Connect with us

Dvgsuddi Kannada | online news portal | Kannada news online

ದಾವಣಗೆರೆ: ನಾಳೆಯಿಂದ ಮೂರು ದಿನ ಶಿವಸಂಚಾರ ನಾಟಕೋತ್ಸವ

ದಾವಣಗೆರೆ

ದಾವಣಗೆರೆ: ನಾಳೆಯಿಂದ ಮೂರು ದಿನ ಶಿವಸಂಚಾರ ನಾಟಕೋತ್ಸವ

ದಾವಣಗೆರೆ: ಸ್ನೇಹ ಬಳಗ ವತಿಯಿಂದ ನಾಳೆಯಿಂದ (ಏ.26) ಮೂರು ದಿನ ನಗರದ ನೂತನ್ ಕಾಲೇಜ್ ಪಕ್ಕದಲ್ಲಿ ಶಿವಸಂಚಾರ ನಾಟಕೋತ್ಸವ ನಡೆಯಲಿದೆ ಎಂದು ಬಳಗದ ಸಂಚಾಲಕ ಹಾಗೂ ನಿವೃತ್ತ ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ ಕೊಟ್ರೇಶ್ ಹೇಳಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಏ.26ರಂದು ಸಂಜೆ 6 ಗಂಟೆಗೆ ನಾಟಕೋತ್ಸವನ್ನು ಶಾಸಕ ಶಾಮನೂರು ಶಿವಶಂಕರಪ್ಪ ಉದ್ಘಾಟಿಸುವರು. ಸಾಣೇಹಳ್ಳಿ ಪೀಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಾಗೂ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಲಿದ್ದಾರೆ.

ಶಾಸಕ ಎಸ್.ಎ ರವೀಂದ್ರನಾಥ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಪಾಲಿಕೆ ಸದಸ್ಯೆ ಗೀತಾ ದಿಳ್ಯೆಪ್ಪ ಮುಖ್ಯಾಅತಿಥಿಗಳಾಗಿ ಆಗಮಿಸಲಿದ್ದಾರೆ.ಅಂದು ಸಂಜೆ ಚಂದ್ರಶೇಖರ ತಾಳ್ಯ ರಚನೆಯ ಛಾಯಾ ಭಾರ್ಗವಿ ನಿರ್ದೇಶನದ ವಕ್ಕಲಿಗ ಮುದ್ದಣ್ಣ ನಾಟಕ ಪ್ರದರ್ಶನ ನಡೆಯಲಿದೆ.

ಏ.27 ರ ಸಂಜೆ 6ಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಹಾಗು ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಮಾಡಾಳು ವಿರೂಪಾಕ್ಷಪ್ಪ,ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸಿ.ಬಿ ರಿಷ್ಯಂತ್ ಭಾಗವಹಿಸಲಿದ್ದಾರೆ.ಇದೇ ವೇಳೆ ದೇಶದ ಅಭಿವೃದ್ಧಿಯಲ್ಲಿ ಯುವಕರ ಪಾತ್ರ ಕುರಿತು ನಿವೃತ್ತ ಅಧೀಕ್ಷಕ ಅಭಿಯಂತರರು ಹಾಗೂ ಸಮಾಜ ಸೇವಕರಾದ ಜಿ.ಎಸ್ ಉಮಾಪತಿ ಉಪನ್ಯಾಸ ನೀಡಲಿದ್ದಾರೆ.ಅಂದು ಸಂಜೆ ಲಿಂಗದೇವರು ಹಳೇಮನೆ ರಚನೆಯ ಜಗದೀಶ್ ಆರ್ ನಿರ್ದೇಶನದ ಗಡಿಯಂಕ ಕುಡಿ ಮುದ್ದ ನಾಟಕದ ಪ್ರದರ್ಶನ ನಡೆಯಲಿದೆ.

ಏ.28ರಂದು ಸಂಜೆ 6 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಜಿ.ಎಂ‌ಸಿದ್ದೇಶ್ವರ್,ಉದ್ಯಮಿಗಳಾದ ಎಸ್ ಎಸ್ ಬಕ್ಕೇಶ್,ಅಣಬೇರು ರಾಜಣ್ಣ,ಮಾಜಿ ಶಾಸಕ ಬಿ.ಪಿ ಹರೀಶ್,ಪಾಲಿಕೆ ಆಯುಕ್ತ ವಿಶ್ವನಾಥ್ ಮುದ್ದಜ್ಜಿ ಆಗಮಿಸಲಿದ್ದಾರೆ. ನಮ್ಮ ಕುಟುಂಬ ನಮ್ಮ ಸಂಸ್ಕೃತಿ ಕುರಿತು ಕುಟುಂಬ ಪ್ರಮೋದ್ ನ ಮುಖ್ಯಸ್ಥ ಕೆ.ಎಸ್ ರಮೇಶ್ ಉಪನ್ಯಾಸ ನೀಡಲಿದ್ಧಾರೆ.ನಂತರ ಬಿ.ಆರ್ ಹರಿಷಿಣಗೋಡಿ ರಚನೆಯ ವೈ.ಡಿ ಬಾದಾಮಿಯವರ ನಿರ್ದೇಶನದಲ್ಲಿ ಬಸ್ ಕಂಡಕ್ಟರ್ ನಾಟಕ ಜರುಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬೂದಿಹಾಳ್ ಶಿವಕುಮಾರ್, ಮುದೇಗೌಡ್ರ ವಿಶ್ವನಾಥ್, ರೇವಣಸಿದ್ದಪ್ಪ, ಮಲ್ಲೇಶ್, ಗುರುಸಿದ್ದಸ್ವಾಮಿ ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top