Connect with us

Dvgsuddi Kannada | online news portal | Kannada news online

ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚಾರಣೆ: 5 ಲಕ್ಷ ಮೌಲ್ಯದ ಮಾದಕ ಅಫೀಮ್ ವಶ

ಕ್ರೈಂ ಸುದ್ದಿ

ಅಬಕಾರಿ ಪೊಲೀಸರ ಭರ್ಜರಿ ಕಾರ್ಯಾಚಾರಣೆ: 5 ಲಕ್ಷ ಮೌಲ್ಯದ ಮಾದಕ ಅಫೀಮ್ ವಶ

 ಡಿವಿಜಿ ಸುದ್ದಿ, ವಿಜಯಪುರ:  ಅಬಕಾರಿ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿದ್ದು, 5 ಲಕ್ಷ ಮೌಲ್ಯದ ಮಾದಕ ದ್ರವ್ಯ ಅಫೀಮ್  ವಶ  ಪಡಿಸಿಕೊಂಡಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರದ ವಿಜಯಪುರ ಜಿಲ್ಲೆಯ ಗಡಿ ಶಿರಾಡೋಣ ಗ್ರಾಮದ ಹತ್ತಿರ ರಾಜಸ್ಥಾನಕ್ಕೆ ಸೇರಿದ ಲಾರಿಯಲ್ಲಿ ಸಾಗಿಸಲಾಗುತ್ತಿದ್ದ ಅಫೀಮ್  ವಶಕ್ಕೆ ಪಡೆಯಲಾಗಿದೆ. ಇನ್ನೂ 12.50 ಕೆಜೆ ಅಫೀಮು ಪುಡಿ ವಶಕ್ಕೆ ಪಡೆದಿದ್ದಾರೆ, ಲಾರಿ ಚಾಲಕ ಸತೀಶ್ ಚೌಧರಿಯನ್ನು ಬಂಧಿಸಲಾಗಿದೆ. ಜೊತೆಗೆ 5 ಲಕ್ಷ ಮೌಲ್ಯದ ಅಫೀಮು ಮತ್ತು 25 ಲಕ್ಷ ಮೌಲ್ಯದ ಲಾರಿಯನ್ನು ವಶಕ್ಕೆ ಪಡೆಯಲಾಗಿದೆ.

ವಿಜಯಪುರ ಅಬಕಾರಿ ಡಿಸಿ ಕೆ.ಅರುಣ್‍ಕುಮಾರ್ ಮಾತನಾಡಿದ್ದು, ವಿಜಯಪುರದ ಮೂಲಕ ಬೆಂಗಳೂರಿಗೆ ಅಫೀಮನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ರಾಜಸ್ಥಾನ-ಮಧ್ಯಪ್ರದೇಶದ ಅಧಿಕಾರಿಗಳಿಗೆ ಈ ಬಗ್ಗೆ ಪತ್ರ ಬರೆಯಲಾಗುವುದು. ಅಲ್ಲಿಯೂ ತನಿಖೆ ನಡೆಸುವಂತೆ ಕೋರಲಾಗುವುದು. ಜೊತೆಗೆ ಬೆಂಗಳೂರಿನಲ್ಲಿಯೂ ತನಿಖೆ ನಡೆಸಲು ಶಿಫಾರಸು ಮಾಡಲಾಗಿದೆ ಎಂದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top
(adsbygoogle = window.adsbygoogle || []).push({});