Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತೆ ಕುಸಿತ; ಕ್ವಿಂಟಾಲ್ ಗೆ 250 ರೂ.ಇಳಿಕೆ

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತೆ ಕುಸಿತ; ಕ್ವಿಂಟಾಲ್ ಗೆ 250 ರೂ.ಇಳಿಕೆ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಕಳೆದ 10 ದಿನದಿಂದ ಕುಸಿತ ಕಾಣುತ್ತಿದೆ. ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯ ಫೆ.20 ರಂದು ಮಾರುಕಟ್ಟೆ ಬೆಲೆ ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 45,839 ರೂ.ಗೆ ಮಾರಾಟವಾಗಿದೆ. ಈ ಮೂಲಕ ಹಿಂದಿನ ದಿನದ ಮಾರುಕಟ್ಟೆಗೆ ಹೊಲಿಸಿದ್ರೆ ಬೆಲೆಯಲ್ಲಿ 250ರೂ.ಗಳಷ್ಟು ಕುಸಿತ ಆಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 45,839 ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಕ್ವಿಂಟಾಲ್ ಗೆ ಗರಿಷ್ಠ 46,100 ರೂ. ದಾಖಲಾಗಿತ್ತು. 2nd ಬೆಟ್ಟೆ ಅಡಿಕೆ ಗರಿಷ್ಠ 35,129 ಬೆಲೆಗೆ ಮಾರಾಟವಾಗಿದೆ.

ಫೆ.20ರಂದು ಉತ್ತಮ ರಾಶಿಯ ಕನಿಷ್ಠ ಬೆಲೆ‌ 43,003 ಆಗಿದ್ದು, ಗರಿಷ್ಠ ಬೆಲೆ 45,839 ಹಾಗೂ ಸರಾಸರಿ ಬೆಲೆ 45,019 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ ಬೆಲೆ 27,829, ಗರಿಷ್ಠ ಬೆಲೆ 35,129 ಹಾಗೂ ಸರಾಸರಿ ಬೆಲೆ 33,051 ಆಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top