Connect with us

Dvgsuddi Kannada | online news portal | Kannada news online

ದಾವಣಗೆರೆ; ಪೊಲೀಸರೂ ಹೆಲ್ಮೆಟ್ ಧರಿಸದಿದ್ರೆ ಶಿಸ್ತು ಕ್ರಮ; ಹೆದ್ದಾರಿಯಲ್ಲಿ ಲೇನ್ ನಿಯಮ ಉಲ್ಲಂಘಿಸಿದ್ರೆ 500 ರೂ. ದಂಡ; ಎಸ್ಪಿ ಎಚ್ಚರಿಕೆ

IMG 20230220 WA0020 696x392 1

ದಾವಣಗೆರೆ

ದಾವಣಗೆರೆ; ಪೊಲೀಸರೂ ಹೆಲ್ಮೆಟ್ ಧರಿಸದಿದ್ರೆ ಶಿಸ್ತು ಕ್ರಮ; ಹೆದ್ದಾರಿಯಲ್ಲಿ ಲೇನ್ ನಿಯಮ ಉಲ್ಲಂಘಿಸಿದ್ರೆ 500 ರೂ. ದಂಡ; ಎಸ್ಪಿ ಎಚ್ಚರಿಕೆ

ದಾವಣಗೆರೆ:ಸಾರ್ವಜನಿಕರಿ ಅಷ್ಟೇ ಅಲ್ಲ, ಪೊಲೀಸರೂ ಹೆಲ್ಮೆಟ್ ಧರಿಸದಿದ್ರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಹೆದ್ದಾರಿಯಲ್ಲಿ ಲೇನ್ ನಿಯಮ ಉಲ್ಲಂಘಿಸಿದ್ರೆ 500 ರೂ. ದಂಡ ವಿಧಿಸಲಾಗುವುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಎಚ್ಚರಿಸಿದರು.

ಡಿಎಆರ್ ಮೈದಾನದಲ್ಲಿ ಹೆಲ್ಮೆಟ್ ಹಾಗೂ ಸಂಚಾರಿ ಜಾಗೃತಿ ಬೈಕ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದಲ್ಲಿ ಈಗಾಗಲೇ ಒಬ್ಬ ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸದೆ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕನರಲ್ಲಿ ಜಾಗೃತಿ ಮೂಡಿಸಬೇಕಾದ ನಾವೇ ಕಾನೂನು ಉಲ್ಲಂಘಿಸಿದರೆ ಹೇಗೆ…? ಪೊಲೀಸರು ಹೆಲ್ಮೆಟ್ ಧರಿಸದೇ ಇರುವ ಫೋಟೋವನ್ನು ಸಾರ್ವಜನಿಕರು ಶೇರ್ ಮಾಡಿದ್ರೆ, ಅಂಥವರ ವಿರುದ್ಧ ಶಿಸ್ತು ಕ್ರಮ ಕೈಗೊಂಡು ದುಪ್ಪಟ್ಟು ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.

ಹೆದ್ದಾರಿಗಳಲ್ಲಿ ದಂಡ: ಹೆದ್ದಾರಿಗಳಲ್ಲಿ ಲೇನ್ ಡಿಸಿಪ್ಲೇನ್ ಜಾರಿಗೆ ತರುವಂತೆ ಐಜಿ ಅವರು ಸೂಚಿಸಿದ್ದು, ಪೈಲೆಟ್ ಪ್ರಾಜೆಕ್ಟ್ ಆಗಿ ಬೆಂಗಳೂರು ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯನ್ನು ಆಯ್ದುಕೊಳ್ಳಲಾಗಿದೆ. ಇಂದು ಸಂಜೆಯಿಂದಲೇ ಹೆದ್ದಾರಿಯಲ್ಲಿ ಕಾನೂನು ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ರಿಷ್ಯಂತ್ ಹೇಳಿದರು.

ನಗರದಲ್ಲಿ 3 ಸ್ಥಳಗಳಲ್ಲಿ ಎಎನ್ ಪಿ ಆರ್ ಕ್ಯಾಮರಾಗಳನ್ನು ಅಳವಡಿಸಿದ್ದು, ನಿಯಮ ಉಲ್ಲಂಘಿಸಿದರೆ ಈ ಕ್ಯಾಮೆರಾಗಳು ಸೆರೆ ಹಿಡಿದು ಕಂಟ್ರೋಲ್ ರೂಂಗೆ ಕಳುಹಿಸಲಿದ್ದು, ಟೋಲ್ ಗಳಲ್ಲಿ ದಂಡ ವಸೂಲಿ ಮಾಡಲಾಗುವುದು.ಭಾರಿ ವಾಹನಗಳು, ಬಸ್ ಹಾಗೂ ಟ್ರಕ್ ಗಳು ಎಡಗಡೆಯ ಲೇನ್ ನಲ್ಲಿ ಚಲಿಸಬೇಕು. ಕಾರುಗಳು ಡಿವೈಡರ್ ಸಮೀಪದ ಬಲ ಭಾಗದ ಲೇನ್ ನಲ್ಲಿ ಕಾರುಗಳು ಸಂಚರಿಸಬೇಕು. ಒಂದು ವೇಳೆ ಟ್ರಕ್ ಗಳು ಕಾರಿನ ಲೇನ್ ಗಳಲ್ಲಿ ಚಲಿಸಿದರೆ 500 ರೂ. ದಂಡ ವಿಧಿಸಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಎಸ್ಪಿ ಆರ್‌.ಬಿ.ಬಸರಗಿ, ಸಂಚಾರಿ ಸಿಪಿಐ ಅನಿಲ್ ಹಾಜರಿದ್ದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top