Connect with us

Dvgsuddi Kannada | online news portal | Kannada news online

ಅಡಿಕೆ ದರದಲ್ಲಿ ದಿಢೀರ್ ಕುಸಿತ: ಇಂದಿನ ದಾವಣಗೆರೆ ರಾಶಿ ಅಡಿಕೆ ಧಾರಣೆ ಎಷ್ಟಿದೆ..?

ಪ್ರಮುಖ ಸುದ್ದಿ

ಅಡಿಕೆ ದರದಲ್ಲಿ ದಿಢೀರ್ ಕುಸಿತ: ಇಂದಿನ ದಾವಣಗೆರೆ ರಾಶಿ ಅಡಿಕೆ ಧಾರಣೆ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರದಲ್ಲಿ (arecanut rate) ಎರಡು ದಿನದ ಹಿಂದೆ (ಮೇ 13) ಭರ್ಜರಿ ಏರಿಕೆ ಕಂಡ 55 ಸಾವಿರ ಗಡಿ ದಾಟಿತ್ತು. ಇದು ಈ ವರ್ಷದಲ್ಲಿಯೇ ಗರಿಷ್ಠ ಬೆಲೆಯಾಗಿತ್ತು.ಇಂದು (ಮೇ 15) ರಾಶಿ ಅಡಿಕೆ ಧಾರಣೆಯಲ್ಲಿ ದಿಢೀರ್ ಕುಸಿತ ಕಂಡಿದ್ದು, 300 ರೂ. ಇಳೆಕೆಯಾಗಿದೆ. ಇಂದು ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 54,821 ರೂ.ಗಳಿದ್ದು, ಕನಿಷ್ಠ ಬೆಲೆ 49,019 ರೂ.ಗಳಾಗಿದೆ.

ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಹೀಗಾಗಿ ಇನ್ನೂ ಸ್ವಲ್ಪ‌ ದಿನ ಇಟ್ಟು ಮಾರಾಟ ಮಾಡುವವರಿಗೆ‌ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಮೇ ತಿಂಗಳಲ್ಲಿ ಬೇಸಿಗೆ ಬಿಸಿ ಹೆಚ್ಚಳವಾಗಿದ್ದು, ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದೆ. ವಾತಾವರಣದಲ್ಲಿ ಬಿಸಿಗಾಳಿ ಹೆಚ್ಚಿದ್ದು, ಜಿಲ್ಲೆಯ ಕೆಲವು ಕಡೆ ಮಳೆಯಾಗುತ್ತಿದೆ. ಇನ್ನೂ ಕೆಲವು ಕಡೆ ಒಂದು ಹನಿಯೂ ಮಳೆಯಾಗಿಲ್ಲ.

ತೀವ್ರ ಬಿಸಿ ಗಾಳಿಯಿಂದ ಅಡಿಕೆ ಬೆಳೆ ಒಣಗುತ್ತಿದ್ದು, ಹೇಗಾದ್ರೂ ಮಾಡಿ ಮೇ ತಿಂಗಳಲ್ಲಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎಂದು ರೈತರು ಹರಸಾಹಸಪಡುತ್ತಿದ್ದಾರೆ. ಈಗಾಗಲೇ ಶೇ. 50ರಷ್ಟು ರೈತರು ಅಡಿಕೆ ಬೆಳೆ ಉಳಿಸಿಕೊಳ್ಳಲು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಈಗ ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಪುನಃ ಕುಸಿದು ಮೇ ತಿಂಗಳಲ್ಲಿ ಈಗ 55 ಸಾವಿರ ತಲುಪಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಮೇ 15ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 49,019 ರೂ., ಗರಿಷ್ಠ ಬೆಲೆ 54,821 ಹಾಗೂ ಸರಾಸರಿ ಬೆಲೆ 53,565 ರೂ.ಗೆ ಮಾರಾಟವಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top