Connect with us

Dvgsuddi Kannada | online news portal | Kannada news online

ದಾವಣಗೆರೆ: ಈ ಬಾರಿ ಸರಳ ದಸರಾಗೆ ತೀರ್ಮಾನ; ಸಾಮೂಹಿಕ ವಿವಾಹ, ಮೆರವಣಿಗೆ ರದ್ದು

ದಾವಣಗೆರೆ

ದಾವಣಗೆರೆ: ಈ ಬಾರಿ ಸರಳ ದಸರಾಗೆ ತೀರ್ಮಾನ; ಸಾಮೂಹಿಕ ವಿವಾಹ, ಮೆರವಣಿಗೆ ರದ್ದು

ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ದುರ್ಗಾಂಬಿಕ ದೇವಸ್ಥಾನ ಟ್ರಸ್ಟ್ ನಿಂದ ನಗರದಲ್ಲಿ ಈ ಬಾರಿ ಸರಳ ದಸರಾ ಆಚರಣೆಗೆ ತೀರ್ಮಾನ ಕೈಗೊಳ್ಳಲಾಯಿತು.

ದುರ್ಗಾಂಬಿಕಾ ದೇವಾಲಯದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ದುರ್ಗಾಂಬಿಕಾ ದೇವಸ್ಥಾನದ ಟ್ರಸ್ಟ್ ಸಮಿತಿಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡರು.

ಈ ಬಾರಿಯ ದಸರಾದಲ್ಲಿ ಕುಂಭಾಭಿಷೇಕ ಮೆರವಣಿಗೆ, ಅಭಿಷೇಕ, ಸಾಮೂಹಿಕ ವಿವಾಹ ಗಳನ್ನು ನಡೆಸದಂತೆ ಕೈಗೊಳ್ಳಲಾಯಿತು. 1001 ಕುಂಭಗಳ ಬದಲಿಗೆ ಸರಳವಾಗಿ 9 ಕುಂಭಗಳನ್ನು ಇಟ್ಟು ಹಾಗೂ ನವದುರ್ಗೆಯರನ್ನು ಪೂಜಿಸಲು ನಿರ್ಧಾರ ಕೈಗೊಳ್ಳಲಾಯಿತು.

ಕೊರೊನಾ ವೈರಸ್ ಹಿನ್ನೆಲೆ ಸರ್ಕಾರದ ನಿಯಮ ಪಾಲಿಸುವುದು ಕಡ್ಡಾಯ. ಸಭೆ ಸಮಾರಂಭಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಮತಿ ನೀಡದೇ ಇರುವುದರಿಂದ ಸರಳ ಆಚರಣೆ ಮಾಡಬೇಕು. ಸರ್ಕಾರದ ಮಾರ್ಗಸೂಚಿಗಳನ್ನು ತಿಳಿದುಕೊಂಡು ಹಬ್ಬದ ಆಚರಣೆ ಮಾಡಬೇಕು ಎಂದು ಮುಖಂಡ ಕರಿಗಾರ್ ಬಸಪ್ಪ ಅಭಿಪ್ರಾಯಪಟ್ಟರು.

ದೇವಸ್ಥಾನದ ಟ್ರಸ್ಟ್‌ನ ಲೆಕ್ಕಪತ್ರಗಳಿಗೆ ಸಂಬಂಧಪಟ್ಟಂತೆ ಆಕ್ಷೇಪ ವ್ಯಕ್ತವಾಯಿತು. ಟ್ರಸ್ಟ್ ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ಅವರನ್ಶಾಸಕ ಯಜಮಾನ್ ಮೋತಿ ವೀರಣ್ಣ ತರಾಟೆಗೆ ತೆಗೆದುಕೊಂಡರು. ದೇವಾಲಯ ಯಾರ ಮಾಲೀಕತ್ವದಲ್ಲೂ ಇಲ್ಲ. ಎಲ್ಲಾ ಸಮುದಾಯಕ್ಕೂ ಸೇರಿದ್ದು. ಇನ್ನು ಮುಂದೆ ತಪ್ಪು ಮಾಡಿದರೆ ಉಳಿಗಾಲವಿಲ್ಲ ಎಂದು ಎಚ್ಚರಿಕೆ ನೀಡಿದರು.

ಲೆಕ್ಕಪತ್ರ ಸಮರ್ಪಕವಾಗಿಲ್ಲ. ಪೂರ್ಣ ವಿವರ ತಂದು ಲೆಕ್ಕ ಕೊಡಿ ಎಂದು ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಆಗ್ರಹಿಸಿದರು.

ಇದಾನ ನಂತರ ಪ್ರತಿಕ್ರಿಯೆ ನೀಡಿದ ಗೌಡ್ರ ಚನ್ನಬಸಪ್ಪ, ಈ ಬಗ್ಗೆ ದಸರಾ ಹಬ್ಬ ಮುಗಿದ ನಂತರ ಸಭೆ ಸೇರಿ ಚರ್ಚಿಸಲಾಗುವುದು ಎಂದರು.  ಸಭೆಯಲ್ಲಿ ಧೂಡ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ , ಟ್ರಸ್ಟ್‌ನ ಧರ್ಮದರ್ಶಿಗಳಾದ ಅಥಣಿ ವೀರಣ್ಣ,  ಎಚ್.ಡಿ.ಗೋಣೆಪ್ಪ, ಉಮೇಶ್ ಜಾಧವ್, ಹನುಮಂತರಾವ್ ಜಾಧವ್, ಜೆ.ಕೆ.ಕೊಟ್ರಬಸಪ್ಪ, ರಾಮಕೃಷ್ಣ, ಬಳ್ಳಾರಿ ಷಣ್ಮುಖಪ್ಪ ಭಾಗಿಯಾಗಿದ್ದರು.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top