ಹರಿಹರ: ಸರ್ಕಾರ ಬಿಡುಗಡೆ ಮಾಡಿದ ಪರಿಹಾರ ಹಣ ಕಾರಣಾಂತರಗಳಿಂದ ದೊರಕದಿರುವ ಅರ್ಹ ರೈತರು ಕೃಷಿ ಸಹಾಯಕ ನಿರ್ದೇಶಕ ಎ.ನಾರಾನಗೌಡ ಮೊ.9945301345, ತೋಟಗಾರಿಕೆ ಅಧಿಕಾರಿ ಶಶಿಧರ್ ಮೊ.9448442833, ಪ್ರಕೃತಿ ವಿಕೋಪ ವಿಷಯ ನಿರ್ವಾಹಕ ಮಂಜುನಾಥ್ ಮೊ.8618868370 ಸಂಪರ್ಕಿಸಬಹುದು ಎಂದು ತಹಶೀಲ್ದಾರ್ ಗುರುಬಸವರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಿಂದಾಗಿ ಬೆಳೆಹಾನಿ ಅನುಭವಿಸಿದ ಹರಿಹರ ತಾಲ್ಲೂಕಿನ 7,476 ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾ ಮಾಡಲಾಗಿದೆ. ಎಸ್ಡಿಆರ್ಎಫ್ ಮತ್ತು ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಗರಿಷ್ಠ 2000 ರಂತೆ ಒಟ್ಟು 2,55,52,540 ಮೊತ್ತವನ್ನು ಪಾವತಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.



