ ಪಶ್ಚಿಮ), ಉಮಾದೇವಿ (ನೆಲಮಂಗಲ), ಯೂಸುಫ್‌ ಅಲಿ ಜಾಮದಾರ್‌ (ಬೀದರ್‌ ದಕ್ಷಿಣ), ನಾರಾಯಣ ಬಂಗಿ (ಬೀದರ್‌ ದಕ್ಷಿಣ), ವಿಜಯಕುಮಾರ್‌ ಬರೂರು (ಬೀದರ್‌ ದಕ್ಷಿಣ), ಪಿ.ಎಚ್. ಚಂದ್ರಶೇಖರ್‌ (ಶ್ರೀರಂಗಪಟ್ಟಣ), ಪುಟ್ಟ ಆಂಜನಪ್ಪ (ಶಿಡ್ಲಘಟ್ಟ), ಶಂಭು ಕೋಲ್ಕರ್‌ (ರಾಯಬಾಗ ) ಎಚ್‌. ಭೀಮಪ್ಪ (ಶಿವಮೊಗ್ಗ ಗ್ರಾಮಾಂತರ), ಎಸ್‌.ಪಿ. ನಾಗರಾಜಗೌಡ (ಶಿಕಾರಿಪುರ), ದೋರ್ನಲ್ ಪರಮೇಶ್ವರಪ್ಪ (ತರೀಕೆರೆ), ಶಶಿ ಚೌಧಿ (ಬೀದರ್‌), ಲಕ್ಷ್ಮಣ ಸೊರಳಿ (ಔರಾದ್), ಮುಜೀಬುದ್ದೀನ್‌ (ರಾಯಚೂರು ನಗರ).

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top