Connect with us

Dvgsuddi Kannada | online news portal | Kannada news online

ದಾವಣಗೆರೆ: SSLC ಪಾಸಾದವರಿಗೆ ರಂಗ ಶಿಕ್ಷಣ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ

ದಾವಣಗೆರೆ: SSLC ಪಾಸಾದವರಿಗೆ ರಂಗ ಶಿಕ್ಷಣ ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದಿರುವ ರಂಗಶಿಕ್ಷಣ ಡಿಪ್ಲೋಮಾ ಪ್ರವಶಕ್ಕೆ ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಈ ಶಿಕ್ಷಣದ ತರಬೇತಿ ಅವಧಿ ಒಂದು ವರ್ಷ ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಯಾಗಿದ್ದು ಪದವೀಧರರಿಗೆ ಆದ್ಯತೆ ಕೊಡಲಾಗುವುದು. ತರಬೇತಿ ಅವಧಿಯಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಇರುತ್ತದೆ. ಕರ್ನಾಟಕ ಹಾಗೂ ಭಾರತದ ರಂಗ ತಜ್ಞರು ಮತ್ತು ಅತಿಥಿ ಉಪನ್ಯಾಸಕರಿಂದ ತರಗತಿಗಳು ನಡೆಯಲಿವೆ. ಒಳ್ಳೆಯ ಗ್ರಂಥ ಭಂಡಾರ ಹಾಗೂ ದೃಶ್ಯಶ್ರವ್ಯ ಪರಿಕರಗಳ ಅನುಕೂಲತೆ ಇದ್ದು, ಒಂದು ವರ್ಷದಲ್ಲಿ ಭಾರತೀಯ ರಂಗಭೂಮಿ, ಕನ್ನಡ ರಂಗಭೂಮಿ, ಮತ್ತು ಸಾಹಿತ್ಯ ಪರಂಪರೆ, ಪಾಶ್ಚಾತ್ಯರಂಗಭೂಮಿ, ಅಭಿನಯ, ಆಹಾರ್ಯ, ಶಿಕ್ಷಣದಲ್ಲಿರಂಗಭೂಮಿ ಕುರಿತಾದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ತರಗತಿಗಳು ನಡೆಯುತ್ತವೆ. ಕಳರಿ, ಕಥಕಳಿ ಯಕ್ಷಗಾನ, ಕಂಸಾಳೆ, ಹೆಜ್ಜೇಮೇಳ, ದೊಡ್ಡಾಟ, ವೀರಗಾಸೆ, ಪ್ರಸಾದನ, ಬೆಳಕಿನವಿನ್ಯಾಸ, ರಂಗವಿನ್ಯಾಸ, ಮುಂತಾದ ಕಾರ್ಯಗಾರಗಳ ಜೊತೆಗೆ ಕಾವ್ಯ, ಚಿತ್ರಕಲೆ ಕುರಿತಾದ ಕಮ್ಮಟಗಳು ನಡೆಯುತ್ತವೆ. ವರ್ಷದಲ್ಲಿ ನಾಲ್ಕು ನಾಟಕಗಳ ಅಭ್ಯಾಸ ಹಾಗೂ ಪ್ರದರ್ಶನ ನಡೆಯುತ್ತದೆ.

ಪ್ರವೇಶ ಅರ್ಜಿಗಳನ್ನು ರಂಗಶಾಲೆಯ ವೆಬ್ ಸೈಟ್ www.theatreschoolsanehalli.org  ನಲ್ಲಿ ಪ್ರವೇಶ ಅರ್ಜಿಯನ್ನು ಡೌನ್‍ಲೋಡ್ ಮಾಡಿ ಜೂನ್.30 ರ ಒಳಗಾಗಿ ಅರ್ಜಿಯನ್ನು ರಂಗಶಾಲೆಗೆ ಸಲ್ಲಿಸಬಹುದಾಗಿರುತ್ತದೆ ಹಾಗೂ ಜುಲೈ ತಿಂಗಳ 06.07 ಮತ್ತು 08 ರಂದು ಸಂದರ್ಶನ ನಡೆಯಲಿದೆ. (ಅಭ್ಯರ್ಥಿಯು ಮೂರು ದಿನ ಕಡ್ಡಾಯವಾಗಿ ಪಾಲ್ಗೊಳ್ಳಬೇಕು) ಆಯ್ಕೆ ಆದ ಅಭ್ಯರ್ಥಿಗಳಿಗೆ ಜುಲೈ 15 ರಿಂದ ತರಗತಿಗಳು ಪ್ರಾರಂಭವಾಗುತ್ತವೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9448398144-9482942394 ಯನ್ನು ಸಂಪರ್ಕಿಸಬಹುದೆಂದು ಎಂದು ಪ್ರಕಟಣೆ ತಿಳಿಸಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top