ದಾವಣಗೆರೆ
ದಾವಣಗೆರೆ: ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ; 7913 ಅಭ್ಯರ್ಥಿಗಳು ನೋಂದಣಿ- ಸಾಂಕೇತಿಕ 15 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ
ದಾವಣಗೆರೆ: ಯುವಕರು ದೇಶದ ಅಭಿವೃದ್ಧಿಯಲ್ಲಿ ಪ್ರಮುಖವಾಗಿದ್ದು ನಿಮ್ಮ ಕೆಲಸದ ಜೊತೆಗೆ ಕುಟುಂಬದ ಜವಾಬ್ದಾರಿಯನ್ನು ನಿಭಾಯಿಸುವ ಮೂಲಕ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆ: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಪಾಲಿಕೆ ಪ್ರಥಮ ದರ್ಜೆ ಸಹಾಯಕ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಹಾಗೂ ಜಿಲ್ಲಾ ಕೌಶಲ್ಯ ಮಿಷನ್ ಇವರ ಸಹಯೋಗದಲ್ಲಿ ಸರ್ಕಾರಿ ಐ.ಟಿ.ಐ ಕಾಲೇಜು ಆವರಣದಲ್ಲಿ ಏರ್ಪಡಿಸಲಾದ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಉದ್ಠಾಟಿಸಿ ಮಾತನಾಡಿದರು.
7913 ಅಭ್ಯರ್ಥಿಗಳು ನೋಂದಣಿ: ಬೃಹತ್ ಉದ್ಯೋಗ ಮೇಳದಲ್ಲಿ ಸುಮಾರು 69 ಪ್ರಮುಖ ಕಂಪನಿಗಳು ಭಾಗವಹಿಸಿವೆ. ಇದರಲ್ಲಿ ಐಟಿಐಗೆ ಸಂಬಂಧಿಸಿದ 11 ಕಂಪನಿಗಳು ಭಾಗವಹಿಸಿವೆ. ಉದ್ಯೋಗಕ್ಕಾಗಿ ಆನ್‌ಲೈನ್‌ನಲ್ಲಿ 5413 ಜನ ಅಭ್ಯರ್ಥಿಗಳು, ಆಫ್‌ಲೈನ್‌ನಲ್ಲಿ 2500 ಸೇರಿ ಒಟ್ಟು 7913 ಅಭ್ಯರ್ಥಿಗಳು ನೋಂದಾಯಿಸಿಕೊಂಡಿರುವರು, ಇದರಲ್ಲಿ 2097 ಪುರುಷರು, 2427 ಮಹಿಳೆಯರು, 395 ಅಂಗವಿಕಲರು, 13 ತೃತೀಯ ಲಿಂಗದ ಅಭ್ಯರ್ಥಿಗಳು ನೋಂದಾಯಿಸಿದ್ದಾರೆ. ಇದರಲ್ಲಿ ಸುಮಾರು 15 ಅಭ್ಯರ್ಥಿಗಳಿಗೆ ಸಾಂಕೇತಿಕವಾಗಿ ಉದ್ಯೋಗದ ನೇಮಕಾತಿ ಆದೇಶ ನೀಡಿದರು.
ದಾವಣಗೆರೆ: ಟ್ರ್ಯಾಕ್ಟರ್ ಗೆ ವಿದ್ಯುತ್ ಶಾಕ್ : ಟ್ರ್ಯಾಕ್ಟರ್ ಚಾಲಕ ರಕ್ಷಣೆ ಮಾಡಿದ ಯುವಕ ಸಾವು
ಅಭ್ಯರ್ಥಿಗಳ ಕುರಿತು ಮಾತನಾಡಿ ಕಂಪನಿಗಳು ನಿಮ್ಮನ್ನು ಆಯ್ಕೆ ಮಾಡಿಕೊಂಡಿವೆ, ಆದರೆ ನೀವು ಆ ಕೆಲಸಕ್ಕೆ ಹೋಗುವುದೇ ಇಲ್ಲ. ಉದ್ಯೋಗ ಪ್ರಮುಖವಾಗಿದ್ದು ಸೇವೆ ಮಾಡಿದ ನಂತರ ಅನುಭವದ ಮೇಲೆ ಇತರೆ ಕಂಪನಿಗಳಿಗೂ ತೆರಳುವ ಅವಕಾಶವಿರುತ್ತದೆ.ಯುವಕರು ವಿದ್ಯಾಭ್ಯಾಸದ ಜೊತೆಗೆ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕಾಭಿವೃದ್ಧಿ ಯಲ್ಲಿ ಕೈಜೋಡಿಸಬೇಕು. ಗ್ಯಾರಂಟಿ ಯೋಜನೆಯಲ್ಲಿ ಒಂದಾದ ಯುವನಿಧಿ ಯೋಜನೆಗೆ ಜಿಲ್ಲೆಯಲ್ಲಿ 6226 ಪದವೀಧರರು, 119 ಡಿಪ್ಲೋಮಾ ವಿದ್ಯಾರ್ಥಿಗಳಿದ್ದು, ಒಟ್ಟು 6345 ನಿರುದ್ಯೋಗಿಗಳು ಯುವನಿಧಿ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.
ದಾವಣಗೆರೆ ಆರಾಧ್ಯ ಸ್ಟೀಲ್ ಕಂಪನಿಯವರಿಗೆ 100 ಜನ ಕೆಲಸಗಾರರ ಅವಶ್ಯಕತೆ ಇದ್ದು, ಯಾರಿಗಾದರೂ ಆಸಕ್ತಿ ಇದ್ದರೆ ಕೆಲಸ ನಿರ್ವಹಿಸಬಹುದು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಾಕಿಕೊಂಡು ಯುವ ಜನರಿಗೆ ಅನುಕೂಲ ಮಾಡಿಕೊಡಲಾಗುತ್ತದೆ ಎಂದರು.
ರೆಡ್ ಕ್ರಾಸ್ ಸಂಸ್ಥೆಯವರಿಂದ ರಕ್ತದಾನ ಶಿಬಿರ ಏರ್ಪಡಿಸಿದ್ದು, 18 ರಿಂದ 45 ವರ್ಷ ವಯಸ್ಸಿನವರು ರಕ್ತ ದಾನ ಮಾಡಬಹುದೆಂಬ ಮಾಹಿತಿ ನೀಡಿದರು.ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧ ಮಾಡುವುದಕ್ಕಾಗಿ ಕ್ರಷ್ ಮಿಷನ್‌ನ್ನು ಉದ್ಘಾಟಿಸಿದರು.
ಎಸ್.ಎಸ್.ಕೇರ್ ಟ್ರಸ್ಟ್: ಸುಮಾರು 22000 ಜನರಿಗೆ ಡಯಾಲಿಸಸ್‌ನ್ನು ಉಚಿತವಾಗಿ ಮಾಡಲಾಗಿದೆ. ಸುಕ್ಷೇಮ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಇದರ ಉದ್ದೇಶ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಸಿಇಟಿ ಕೋಚಿಂಗ್ ನೀಡಲಾಗಿದ್ದು, ಇದರಲ್ಲಿ 200 ಜನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಉಚಿತವಾಗಿ ಟ್ಯೂಷನ್ ವ್ಯವಸ್ಥೆ, ಹಾಸ್ಟೆಲ್ ವ್ಯವಸ್ಥೆ ಮಾಡಲಾಗುವುದು.
ತಾಲ್ಲೂಕು ಮಟ್ಟದಲ್ಲಿ ಸಿವಿಲ್ ಸರ್ವಿಸ್ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ ಅವರಿಗೆ ಏಪ್ರಿಲ್ ತಿಂಗಳಿಂದ ವಿಶ್ವವಿದ್ಯಾನಿಲಯದಲ್ಲಿ ಉಚಿತವಾಗಿ ತರಬೇತಿ ನೀಡಲಾಗುವುದು ಎಂದರು.ಕರ್ನಾಟಕ ಕೌಶಲ್ಯಾಭಿವೃದ್ದಿ ನಿಗಮದ ಅಧ್ಯಕ್ಷರಾದ ಶಿವಕಾಂತನಾಯ್ಕ ಮಾತನಾಡಿ ಇದು ಆಶಾಕಿರಣ ದಿನ, ಯುವ ಜನತೆಯ ಭವಿಷ್ಯವನ್ನು ನಿರ್ಮಿಸುವ ದಿನ, ಹೊಸ ಬದುಕಿನ ಯುವ ಜನತೆಗೆ ಇದು ಯುವಕರ ಭವಿಷ್ಯವನ್ನು ಕಲ್ಪಿಸಲಾಗಿದೆ. ಉದ್ಯೋಗದಾತರಿಗೂ ಉದ್ಯೋಗಕಾಂಕ್ಷೆಗಳಿಗೆ ಒಂದೇ ಸೂರಿನಡಿ ತಂದು ಯುವಕರಿಗೆ ಬೇರೆ ಬೇರೆ ವಲಯಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ ಎಂದರು.
ಯುವಕರು ವಿದ್ಯೆ ಜೊತೆಗೆ ಕೌಶಲ್ಯಾಭಿವೃದ್ದಿ ಹೆಚ್ಚಿಸಲು ತರಬೇತಿಯನ್ನು ನಮ್ಮ ಕೌಶಲ್ಯಾಭಿವೃದ್ದಿ ನಿಗಮ ನೀಡುತ್ತಿದೆ. ಇಬ್ಬರು ಮಹಿಳೆಯರಿಗೆ ಜಲಜೀವನ್ ಮಿಷನ್ ತರಬೇತಿ ನೀಡಿ ಅವರನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅವರಿಗೆ ಕೆಲಸ ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಪ್ರಸ್ತಾವಿಕವಾಗಿ ಮಾತನಾಡಿದರು. ಅಂಗವಿಕಲ ಅಭ್ಯರ್ಥಿಗಳಿಗೆ ಟೂಲ್ ಕಿಟ್ ವಿತರಣೆ ಮಾಡಲಾಯಿತು. ಆತ್ಮ ನಿರ್ಬರ್ ಯೋಜನೆಯಡಿ ಸಹಾಯಧನವನ್ನು ನೀಡಲಾಯಿತು. ಹಾಗೂ ಸುಮಾರು ರೂ.31 ಕೋಟಿ ಹಣವನ್ನು ಬೀದಿಬದಿ ವ್ಯಾಪಾಸ್ಥರಿಗೆ ಸಹಾಯಧನವನ್ನು ನೀಡಲಾಯಿತು.
ಉದ್ಯೋಗ ಮೇಳವು ಹದಡಿ ರಸ್ತೆಯಲ್ಲಿರುವ ಸರ್ಕಾರಿ ಐಟಿಐ ಕಾಲೇಜು ಮತ್ತು ಬಾಪೂಜಿ ತಾಂತ್ರಿಕ ಮಹಾವಿದ್ಯಾಲಯ ಈ ಎರಡು ಕಡೆ ನಡೆಯಿತು. ಬಿಐಟಿಯಲ್ಲಿ ಬಿಇ ಹಾಗೂ ಎಂಬಿಎ ಪದವಿ ಪಡೆದ ಅಭ್ಯರ್ಥಿಗಳ ಆಯ್ಕೆ ನಡೆದರೆ, ಐಟಐ ಕಾಲೇಜಿನಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ, ಐಟಿಐ, ಡಿಪ್ಲೊಮಾ ಹಾಗೂ ಪದವಿ, ಸ್ನಾತಕೋತ್ತರ ಪದವಿ ಪಡೆದವರಿಗೆ ಆಯ್ಕೆ ಪ್ರಕ್ರಿಯೆ ನಡೆಸಲಾಯಿತು.
ಮೇಳದಲ್ಲಿ ಹಲವು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಸ್ತುತ ಜಿಲ್ಲೆಯಲ್ಲಿ ಏರ್ಪಡಿಸಲಾದ ಉದ್ಯೋಗ ಮೇಳವು ಅನೇಕ ನಿರುದ್ಯೋಗಿಗಳಿಗೆ ವಿದ್ಯಾವಂತರಿಗೆ ತುಂಬಾ ಅನುಕೂಲವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವ್ಯವಸ್ಥಿತ ನೋಂದಣಿ: ನಗರದ ಹದಡಿ ರಸ್ತೆಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಅಗತ್ಯ ಮೂಲ ಸೌಲಭ್ಯದೊಂದಿಗೆ ಪ್ರವೇಶ ದಾರದಲ್ಲಿಯೇ ಪುರುಷರಿಗೆ, ಮಹಿಳೆಯರಿಗೆ, ತೃತೀಯಲಿಂಗಿಗಳಿಗೆ ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕವಾಗಿ ನಾಲ್ಕು ನೋಂದಣಿ ಕೇಂದ್ರಗಳನ್ನು ಸ್ಥಾಪಿಸುವುದರೊಂದಿಗೆ ನೊಂದಣಿ ಪ್ರಕ್ರಿಯೆಯನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಲಾಗಿತ್ತು. ನೊಂದಣಿ ಪ್ರಕ್ರಿಯೆಯಲ್ಲಿ ಸುಮಾರು 69 ವಿವಿಧ ಖಾಸಗಿ ಕಂಪನಿಗಳು ಭಾಗಿಯಾಗಿದ್ದು, ಆಫ್‌ಲೈನ್ ನಲ್ಲಿ ಐದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೊಂದಣಿಯಾಗಿದ್ದಾರೆ.
ಚನ್ನಗಿರಿ ತಾಲೂಕಿನ ಸತೀಶ್ (40ವರ್ಷ) ಎಂಬುವವರು ಪ್ರತಿಕ್ರಿಯಿಸಿ, 2005ರಲ್ಲಿ ಬಿ.ಎ ಪದವಿ ಪಡೆದು ಶ್ರೀ ರಾಮ ಫೈನಾನ್ಸ್ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೇಳದಲ್ಲಿ ಕೆಲವು ಕಂಪನಿಗಳಿಗೆ ಸಂದರ್ಶನ ನೀಡಿದ್ದೇನೆ.
ಜಿಲ್ಲೆಯ ಜಗಳೂರು ತಾಲೂಕಿನ ದೊಡ್ಡಬೊಮ್ಮನಹಳ್ಳಿಯ ಪೂಜಾ ಡಿ. ಇವರು 2023 ರಲ್ಲಿ ಬಿ.ಇ ಸಿವಿಲ್ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದೇನೆ. ಈ ಮೇಳದಲ್ಲಿ ಸುಮಾರು 6 ವಿವಿಧ ಕಂಪನಿಗಳಿಗೆ ಸಂದರ್ಶನ ನೀಡಿದ್ದು , ಪುಣೆ ಅಥವಾ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಸಿಗುವ ನಿರೀಕ್ಷೆ ಇದೆ ಎಂದು ಆಶಯ ವ್ಯಕ್ತಪಡಿಸಿದರು.
ಜಗಳೂರು ತಾಲ್ಲೂಕಿನ ವಿಶೇಷ ಚೇತನ ವ್ಯಕ್ತಿ ತಿಪ್ಪೇಸ್ವಾಮಿ 2020 ರಲ್ಲಿ ಬಿ.ಎ ಪದವಿ ಪಡೆದಿದ್ದಾರೆ. ಪದವಿ ನಂತರ ಏರ್ಟೆಲ್ ಟೆಲಿಕಾಂ ಕಂಪನಿ ಮತ್ತು ಇನ್ನಿತರೆ ಖಾಸಗಿ ಕಚೇರಿಗಳಲ್ಲಿ ಕಾರ್ಯನಿರ್ವಹಿಸಿದ್ದು. ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಸಿಗಬಹುದೆಂದು ಮೇಳದಲ್ಲಿ ಭಾಗಿಯಾಗಿರುವುದಾಗಿ ಹೇಳಿದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಿದ್ದೇಶ್ ಎಂಬುವವರು 2023ರಲ್ಲಿ ಪಿಯುಸಿ ನಂತರ ಬಿ.ಎ ಪದವಿಯನ್ನು ಬಡತನ, ಮನೆ ನಿರ್ವಹಹಣೆ ಕಾರಣಕ್ಕೆ ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಸನ್ಸೇರಾ ಖಾಸಗಿ ಕಂಪನಿಯಲ್ಲಿ 2ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ.ಸ್ಥಳೀಯವಾಗಿ ಉದ್ಯೋಗ ಮಾಡುವ ಇಚ್ಛೆಯಿಂದ ಮೇಳದಲ್ಲಿ ಪಾಲ್ಗೊಂಡಿದ್ದೇನೆ.
ಜಿಲ್ಲೆಯ ಸ್ಥಳೀಯ ನಿವಾಸಿ ದಯಾನ ತೃತೀಯ ಲಿಂಗಿಯಾಗಿದ್ದು, ಪಿಯುಸಿ ವಿದ್ಯಾರ್ಹತೆ ಹೊಂದಿದ್ದು, ಮೇಳದಲ್ಲಿ ನಮಗೂ ಅವಕಾಶ ನೀಡಿದ್ದು ಖುಷಿಯಾಗಿದೆ. ಅಲ್ಲದೇ ಮುಂದೆ ನಮಗೂ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ನೀಡುವ ಭರವಸೆಯನ್ನು ನೀಡಿದ್ದಕ್ಕಾಗಿ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿದರು.
ಸ್ಥಳೀಯ ಕಂಪನಿಗಳಿಗೆ ಅವಕಾಶ ನೀಡದೆ ಹೊರ ರಾಜ್ಯ, ಜಿಲ್ಲೆಗಳಿಗೆ ಅವಕಾಶ ನೀಡಿದೆ. ಸ್ಥಳೀಯ ಕಂಪನಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರೆ, ಇನ್ನಷ್ಟು ಉಪಯೋಗ ವಾಗುತ್ತಿತ್ತು.
ಸ್ಥಳೀಯ ನಿವಾಸಿ ಸುಷ್ಮಿತಾ ಬಿ.ಸಿ,ಎ ಪದವೀಧರೆ
ಜಿಲ್ಲೆಯ ಐಗೂರು ನಿವಾಸಿ ಶಿವಕುಮಾರ್ ಕೆ.ಹೆ.ಚ್. 2015ರಲ್ಲಿ ಬಿಕಾಂ ಪದವಿ ಪಡೆದು 7 ವರ್ಷಗಳ ಕಾಲ ಲ್ಯಾಬ್ ಟೆಕ್ನಶಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ಸ್ಥಳೀಯ ಮಟ್ಟದಲ್ಲಿ ಮೇಳ ಆಯೋಜನೆ ಮಾಡಿರುವುದು ಸಂತೋಷದ ಸಂಗತಿ.
ರಾಜ್ಯ ತಾಂಡ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಜಯದೇವನಾಯ್ಕ, ರಾಜ್ಯ ಬ್ರಾಹ್ಮಣ ಅಭಿವೃದ್ದಿ ಮಂಡಳಿಯ ಅಧ್ಯಕ್ಷರಾದ ಆಸಗೋಡು ಜಯಸಿಂಹ, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿ.ಪಂ ಸಿಇಓ ಡಾ.ಸುರೇಶ್.ಬಿ.ಇಟ್ನಾಳ್, ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಶಿವಕುಮಾರ ಮಲ್ಲಾಡದ, ಐಟಿಐ ಕಾಲೇಜಿನ ಪ್ರಾಚಾರ್ಯರರಾದ ಏಕನಾಥ.ಎನ್, ಆಯುಕ್ತೆ ರೇಣುಕಾ ಉಪಸ್ಥಿತರಿದ್ದರು.
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
