ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ನಗರದಲ್ಲಿ ಜೂ.09 ರಂದು ಬೆಳಿಗ್ಗೆ 06.30 ಕ್ಕೆ ವಿಶ್ವ ಬೈಸಿಕಲ್ ದಿನಾಚರಣೆಯ ಪ್ರಯುಕ್ತ ಬೈಸಿಕಲ್ ಜಾಥಾವನ್ನು ಏರ್ಪಡಿಸಿದೆ. ಜಾಥಾವು ಡಾ|| ಮೋದಿ ವೃತ್ತ (ಗುಂಡಿ ಸರ್ಕಲ್) ನಿಂದ ಪ್ರಾರಂಭಗೊಂಡು ಕರ್ನಲ್ ರವೀಂದ್ರನಾಥ ವೃತ್ತ (ಹೋಸ ಗಡಿಯಾರ ಕಂಬ)ದಲ್ಲಿ ಮುಕ್ತಾಯಗೊಳ್ಳಲಿದೆ.
ವಿಶ್ವ ಬೈಸಿಕಲ್ ದಿನಾಚರಣೆಯ ಪ್ರಯುಕ್ತ ಯುವಜನ ಮತ್ತು ಕ್ರೀಡಾ ಇಲಾಖೆ ಹಾಗೂ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ದೇಶಾದಾದ್ಯಂತ ಬೈಸಿಕಲ್ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಬೈಸಿಕಲ್ ಜಾಥಾವನ್ನು ನಡೆಸುತ್ತಿದ್ದು, ದೇಶದ ಎಲ್ಲಾ 100 ಸ್ಮಾರ್ಟ್ ಸಿಟಿಗಳಲ್ಲಿ ಬೈಸಿಕಲ್ ಜಾಥಾವನ್ನು ಆಯೋಜಿಸಲಾಗಿದ್ದು, ನಗರದ ನಾಗರಿಕರು, ಯುವಜನತೆ ಹಾಗೂ ವಿದ್ಯಾರ್ಥಿಗಳು ಜಾಥಾದಲ್ಲಿ ಭಾಗವಹಿಸುವಂತೆ ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



