ದಾವಣಗೆರೆ: ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಗೆ ಜನರು ಬರುತ್ತಿಲ್ಲ. ಹಣ ಕೊಟ್ಟು ಕರೆತರುತ್ತಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಈ ಯಾತ್ರೆ ಭಾರತ್ ಜೋಡೋ ಅಲ್ಲ ಭಾರತ್ ತೋಡೋ ಯಾತ್ರೆ. ಕಾಶ್ಮೀರ ದಿಂದ ಕನ್ಯಾ ಕುಮಾರಿವರೆಗೂ ಜನರು ಗೋ ಬ್ಯಾಕ್ ಎಂದು ಅವರನ್ನು ಓಡಿಸುತ್ತಿದ್ದಾರೆ. ಜೋಡೋ ಯಾತ್ರೆ ಐಷಾರಾಮಿ ಯಾತ್ರೆಯಾಗಿದ್ದು ದಿನಕ್ಕೆ ಕೋಟ್ಯಾಂತರ ರೂಪಾಯಿ ವ್ಯಯ ಮಾಡುತ್ತಿದ್ದಾರೆ. ಈಗ ಇಷ್ಟೊಂದು ಹಣ ಖರ್ಚು ಮಾಡುತ್ತಿರುವ ರಾಹುಲ್ ಗಾಂಧಿ ಕೋವಿಡ್ ಸಂದರ್ಭದಲ್ಲಿ ಎಲ್ಲಿ ಹೋಗಿದ್ದರು ಎಂದರು.
ಸಿದ್ದರಾಮೋತ್ಸವದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಬಲವಂತವಾಗಿ ಅಪ್ಪುಗೆ ಮಾಡಿಹೋಗಿದ್ದಾರೆ. ಬೆಂಗಳೂರಿಗೆ ಹೋದ ನಂತರ ನಾನೊಂದು ತೀರಾ ನೀನೊಂದು ತೀರಾ ಎನ್ನುವಂತೆ ಇದ್ದರು.



