Connect with us

Dvgsuddi Kannada | online news portal | Kannada news online

ದಾವಣಗೆರೆ: ಬೀದಿ ಬದಿ ವ್ಯಾಪಾರಸ್ಥರು ಮಹಾನಗರ ಪಾಲಿಕೆ ನಿಗದಿಪಡಿಸಿದ ಸುಂಕದ ದರ ಮಾತ್ರ ನೀಡಿ; ದರ ವಸೂಲಿದಾರರಿಗೆ ಗುರುತಿನ ಚೀಟಿ ಕಡ್ಡಾಯ..!

ದಾವಣಗೆರೆ

ದಾವಣಗೆರೆ: ಬೀದಿ ಬದಿ ವ್ಯಾಪಾರಸ್ಥರು ಮಹಾನಗರ ಪಾಲಿಕೆ ನಿಗದಿಪಡಿಸಿದ ಸುಂಕದ ದರ ಮಾತ್ರ ನೀಡಿ; ದರ ವಸೂಲಿದಾರರಿಗೆ ಗುರುತಿನ ಚೀಟಿ ಕಡ್ಡಾಯ..!

ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬೀದಿ ಬದಿ ವ್ಯಾಪಾರಸ್ಥರು ಹಾಗೂ ವಾರದ ಸಂತೆ ವ್ಯಾಪಾರಸ್ಥರಿಗೆ ಪ್ರಸಕ್ತ ಸಾಲಿನ ಸುಂಕ ವಸೂಲಾತಿ ದರಗಳನ್ನು ನಿಗದಿ ಮಾಡಿದ್ದು, ನಿಗದಿತ ದರವನ್ನು ಮಾತ್ರ ನೀಡಬೇಕು ದಾವಣಗೆರೆ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

  • ಲಾರಿಗೆ ದಿನವೊಂದಕ್ಕೆ ದರ 75 ರೂ.
  • ತುಂಬಿದ ಟ್ರಾಕ್ಟರ್ ಹಾಗೂ ತುಂಬಿದ ಮಿನಿಲಾರಿ ದಿನವೊಂದಕ್ಕೆ ದರ 50 ರೂ.
  • ಟೆಂಪೋ ದಿನವೊಂದಕ್ಕೆ ದರ 25 ರೂ.
  • ಎತ್ತಿನ ಗಾಡಿ ದಿನವೊಂದಕ್ಕೆ ದರ 10 ರೂ.
  • ಹಣ್ಣು ತರಕಾರಿ ತುಂಬಿದ ಪುಟ್ಟಿ, ತಲೆ ಮೇಲೆ ಹೊತ್ತು ತರುವ ಬೆಣ್ಣೆ, ಮೊಟ್ಟೆ, ತರಕಾರಿ ಪುಟ್ಟಿ, ಕೋಳಿ, ವೀಳ್ಯದ ಎಲೆ ಪೆಂಡಿ, ಪ್ರತಿಯೊಂದು ಬಯಲು ಅಂಗಡಿ ಚದರ ಅಡಿ ಹಾಗೂ ತುಂಬಿದ ಚೀಲ ದಿನವೊಂದಕ್ಕೆ ದರ 5 ರೂ.

ಷೆಡ್ಯೂಲ್‍ನಲ್ಲಿರುವ ದರದಂತೆ ಮಾತ್ರವೇ ಸುಂಕ ಪಾವತಿಸಿ ರಶೀದಿ ಪಡೆಯತಕ್ಕದ್ದು ಹಾಗೂ ಗುರುತಿನ ಚೀಟಿ ಧರಿಸಿದವರಿಗೆ ಮಾತ್ರವೇ ಸುಂಕ ಪಾವತಿ ಮಾಡುವುದು ಎಂದು ಆಯುಕ್ತರು ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top