Connect with us

Dvgsuddi Kannada | online news portal | Kannada news online

ದಾವಣಗೆರೆ: ಡಿಸಿ ಜತೆ ವಿಡಿಯೋ ಕಾನ್ಫರೆನನ್ಸ್ ನಡೆಸಿದ ಸಿಎಂ: ಮಳೆ ಹಾನಿಗೆ ಕೂಡಲೇ ಸ್ಪಂದಿಸಲು ಸೂಚನೆ

ದಾವಣಗೆರೆ

ದಾವಣಗೆರೆ: ಡಿಸಿ ಜತೆ ವಿಡಿಯೋ ಕಾನ್ಫರೆನನ್ಸ್ ನಡೆಸಿದ ಸಿಎಂ: ಮಳೆ ಹಾನಿಗೆ ಕೂಡಲೇ ಸ್ಪಂದಿಸಲು ಸೂಚನೆ

ದಾವಣಗೆರೆ: ರಾಜ್ಯದಾದ್ಯಂತ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದಾಗಿ ವಿದ್ಯುತ್ ತಂತಿ ಕಂಬಗಳು ಮುರಿದು ಬಿದ್ದಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್‍ನಲ್ಲಿ ಮಾತನಾಡಿದ ಅವರು.
ವಿದ್ಯುತ್ ಕಂಬಗಳಿಂದಾಗಿ ಅತೀ ಹೆಚ್ಚಿನ ಅನಾಹುತಗಳು ಸಂಭವಿಸುತ್ತಿದ್ದು ಇವುಗಳ ತೆರವಿಗೆ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ, ಹಾಗಾಗಿ ಆದ್ಯತೆಯ ಮೇರೆಗೆ ಕಂಬಗಳನ್ನು ಸ್ಥಳಾಂತರಿಸುವುದು ಅಥವಾ ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವುದು, ಟ್ರಾನ್ಸ್‍ಫಾರ್ಮಾರ್ ರಿಪೇರಿ ಮಾಡಿಸುವುದು ಮುಂತಾದವುಗಳನ್ನು ಬೇಗ ಮಾಡಿಸಿ ಜನರು ಗಲಾಟೆ ಮಾಡುವವರೆಗೆ ಕಾಯಬೇಡಿ ಎಂದರು.

ಜಿಲ್ಲೆಯಲ್ಲಿರುವ ಕಾಳಜಿ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ. ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಆಹಾರ ನೀಡಿ, ಮೆನು ಪ್ರಕಾರವೇ ಆಹಾರ ಒದಗಿಸಿ, ಕಾಳಜಿ ಕೇಂದ್ರಕ್ಕೆ ಬರದವರಿಗೆ ಮನೆಗೆ ರೇಷನ್ ನೀಡಿ, ಒಂದು ವೇಳೆ ಕಾಳಜಿ ಕೇಂದ್ರಕ್ಕೆ ಬರದ್ದಿದ್ದರೆ ನಮಗೂ ಅವರಿಗೂ ಸಂಬಂಧ ಇಲ್ಲದಂತೆ ವರ್ತಿಸಬೇಡಿ. ಕೆಲ ಪ್ರದೇಶಗಳಲ್ಲಿ ಭೂಕುಸಿತ ಸಂಭವಿಸುವ ಕಡೆ ಸ್ಥಳೀಯರನ್ನ ಮನವೊಲಿಸಿ ಸುರಕ್ಷಿತ ಜಾಗಗಳಿಗೆ ತಲುಪಿಸಿ ಎಂದರು.

ಈಗಾಗಲೇ ಮೂಲಭೂತ ಸೌಕರ್ಯಕ್ಕೆ ಪಿಆರ್‍ಇಡಿ ಇಲಾಖೆಗೆ 300 ಕೋಟಿ, ಪಿಡ್ಲೂಡಿ ಇಲಾಖೆಗೆ 200 ಕೋಟಿ ರೂಗಳನ್ನು ನೀಡಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಎಷ್ಟು ಹಣ ಇದೆಯೆಂದು ಪರಿಶೀಲಿಸಿ ಅವರು ಕೇಳುವ ಅಗತ್ಯದಷ್ಟು ಹಣ ನೀಡಿ. ಎನ್‍ಡಿಆರ್‍ಆಫ್ ಹಾಗೂ ಎಸ್‍ಡಿಆರ್ ಎಫ್ ಪಡೆಗಳಿಗೆ ಸಾಕಷ್ಟು ಅಗತ್ಯ ಪರಿಕರಗಳನ್ನು ಒದಗಿಸಿ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಭೈರತಿ ಬಸವರಾಜ್ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ, ದಾವಣಗೆರೆ ಜಿಲ್ಲೆಯಲ್ಲಿ ಬೆಳೆಹಾನಿ ಬಹಳಷ್ಟು ಆಗಿದ್ದು ಜಿಲ್ಲಾಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ಮಾಹಿತಿ ಪಡೆಯುತ್ತಿದ್ದೇನೆ ಎಂದರು.

ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿ, ಆಗಷ್ಟ್ ತಿಂಗಳಲ್ಲಿ 209 ಮನೆಗಳಿಗೆ ಹಾನಿಯಾಗಿª,É 449 ಮನೆಗಳಿಗೆ ನೀರು ನುಗ್ಗಿದ್ದು ಇವರಿಗೆಲ್ಲಾ 10 ಸಾವಿರ ಪರಿಹಾರ ನೀಡಲಾಗಿದೆ. ಹಾನಿಯಾಗಿರುವ ಮನೆಗಳ ಬಳಿ ಜಿಪಿಎಸ್ ಸರ್ವೇ ನಡೆಸಿ ರಾಜೀವ್ ಗಾಂಧಿ ಹೌಸಿಂಗ್ ಪೋರ್ಟಲ್‍ನಲ್ಲಿ ಅಪ್ಲೋಡ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 7500 ಹೇಕ್ಟೆರ್ ಪ್ರದೇಶ ಬೆಳೆಹಾನಿಯಾಗಿದ್ದು ಅದರಲ್ಲಿ 4200 ಹೆಕ್ಟೇರ್ ಗೋವಿನಜೋಳ ಹಾನಿಯಾಗಿದೆ. ಜಿಲ್ಲೆಯ ಬಹಳಷ್ಟು ಕಡೆ ರಸ್ತೆ ಮತ್ತು ಸೇತುವೆ ಹಾಳಾಗಿದ್ದು, ಅಂತಹ ಕಡೆ ಬ್ಯಾರಿಕೇಡ್ ಹಾಕಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದರು.

ಸಭೆಯಲ್ಲಿ ಜಿ.ಪಂ ಸಿಇಒ ಡಾ.ಎ.ಚನ್ನಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮಗೊಂಡ ಬಸರಗಿ, ಅಪರ ಜಿಲ್ಲಾಧಿಕಾರಿ ಲೋಕೇಶ್ ಪಿ.ಎನ್, ಉಪವಿಭಾಗಾಧಿಕಾರಿಗಳಾದ ದುರ್ಗಾಶ್ರೀ, ಹುಲ್ಲುಮನಿ ತಿಮ್ಮಣ್ಣ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್ ಚಿಂತಾಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಡಿಡಿಪಿಐ ತಿಪ್ಪೇಶಪ್ಪ ಸೇರಿದಂತೆ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top