Connect with us

Dvgsuddi Kannada | online news portal | Kannada news online

ದಾವಣಗೆರೆ: ಅಪಘಾತ ಪರಿಹಾರ ನೀಡದ ಎರಡು ಸರ್ಕಾರಿ ಬಸ್ ಜಪ್ತಿ

ದಾವಣಗೆರೆ

ದಾವಣಗೆರೆ: ಅಪಘಾತ ಪರಿಹಾರ ನೀಡದ ಎರಡು ಸರ್ಕಾರಿ ಬಸ್ ಜಪ್ತಿ

ದಾವಣಗೆರೆ: ಅಪಘಾತ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯದ ಆದೇಶದ ಮೇರೆಗೆ ಎರಡು ಸರ್ಕಾರಿ ಬಸ್​ಗಳನ್ನ ಜಪ್ತಿ ಮಾಡಲಾಗಿದೆ.

ದಾವಣಗೆರೆ ಬಸ್ ನಿಲ್ದಾಣದಲ್ಲಿ 2 ಕೆಎಸ್‌ಆರ್​ಟಿಸಿ ಬಸ್​ಗಳನ್ನು ಇಂದು ಜಪ್ತಿ ಮಾಡಲಾಗಿದೆ. 2009ರ ಆಗಸ್ಟ್ 8ರಂದು ಕೆಎಸ್‌ಆರ್​ಟಿಸಿ ಬಸ್ ಅಪಘಾತವಾಗಿತ್ತು. ಸುದೀಪ್ ಎಂಬುವವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಕಾಲು ಕಳೆದುಕೊಂಡಿದ್ದ ಸುದೀಪ್​ಗೆ ಪರಿಹಾರ ನೀಡುವಂತೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರ ನೀಡದ ಹಿನ್ನೆಲೆ ಬಸ್​ಗಳನ್ನು ಇದೀಗ ಜಪ್ತಿ ಮಾಡಲಾಗಿದೆ.

ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು‌. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ಮಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ಡಿಪೋದಿಂದ 41,11,200 ರೂ. ಪರಿಹಾರಕ್ಕೆ ಸೂಚನೆ ನೀಡುವಂತೆ ಸೂಚಿಸಿತ್ತು. ಇಲ್ಲಿವರೆಗೂ ಕಾಲು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ ಡಿಪೋಗೆ ಸೇರಿದ ಎರಡು ಬಸ್​ಗಳನ್ನ ಜಪ್ತಿ ಮಾಡಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top