ದಾವಣಗೆರೆ: ಚನ್ನಗಿರಿ ತಾಲ್ಲೂಕಿನ ಯಲೋದಹಳ್ಳಿ ಗ್ರಾಮದಲ್ಲಿಂದು ರೈತನೊರ್ವ ಬೆಳಗ್ಗೆ ಹುಲ್ಲು ತರಲು ಹೋಗಿದ್ದಾಗ ವಿದ್ಯುತ್ ತಗುಲಿ ಒಂದು ಎತ್ತು ಸಾವನ್ನಪ್ಪಿದ ಘಟನೆ ನಡೆದಿದೆ.
ಮರಿಯವ್ವರ ರುದ್ರಪ್ಪ ಎಂಬ ರೈತನ ಎಂದಿನಂತೆ ಇಂದು ಸಹ ಜಮೀನಿಗೆ ಹುಲ್ಲು ತರಲು ಹೋಗಿದ್ದ, ಜಮೀನು ತಲುಪಿದ ನಂತರ ಎತ್ತಿನ ಗಾಡಿಯಿಂದ ಎತ್ತು ಬಿಚ್ಕೊಂಡು ವಿದ್ಯುತ್ ಕಂಬಕ್ಕೆ ಕಟ್ಟಿದ್ದಾನೆ. ಒಂದು ಎತ್ತು ಕಟ್ಟಿ, ಇನ್ನೊಂದು ಎತ್ತು ಕಟ್ಟುವಷ್ಟರಲ್ಲಿ ವಿದ್ಯುತ್ ತಗುಲಿ ಒಂದು ಎತ್ತು ಸಾವನ್ನಪ್ಪಿದೆ. 80 ಸಾವಿರ ರೂಪಾಯಿ ಕೊಟ್ಟು ಒಂದು ಜೊತೆ ಎತ್ತುನ್ನು ರುದ್ರಪ್ಪ ತಂದಿದ್ದರು. ಇದೀಗ ಒಂದು ಎತ್ತು ವಿದ್ಯುತ್ ತಗುಲಿ ಸಾವನ್ನಪ್ಪಿದೆ.



