Connect with us

Dvgsuddi Kannada | online news portal | Kannada news online

ದಾವಣಗೆರೆ: ಏ.07ರಂದು ಉದ್ಯೋಗ ವಿನಿಮಯ ಕೇಂದ್ರದಿಂದ ವಾಕ್ ಇನ್ ಇಂಟವ್ರ್ಯೂವ್

ದಾವಣಗೆರೆ

ದಾವಣಗೆರೆ: ಏ.07ರಂದು ಉದ್ಯೋಗ ವಿನಿಮಯ ಕೇಂದ್ರದಿಂದ ವಾಕ್ ಇನ್ ಇಂಟವ್ರ್ಯೂವ್

ದಾವಣಗೆರೆ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ದಾವಣಗೆರೆ ವತಿಯಿಂದ ಏ.07 ರಂದು ಬೆಳಗ್ಗೆ 10 ಗಂಟೆಗೆ, ಜಿಲ್ಲಾಡಳಿತ ಭವನದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಉದ್ಯೋಗಾಸಕ್ತ ಅಭ್ಯರ್ಥಿಗಳಿಗೆ ವಾಕ್ ಇನ್ ಇಂಟವ್ರ್ಯೂವ್ ಆಯೋಜಿಸಲಾಗಿದೆ.

ವಾಕ್ ಇನ್ ಇಂಟವ್ರ್ಯೂವ್‍ನಲ್ಲಿ ಯುಕ್ತಿ ಡಾಟಾಸಾಫ್ಟ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು ಖಾಸಗಿ ಕಂಪನಿಯು ಭಾಗವಹಿಸುತ್ತಿದ್ದು, ಬಿ.ಇ(ಸಿ.ಎಸ್, ಇ&ಇ, ಇ&ಸಿ) ಮತ್ತು ಡಿಪ್ಲೊಮೋ (ಸಿ.ಎಸ್, ಇ&ಇ, ಇ&ಸಿ) ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಿದ್ದಾರೆ.
ಆಸಕ್ತ ಅಭ್ಯರ್ಥಿಗಳು ನಿಗದಿತ ಸಮಯಕ್ಕೆ ಕನಿಷ್ಠ 2 ಬಯೋಡಾಟಾ, ಆಧಾರ್ ಕಾರ್ಡ್‍ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿ ಹೆಸರು ನೋಂದಾಯಿಸಿಕೊಂಡು, ವಾಕ್-ಇನ್ ಇಂಟವ್ರ್ಯೂವ್‍ನಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ 08192-259446, 6361550016, 7406323294 ಕ್ಕೆ ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಗಿರೀಶ್ ಕೆ.ಎನ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top