Connect with us

Dvgsuddi Kannada | online news portal | Kannada news online

ದಾವಣಗೆರೆ ಮೇಯರ್ ಚುನಾವಣೆ:  ಸಚಿವ ಆರ್. ಶಂಕರ್, ಎಂಎಲ್ಸಿ ಚಿದಾನಂದಗೌಡ ಮತದಾನ ತಡೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್   

ಪ್ರಮುಖ ಸುದ್ದಿ

ದಾವಣಗೆರೆ ಮೇಯರ್ ಚುನಾವಣೆ:  ಸಚಿವ ಆರ್. ಶಂಕರ್, ಎಂಎಲ್ಸಿ ಚಿದಾನಂದಗೌಡ ಮತದಾನ ತಡೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್   

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪಮೇಯರ್ ಚುನಾವಣೆಯಲ್ಲಿ ಸಚಿವ ಆರ್.ಶಂಕರ್ ಮತ್ತು ವಿಧಾನಪರಿಷತ್ ಸದಸ್ಯ ಚಿದಾನಂದಗೌಡ ಮತದಾನ ಪ್ರಶ್ನಿಸಿ  ಕಾಂಗ್ರೆಸ್‌ನ ಪಕ್ಷ  ಸಲ್ಲಿಸಿದ್ದ  ಅರ್ಜಿಯನ್ನು ರಾಜ್ಯ ಹೈಕೋರ್ಟ್ ವಜಾಗೊಳಿಸಿದೆ. ಈ ಮೂಲಕ ಫೆ. 24 ರಂದು ನಡೆಯಲಿರುವ ಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಿದೆ.

ಈ ಮೂಲಕ ಮತದಾತರ ಪಟ್ಟಿಯಲ್ಲಿ ಎಂ.ಎಲ್.ಸಿ ಗಳ ಹೆಸರನ್ನು ಅಕ್ರಮವಾಗಿ ಸೇರ್ಪಡೆಗೊಳಿಸಲಾಗಿದೆ ಎಂಬ ಕಾಂಗ್ರಸ್ ನ ಆರೋಪ ನಿರಾಧಾರ ಎಂದು ಸಾಮಿತ್ತಾಗಿದೆ. ಸಚಿವರು,   ವಿಧಾನ ಪರಿಷತ್ ಸದಸ್ಯರು ಮುಂಬರುವ ಮೇಯರ್ ಉಪ ಮೇಯರ್ ಚುನಾವಣೆಗೆ ಮತ ಹಾಕಲು ಅವಕಾಶ ನೀಡಿರುವುದು ಸಂವಿಧಾನಿಕವಾಗಿದೆ ಎಂಬುದನ್ನು ನ್ಯಾಯಾಲಯ ಎತ್ತಿ ಹಿಡಿದಿದೆ. ಈ ಬಾರಿಯು ಸಹ ಪಾಲಿಕೆಯಲ್ಲಿ ಅಧಿಕಾರವನ್ನು ಬಿಜೆಪಿ ಅಲಂಕರಿಸಲಿದೆ ಎಂಬ ವಿಶ್ವಾಸ ಧೃಡವಾಗಿದೆ ಎಂದು ಆರ್ಥಿಕ ಸ್ಥಾಯಿ ಸಮಿತಿ  ಅಧ್ಯಕ್ಷ ಪಸನ್ನ ಕುಮಾರ್ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top