Connect with us

Dvgsuddi Kannada | online news portal | Kannada news online

ದೀಪಾಳಿ ಹಬ್ಬಕ್ಕೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ; ದೇಶದಲ್ಲಿ 400 ವಿಶೇಷ ರೈಲು ಸಂಚಾರ..!

ರಾಷ್ಟ್ರ ಸುದ್ದಿ

ದೀಪಾಳಿ ಹಬ್ಬಕ್ಕೆ ರೈಲ್ವೆ ಇಲಾಖೆಯಿಂದ ಸಿಹಿ ಸುದ್ದಿ; ದೇಶದಲ್ಲಿ 400 ವಿಶೇಷ ರೈಲು ಸಂಚಾರ..!

ನವದೆಹಲಿ : ದೀಪಾವಳಿ ಹಬ್ಬಕ್ಕೆ ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, 400 ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಈ ಮೂಲಕ ದೇಶದಲ್ಲಿ ಹಬ್ಬದ ವೇಳೆ 400 ಹೊಸ ವಿಶೇಷ ರೈಲುಗಳನ್ನು ಓಡಾಟ ನಡೆಸಲಿವೆ. ಈ  ವೇಳಾಪಟ್ಟಿ, ಟಿಕೆಟ್ ಲಭ್ಯತೆ ಮತ್ತು ಪ್ರಯಾಣ ಮಾರ್ಗದರ್ಶಿ ಸೂತ್ರಗಳಿಗೆ ಸಂಬಂಧಿಸಿದಂತೆ ಭಾರತೀಯ ರೈಲ್ವೆ  ಇಲಾಖೆ ಎಲ್ಲ ವಿಭಾಗಕ್ಕೆ ನೋಟಿಸ್ ನೀಡಿದೆ.

ಪ್ರಯಾಣಿಕರು ಮುಂಗಡ ವಾಗಿ ಮುಂಗಡ ವಾಗಿ ಸೀಟು ಕಾಯ್ದಿರಿಸಬೇಕೆಂದು ಉತ್ತರ ರೈಲ್ವೆ ಮನವಿ ಮಾಡಿದೆ. ಈ ವಿಶೇಷ ರೈಲುಗಳಲ್ಲಿ ಮೀಸಲು ದರ್ಜೆಯ ಬೋಗಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಹೇಳಲಾಗಿತ್ತು. ರೈಲ್ವೆ ಇಲಾಖೆ ಹೊರಡಿಸಿರುವ ನೋಟಿಸ್ ನಲ್ಲಿ, ಕಾಯ್ದಿರಿಸಿಟಿಕೆಟ್ ಇಲ್ಲದೆ, ಪ್ಲಾಟ್ ಫಾರಂಗಳಲ್ಲಿ ಪ್ರಯಾಣಿಕನಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಲಾಗಿದೆ.

ಈ ವಿಶೇಷ ರೈಲುಗಳು ದೀಪಾವಳಿ ಮತ್ತು ಛತ್ ಹಬ್ಬಗಳ ಸಂದರ್ಭದಲ್ಲಿ, ಪ್ರಯಾಣಿಕರ ಅನುಕೂಲಕ್ಕಾಗಿ ಹಲವಾರು ಪೂಜಾ ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಈ ಸರಣಿಯಲ್ಲಿ, ಪೂರ್ವ ಮಧ್ಯ ರೈಲ್ವೆಯು ನವೆಂಬರ್ 10 ರಿಂದ ಡಿಸೆಂಬರ್ 2ರವರೆಗೆ ಆರು ಪೂಜಾ ವಿಶೇಷ ರೈಲುಗಳನ್ನು ಓಡಿಸಲಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

Advertisement

ದಾವಣಗೆರೆ

Advertisement
To Top