Connect with us

Dvgsuddi Kannada | online news portal | Kannada news online

ದಾವಣಗೆರೆ: ವಿದ್ಯುತ್ ಕಂಬಗಳಿಗೆ ಎಳೆದಿರುವ ಅನಧಿಕೃತ ಒಎಫ್‌ಸಿ, ಡಿಶ್, ಡಾಟ ಕೇಬಲ್ ತೆರವುಗೊಳಿಸಲು ನೋಟಿಸ್

ದಾವಣಗೆರೆ

ದಾವಣಗೆರೆ: ವಿದ್ಯುತ್ ಕಂಬಗಳಿಗೆ ಎಳೆದಿರುವ ಅನಧಿಕೃತ ಒಎಫ್‌ಸಿ, ಡಿಶ್, ಡಾಟ ಕೇಬಲ್ ತೆರವುಗೊಳಿಸಲು ನೋಟಿಸ್

ದಾವಣಗೆರೆ: ಬೆಸ್ಕಾಂ ನಗರ ಉಪ ವಿಭಾಗ-1 ದಾವಣಗೆರೆ ವ್ಯಾಪ್ತಿಗೊಳಪಡುವ ಒಎಫ್‌ಸಿ/ ಡಿಶ್/ ಕೊ-ಆಕ್ಸಿಯಲ್ ಕೇಬಲ್/ Data cable ವಿವಿಧ ವಿತರಕರು ಒಎಫ್‌ಸಿ /ಕೊ-ಆಕ್ಸಿಯಲ್ ಮತ್ತು ಇನ್ನಿತರ ಸಂವಹನ ಕೇಬಲ್‌ಗಳನ್ನು ಬೆ.ವಿ.ಕಂನ ವಿದ್ಯುತ್ ಕಂಬಗಳನ್ನು ಉಪಯೋಗಿಸಿಕೊಂಡು ಅನಧಿಕೃತ ಎಳೆದಿರುವುದು ಕಂಡುಬಂದಿರುತ್ತದೆ. ಈ ವಿಷಯದ ಕುರಿತು ಈ ಹಿಂದೆ ಹಲವು ಬಾರಿ ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ಎಳೆದಿರುವ ಒಎಫ್‌ಸಿ/ಕೊ-ಆಕ್ಸಿಯಲ್/ Data cable ಮತ್ತು ಇನ್ನಿತರ ಸಂವಹನ ಕೇಬಲ್‌ಗಳನ್ನು ತೆರವುಗೊಳಿಸಲು ತಿಳಿಸಿದಾಗ್ಯೂ ಈ ವರೆಗೂ ತೆರವುಗೊಳಿಸಿರುವುದಿಲ್ಲ.

ಈ ಹಿನ್ನಲೆಯಿಂದಗಿ ಇತ್ತೀಚಿನ ದಿನಗಳಲ್ಲಿ ಅಹಿತಕರ ಘಟನೆಗಳು ಸಂಭವಿಸುತ್ತಿದ್ದು, ಸಾರ್ವಜನಿಕ ಆಸ್ತಿ/ಜೀವರಾಶಿಗೆ ಹಾನಿಕಾರಕವಾಗಿದ್ದು ಬೆ.ವಿ.ಕಂ ನೌಕರರು ಸುರಕ್ಷಿತವಾಗಿ ಕೆಲಸ ನಿರ್ವಹಿಸುವಲ್ಲಿ ಮಾರಕವಾಗಿರುತ್ತದೆ. ಈ ಅವಗಡಗಳನ್ನು ತಡೆಗಟ್ಟುವ ಸಲುವಾಗಿ ಬೆ.ವಿ.ಕಂ ಅನೇಕ ಸುರಕ್ಷಾ ಕ್ರಮಗಳನ್ನು ಕೈಗೊಂಡಿದೆ. ಆದ್ದರಿಂದ ಕೂಡಲೆ ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ಎಳೆದಿರುವ ಕೇಬಲ್ ಜಾಲವನ್ನು ಮೂರು ದಿನದೊಳಗಾಗಿ ಕಡ್ಡಾಯವಾಗಿ ತೆರವುಗೊಳಿಸಲು ಈ ಮೂಲಕ ಎಲ್ಲಾ ವಿವಿಧ ಕೇಬಲ್ ವಿತರಕರಿಗೆ ಅಂತಿಮವಾಗಿ ನೋಟಿಸ್‌ನ್ನು ನೀಡಲಾಗುತ್ತದೆ.ಇಲ್ಲವಾದಲ್ಲಿ ಅನಧಿಕೃತವಾಗಿ ಎಳದಿರುವ ಎಲ್ಲಾ ಒಎಫ್‌ಸಿ /ಕೊ-ಆಕ್ಸಿಯಲ್/Data cable ಮತ್ತು ಇನ್ನಿತರ ಸಂವಹನ ಕೇಬಲ್‌ಗಳನ್ನು ಯಾವುದೇ ಮುನ್ಸೂಚನೆ ನೀಡದೆ ಬೆ.ವಿ.ಕಂ ಕಂಪನಿಯಿಂದ ತೆರವುಗೊಳಿಸಲಾಗುವುದೆಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top