Connect with us

Dvgsuddi Kannada | online news portal | Kannada news online

ತಡ ರಾತ್ರಿವರೆಗೂ ಡಿಜೆ ಸೌಂಡ್ ಪಾರ್ಟಿ; ಮಿಟ್ಲಕಟ್ಟೆ ದಿ ಸ್ಟೇಜ್ ಹೋಟೆಲ್ ಮೇಲೆ ಪೊಲೀಸರು ದಾಳಿ  

ದಾವಣಗೆರೆ

ತಡ ರಾತ್ರಿವರೆಗೂ ಡಿಜೆ ಸೌಂಡ್ ಪಾರ್ಟಿ; ಮಿಟ್ಲಕಟ್ಟೆ ದಿ ಸ್ಟೇಜ್ ಹೋಟೆಲ್ ಮೇಲೆ ಪೊಲೀಸರು ದಾಳಿ  

ದಾವಣಗೆರೆ:  ತಡ ರಾತ್ರಿಯವರೆಗೂ ಪಾರ್ಟಿ ಆಯೋಜನೆ ಮಾಡಿದ ಮಿಟ್ಲಕಟ್ಟೆ ಗ್ರಾಮದ ಹೋಟೆಲ್ ವೊಂದರ  ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಜಿಲ್ಲೆಯ ಹರಿಹರ ತಾಲ್ಲೂಕಿನ  ಮಿಟ್ಲಕಟ್ಟೆ ಗ್ರಾಮದಲ್ಲಿರುವ ದಿ ಸ್ಟೇಜ್ ಹೋಟೆಲ್  ಮೇಲೆ ದಾಳಿ ನಡೆದಿದೆ.

ತಡ ರಾತ್ರಿ ವರೆಗೂ ಯುವಕ-ಯುವತಿಯರು ಡಿಜೆ ಸೌಂಡ್ ಹಾಕಿ ಕುಣಿಯುತಿದ್ದರು. ಇದರಿಂದ ಗ್ರಾಮದ  ಸಾರ್ವಜನಿಕರು ತಡ ರಾತ್ರಿ ಕೆಆರ್​ಎಸ್ ಪಾರ್ಟಿಯ ಕಾರ್ಯಕರ್ತರೊಂದಿಗೆ  ಪೊಲೀಸರಿಗೆ ಮಾಹಿತಿ ನೀಡಿದ್ದರು. ಹೋಟೆಲ್‌ ಮೇಲೆ ದಾಳಿಯಾಗುತಿದ್ದಂತೆ ಯುವಕ ಯುವತಿಯರು ಅಲ್ಲಿಂದ ಪರಾರಿಯಾಗಿದ್ದಾರೆ.  ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾತ್ರಿ 11 ಗಂಟೆಯೊಳಗೆ ಹೋಟೆಲ್ ಬಂದ್ ಮಾಡಬೇಕೆಂಬ ನಿಯಮವಿದೆ. ಈ ಆದೇಶವನ್ನು ದಾವಣಗೆರೆ ಹೊರ ವಲಯದ ಹೋಟೆಲ್ ಪಾಲಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top