Connect with us

Dvgsuddi Kannada | online news portal | Kannada news online

ದಾವಣಗೆರೆ: ಸರ್ಕಾರದಿಂದ ರೈತ ಶಕ್ತಿ ಯೋಜನೆಯಡಿ ಎಕರೆಗೆ 250 ರೂಪಾಯಿ ಡೀಸೆಲ್ ಫ್ರೀ

ದಾವಣಗೆರೆ

ದಾವಣಗೆರೆ: ಸರ್ಕಾರದಿಂದ ರೈತ ಶಕ್ತಿ ಯೋಜನೆಯಡಿ ಎಕರೆಗೆ 250 ರೂಪಾಯಿ ಡೀಸೆಲ್ ಫ್ರೀ

ದಾವಣಗೆರೆ: ಸರ್ಕಾರ ರೈತರ ಹಿತ ಕಾಪಾಡಲು “ರೈತ ಶಕ್ತಿ” ಎಂಬ ಹೊಸ ಯೋಜನೆ ಜಾರಿಗೊಳಿಸುತ್ತಿದ್ದು, ಡೀಸಲ್ ಬಳಕೆಗೆ ಎಕರೆಗೆ ರೂ 250/- ರಂತೆ ಗರಿಷ್ಠ 5 ಎಕರೆಗೆ 1250/- ರೂಗಳನ್ನು ನೀಡುತ್ತಿದ್ದು ಫಲಾನುಭವಿಗಳಿಗೆ ಇದರ ಉಪಯೋಗ ಪಡೆಯಲು ಎಫ್.ಐ.ಡಿ ಕಡ್ಡಾಯವಾಗಿರುತ್ತದೆ ಎಂದು ಡಾ.ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಪ್ರೋ.ಲಿಂಗಣ್ಣ ತಿಳಿಸಿದರು.

ಆನಗೋಡಿನಲ್ಲಿ ಕೃಷಿ ಇಲಾಖೆ ವತಿಯಿಂದ 2022-23ನೇ ಸಾಲಿಗೆ ಕೃಷಿ ಅಭಿಯಾನಕ್ಕೆ ಚಾಲನೆ ಹಾಗೂ ಅಕ್ಕಡಿ ಬೆಳೆ ಅಭಿಯಾನ ಕಾರ್ಯಕ್ರಮವನ್ನು ರೈತ ಸಂಪರ್ಕ ಕೇಂದ್ರ ಹಮ್ಮಿಕೊಳ್ಳಲಾಗಿದ್ದ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದ ಇವರು ಅಕ್ಕಡಿ ಬೆಳೆ ಅಭಿಯಾನ ಪ್ರಯುಕ್ತ ರೈತರಿಗೆ ಉಚಿತವಾಗಿ ತೊಗರಿ ಮತ್ತು ಹೆಸರು ಬಿತ್ತನೆ ಬೀಜಗಳ ಕಿರು ಚೀಲ ಗಳನ್ನು ವಿತರಣೆ ಮಾಡಿ ಮಾತನಾಡಿ ಪ್ರಸ್ತುತ ಇಲಾಖಾ ಅಧಿಕಾರಿಗಳ ಮಾಹಿತಿ ಪ್ರಕಾರ ದಾವಣಗೆರೆ ತಾಲ್ಲೂಕಿನಲ್ಲಿ ಸುಮಾರು 68 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಬೆಳೆಗಳು ಆವರಿಸುತ್ತಿದ್ದು ಮುಖ್ಯವಾಗಿ ಮೆಕ್ಕೆಜೋಳ ಬೆಳೆಯು 33600 ಹೆಕ್ಟೇರ್, ಭತ್ತದ ಬೆಳೆಯು 16800 ಹಕ್ಟೇರ್ ಉಳಿದಂತೆ ತೊಗರಿ, ರಾಗಿ, ಶೇಂಗಾ, ಕಬ್ಬು ಬೆಳೆಗಳು ಬರುತ್ತವೆ. ಇದರ ಬಗ್ಗೆ ಗಮನಿಸಿದಾಗ ಇತ್ತೀಚಿನ ದಿನಗಳಲ್ಲಿ ರೈತರು ಕೇವಲ ಮೆಕ್ಕೆಜೋಳ, ಭತ್ತದಂಥಹ ಏಕ ಬೆಳೆಗೆ ಅಂಟಿಕೊಳ್ಳುವುದು ಕಂಡುಬರುತ್ತದೆ ಇದನ್ನು ಗಮನಿಸಿ ಸರ್ಕಾರಕ್ಕೆ ಒತ್ತಾಯಿಸಿ ಅಕ್ಕಡಿ ಬೆಳೆ ಪ್ರೋತ್ಸಾಹಿಸಲು ತಾಲ್ಲೂಕಿಗೆ ಸುಮಾರು 4 ಕೆ.ಜಿ ಪ್ಯಾಕೆಟಿನ 2700 ತೊಗರಿ & ಹೆಸರು ಕಿರು ಚೀಲಗಳನ್ನು ರೈತರಿಗೆ ಉಚಿತವಾಗಿ ವಿತರಿಸುತ್ತಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳವುದರ ಮೂಲಕ ಅಕ್ಕಡಿ ಬೆಳೆ ಆಂದೋಲನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಇದೇ ರೀತಿ ಕಡ್ಡಾಯವಾಗಿರುತ್ತದೆ. ಪ್ರಸಕ್ತ ಸಾಲಿನಿಂದ ಮಹಿಳಾ ರೈತರಿಗೋಸ್ಕರನೆ ಪ್ರತ್ಯೇಕ ಕೃಷಿ ಪಂಡಿತ ಪ್ರಶಸ್ತಿ ನೀಡುವ ಹೊಸ ಯೋಜನೆ ಜಾರಿಗೆ ತಂದಿದ್ದು ಪ್ರಗತಿ ಪರ ರೈತ ಮಹಿಳೆಯರು ಇದರ ಪ್ರಯೋಜನೆ ಪಡೆಯಬೇಕು ಎಂದು ತಿಳಿಸಿದರು. ಈಗಾಗಲೇ ಉತ್ತಮವಾಗಿ ಮಳೆಯಾಗಿರುವುದರಿಂದ ಭೂಮಿ ಸಿದ್ದತೆ ಕೂಡ ಜೋರಾಗಿ ನಡೆಯುತ್ತಿರುವುದನ್ನು ಗಮನಿಸಿದ್ದು ಬಿತ್ತನೆ ಬೀಜಕ್ಕೆ ರೈತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ದತೆ ಮಾಡಿಕೊಳ್ಳುವಂತೆ ಇಲಾಖಾ ಅಧಿಕಾರಿಗಳಿಗೆ ಸೂಚಿಸಿದ್ದ ಪ್ರಯುಕ್ತ ತಾಲ್ಲೂಕಿನ ಎಲ್ಲಾ ಹೋಬಳಿಗಳಲ್ಲಿ ಬಿತ್ತನೆ ಬೀಜ ವಿತರಣಾ ಕೇಂದ್ರಗಳು ಆರಂಭವಾಗುತ್ತಿದ್ದು ರೈತರು ಆತಂಕ ಪಡುವ ಅಗತ್ಯವಿಲ್ಲ ರೈತರು ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ಖರೀದಿ ಮಾಡಬೇಕು ಎಂದು ತಿಳಿಸಿದರು.

ರಷ್ಯಾ-ಉಕ್ರೇನ್ ಯುದ್ದ ಹಾಗೂ ಇತರೆ ಅನೇಕ ಜಾಗತಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ರಸಗೊಬ್ಬರದ ಬೆಲೆ ಗಗನಕ್ಕೇರಿದೆ ಸರ್ಕಾರ ಇದನ್ನು ಮನಗಂಡು ರೈತರ ಹಿತಕ್ಕಾಗಿ ರಸಗೊಬ್ಬರಗಳ ಸಹಾಯಧನವನ್ನು ಹೆಚ್ಚಿಸಿ ರೈತರಿಗೆ ಬೆಲೆ ಏರಿಕೆ ಹೊರೆಯಾಗದಂತೆ ಕ್ರಮ ವಹಿಸಿದೆ. ಡಿ.ಎ.ಪಿ ಗೊಬ್ಬರದ ಮೂಲ ಬೆಲೆ 3850/- ರೂಗಳಿದ್ದು ಸರ್ಕಾರ 2500/-ರೂಗಳ ಸಬ್ಸಿಡಿ ನೀಡುತ್ತಿದೆ ಕಳೆದ ವರ್ಷಕ್ಕೆ ಹೊಲಿಸಿದಲ್ಲಿ 500/-ರೂ ಇದ್ದ ಸಬ್ಸಿಡಿಯನ್ನು 2500/-ರೂಗೆ ಏರಿಸಿದೆ ಒಂದೇ ವರ್ಷದಲ್ಲಿ ರೂ 2000/-ಗಳ ಹೆಚ್ಚುವರಿ ಸಬ್ಸಿಡಿಯನ್ನು ಸರ್ಕಾರ ಪ್ರತಿ ಬ್ಯಾಗ್ ಡಿ.ಎ.ಪಿ ಗೊಬ್ಬರಕ್ಕೆ ಬರಿಸುತ್ತಿದೆ ಹಾಗೂ ಯೂರಿಯ ಗೊಬ್ಬರಕ್ಕೆ ಪ್ರತಿ ಬ್ಯಾಗ್‍ಗೆ 800 ರಿಂದ 1400ರೂಗಳ ವರೆಗೆ ಸಬ್ಸಿಡಿ ರೈತರಿಗೆ ಸಿಗುವಂತೆ ನಮ್ಮ ಕೇಂದ್ರ ಸರ್ಕಾರ ಕ್ರಮ ವಹಿಸಿದೆ ಎಂದು ತಿಳಿಸಿದರು.

ಉಪ ಕೃಷಿ ನಿರ್ದೇಶಕರಾದ ಡಾ|| ತಿಪ್ಪೇಸ್ವಾಮಿರವರು ಮಾತನಾಡಿ 2022-23ನೇ ಸಾಲಿಗೆ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ ಇದರ ಉದ್ದೇಶ ಕೃಷಿ ಇಲಾಖೆಯ ಸಂಪೂರ್ಣ ಮಾಹಿತಿ ಹೊತ್ತ ರಥವು ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯ್ತಿಯ ಪ್ರತಿ ಹಳ್ಳಿಗಳಲ್ಲಿ ಸಂಚರಿಸಿ ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿ ಪ್ರಸಾರ ಮಾಡುತ್ತಿದ್ದು ರೈತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸುತ್ತಾ ಅಕ್ಕಡಿ ಬೆಳೆಯಾಗಿ ತೊಗರಿ, ಹೆಸರಿನಚಿಥಹ ದ್ವಿದಳ ಧಾನ್ಯ ಬೆಳೆಗಳನ್ನು ಹಾಕುವುದರಿಂದ ಹೆಚ್ಚುವರಿ ಆದಾಯ ಬರುವುದಲ್ಲದೆ ಭೂಮಿ ಫಲವತ್ತತೆಗೆ ಸಹಕಾರಿಯಾಗಿದೆ ಎಂದು ತಿಳಿಸಿದರು ಹಾಗೂ ಬಹು ಮುಖ್ಯವಾಗಿ ರೈತರು “ಅಧಿಕೃತ ಮಾರಾಟಗಾರರು & ಇಲಾಖಾ ಬಿತ್ತನೆ ಬೀಜ ವಿತರಣಾ ಕೇಂದ್ರಗಳಲ್ಲಿ ರಶೀದಿ ಪಡೆದು ಬಿತ್ತನೆ ಬೀಜ ಖರೀದಿ ಮಾಡಬೇಕು ಯಾವುದೇ ಕಾರಣಕ್ಕೂ ಲೂಸ್ ಬಿತ್ತನೆ ಬೀಜಗಳನ್ನು ಖರೀದಿ ಮಾಡಬಾರದು” ಎಂದು ರೈತನಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ರೇವಣಸಿದ್ದನಗೌಡ ಹೆಚ್.ಕೆ., ಕೃಷಿ ಅಧಿಕಾರಿ ಶ್ರೀನಿವಾಸ್, ಲೋಕಿಕೆರೆ-ಮಾಯಕೊಂಡ ಎಸ್ಸಿ ಮೋರ್ಚಾ ಅಧ್ಯಕ್ಷರಾದ ಡಿ.ಡಿ. ಹನುಮಂತಪ್ಪ. ದಾಗಿನಕಟ್ಟೆ ನಾಗರಾಜ್. ಕಂದನಕೋವಿ ನಾಗರಾಜ್ ಮತ್ತು ಇತರೆ ರೈತರು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top