Connect with us

Dvgsuddi Kannada | online news portal | Kannada news online

ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್ ತಂತಿ ದುರಸ್ತಿ ವೇಳೆ ಶಾಕ್; ಮಾಜಿ ಸೈನಿಕ ಸಾವು

ದಾವಣಗೆರೆ

ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್ ತಂತಿ ದುರಸ್ತಿ ವೇಳೆ ಶಾಕ್; ಮಾಜಿ ಸೈನಿಕ ಸಾವು

ದಾವಣಗೆರೆ: ತೋಟದಲ್ಲಿ ತುಂಡಾಗಿದ್ದ ವಿದ್ಯುತ್‌ ತಂತಿಯನ್ನು ದುರಸ್ತಿ ಮಾಡುತ್ತಿದ್ದಾಗ ವಿದ್ಯುತ್‌ ತಗುಲಿ ಮಾಜಿ ಸೈನಿಕರೊಬ್ಬರು ಮೃತಪಟ್ಟ ಘಟನೆ‌ ನಡೆದಿದೆ.

ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದ್ದು, ಗ್ರಾಮದ ಮಾಜಿ ಸೈನಿಕ ಎಸ್.ಟಿ. ಹನುಮಂತಪ್ಪ (50) ಮೃತಪಟ್ಟಿದ್ದಾರೆ. ತೋಟಕ್ಕೆ ನೀರು ಬಿಡಲು ಹೋಗಿದ್ದಾಗ ಈ ಘಟನೆ ಜರುಗಿದೆ. ಇವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಸ್ವಗ್ರಾಮ ತರಗನಹಳ್ಳಿಯ ರುದ್ರಭೂಮಿಯಲ್ಲಿಂದು ಅಂತ್ಯಸಂಸ್ಕಾರ ನೆರೆವೇರಲಿದೆ. ಸ್.ಟಿ. ಹನುಮಂತಪ್ಪ ಅವರು, ಭಾರತೀಯ ಅರೆಸೇನಾ ಪಡೆಯಾದ ಸಿಆರ್‌ಪಿಎಫ್‌ ನಲ್ಲಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top