Connect with us

Dvgsuddi Kannada | online news portal | Kannada news online

ದಾವಣಗೆರೆ; ಅನುದಾನಿತ ಶ್ರೀ ಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ 4 ಸಹ ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ; ಅನುದಾನಿತ ಶ್ರೀ ಲಿಂಗೇಶ್ವರ ವಿದ್ಯಾಸಂಸ್ಥೆಯಲ್ಲಿ ಖಾಲಿ ಇರುವ 4 ಸಹ ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ; ಶ್ರೀ ಲಿಂಗೇಶ್ವರ ವಿದ್ಯಾಸಂಸ್ಥೆ (ರಿ.) ಆಶ್ರಯದ ಶ್ರೀ ಲಿಂಗೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಕಂದಗಲ್ಲು & ತೋಳಹುಣಸೆಯ ಅನುದಾನಕ್ಕೆ ಒಳಪಟ್ಟ ಸದರಿ ಶಾಲೆಗಳಲ್ಲಿ ಖಾಲಿ ಇರುವ ನಾಲ್ಕು ಸಹ ಶಿಕ್ಷಕರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಿದೆ.

ಮರಣ ಹೊಂದಿದ 1‌ ಹುದ್ದೆ, ನಿವೃತ್ತಿ ಹೊಂದಿರು 3 ಹುದ್ದೆ ಸೇರಿ ತೆರವಾದ 4 ಸಹ ಶಿಕ್ಷಕರ ಹುದ್ದೆಗೆ ಆಡಳಿತ ಮಂಡಳಿಯು ಇಲಾಖೆಯ ರೋಸ್ಟರ್ ಪದ್ಧತಿಯಂತೆ ಹುದ್ದೆಗಳನ್ನು ಭರ್ತಿ ಮಾಡಲು ತೀರ್ಮಾನಿಸಿದ್ದು, ಅರ್ಜಿಯನ್ನು ಕರೆಯಲಾಗಿದೆ. ಮೂಲ ದಾಖಲಾತಿಯೊಂದಿಗೆ ಆಡಳಿತಾಧಿಕಾರಿಗಳು, ಶ್ರೀ ಲಿಂಗೇಶ್ವರ ಹಿ.ಪ್ರಾ.ಶಾಲೆ, ಕಂದಗಲ್ಲು (P), ದಾವಣಗೆರೆ (ತಾ.ಜಿ.) 577 514 ಈ ವಿಳಾಸಕ್ಕೆ ಪತ್ರಿಕಾ ಪ್ರಕಟಣೆಯಾದ 21 ದಿನಗಳೊಳಗಾಗಿ ಅರ್ಜಿಯನ್ನು ಸಲ್ಲಿಸತಕ್ಕದ್ದು. ಸಂದರ್ಶನ ದಿನಾಂಕವನ್ನು ಮುಂದೆ ತಿಳಿಸಲಾಗುವುದು.

ಕಂದಗಲ್ಲು ಶಾಲೆಯಲ್ಲಿ 3 ಹುದ್ದೆ ಖಾಲಿದ್ದು, ಎಸ್ಸಿ ಮೀಸಲಾತಿಗೆ ಒ1 ಹುದ್ದೆ ಹಾಗೂ ಸಾಮಾನ್ಯ ಅಭ್ಯರ್ಥಿ ಗೆ 2 ಹುದ್ದೆ ಖಾಲಿ‌ ಇವೆ. ಇನ್ನೂ‌ಯಲ್ಲಿ ತೋಳಹುಣಸೆ ಯಲ್ಲಿ 1 ಹುದ್ದೆ ಖಾಲಿ ಇದೆ. ಈ ಹುದ್ದೆಗೆ ಡಿಇಡ್, ಬಿ.ಎ,ಬಿಇಡ್, ಬಿಎಸ್ಸಿ ಬಿಇಡ್ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ 9901768096 ಸಂಪರ್ಕಿಸಿ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top