Connect with us

Dvgsuddi Kannada | online news portal | Kannada news online

ದಾವಣಗೆರೆ: ಲೋಕಸಭಾ ಚುನಾವಣೆ ಐದನೇ ದಿನ 10 ನಾಮಪತ್ರ; ಇದುವರೆಗೆ 34 ನಾಮಪತ್ರ ಸಲ್ಲಿಕೆ

ದಾವಣಗೆರೆ

ದಾವಣಗೆರೆ: ಲೋಕಸಭಾ ಚುನಾವಣೆ ಐದನೇ ದಿನ 10 ನಾಮಪತ್ರ; ಇದುವರೆಗೆ 34 ನಾಮಪತ್ರ ಸಲ್ಲಿಕೆ

ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಮತದಾನ ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಐದನೇ ದಿನವಾದ ಏಪ್ರಿಲ್ 18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ: ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.

ನಾಮಪತ್ರ ಸಲ್ಲಿಸಿದವರ ವಿವರ; ಕೆಆರ್‍ಎಸ್ ಪಕ್ಷದಿಂದ ರಘವೇಂದ್ರ ಜಿ.ಪಿ ಉಳಿದಂತೆ ಎಲ್ಲಾ ಪಕ್ಷೇತರರಾಗಿದ್ದು ರವಿನಾಯಕ, ತಸ್ಲಿಮ್ ಭಾನು, ಪರ್ವೇಜ್, ಎಂ.ರಂಗನಾಥಸ್ವಾಮಿ, ರಶೀದ್ ಖಾನ್, ಸಲೀಂ, ಮಂಜುನಾಥ ಎ.ಕೆ, ಅಲ್ಲಾ ಭಕ್ಷಿ.ಬಿ, ಅಬ್ದುಲ್ ನಜೀರ್ ಸಾಬ್ ನಾಮಪತ್ರ ಸಲ್ಲಿಸಿದವರು. ಇದುವರೆಗೆ ಒಟ್ಟು 29 ಅಭ್ಯರ್ಥಿಗಳಿಂದ 34 ನಾಮಪತ್ರಗಳು ಸಲ್ಲಿಕೆಯಾಗಿದೆ.

ಏ.12 ರಂದು ಐದು ಅಭ್ಯರ್ಥಿಗಳಿಂದ 6 ನಾಮಪತ್ರಗಳು, ಏ.15 ರಂದು 8 ಅಭ್ಯರ್ಥಿಗಳಿಂದ 9 ನಾಮಪತ್ರಗಳು ಹಾಗೂ ಏ.16 ರಂದು 3 ಅಭ್ಯರ್ಥಿಗಳಿಂದ 3 ನಾಮಪತ್ರಗಳು, ಏ.17 ರಂದು 6 ಅಭ್ಯರ್ಥಿಗಳಿಂದ 6 ನಾಮಪತ್ರ, ಏ.18 ರಂದು 10 ಅಭ್ಯರ್ಥಿಗಳಿಂದ 10 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್‍ನಿಂದ ಡಾ; ಪ್ರಭಾ ಮಲ್ಲಿಕಾರ್ಜುನ್ ನಾಲ್ಕು ನಾಮಪತ್ರ, ಕೆಆರ್‍ಎಸ್ ಪಕ್ಷದ ರಾಘವೇಂದ್ರ ಜಿ.ಪಿ 2, ಪಕ್ಷೇತರರಾಗಿ ವಿನಯ್‍ಕುಮಾರ್ ಜಿ.ಬಿ. 2 ನಾಮಪತ್ರ ಸಲ್ಲಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top