Connect with us

Dvgsuddi Kannada | online news portal | Kannada news online

ದಾವಣಗೆರೆ: ಮಾಜಿ ಸಚಿವ ಎಚ್. ಎಂ. ರೇವಣ್ಣ ನೇತೃತ್ವದಲ್ಲಿ ಕುರುಬ ಸಮಾಜದ ಪೂರ್ವಭಾವಿ ಸಭೆ

ದಾವಣಗೆರೆ

ದಾವಣಗೆರೆ: ಮಾಜಿ ಸಚಿವ ಎಚ್. ಎಂ. ರೇವಣ್ಣ ನೇತೃತ್ವದಲ್ಲಿ ಕುರುಬ ಸಮಾಜದ ಪೂರ್ವಭಾವಿ ಸಭೆ

ದಾವಣಗೆರೆ: ಕುರುಬ ಸಮಾಜದ ಇತಿಹಾಸ ಕುರಿತು ಒಂದು ದಿನದ ಚಿಂತನ ಮಂಥನ ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಪೂರ್ವಭಾವಿ ಸಭೆಯನ್ನು ಮಾಜಿ ಸಚಿವ ಎಚ್ ಎಂ ರೇವಣ್ಣ ನೇತೃತ್ವದಲ್ಲಿ ನಡೆಯಿತು.

ದಾವಣಗೆರೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ನಡೆದ ಕುರುಬ ಸಮುದಾಯದ ಮುಖಂಡರ ಸಭೆ ನಡೆಸಿ ಮಾತನಾಡಿದ ಮಾಜಿ ಸಚಿವ ಹೆಚ್ ಎಂ ರೇವಣ್ಣ, ಕುರುಬ ಸಮಾಜದ ಇತಿಹಾಸ, ಸಂಪ್ರದಾಯ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಮಾಜದವರು ನಡೆದುಕೊಂಡು ಬಂದ ದಾರಿ ಕುರಿತ ಕುರುಬರ‌ ಸಾಂಸ್ಕೃತಿಕ ಗ್ರಂಥಗಳನ್ನು ಕುರುಬರ ಸಾಂಸ್ಕೃತಿಕ ಪರಿಷತ್ ಬೆಂಗಳೂರು ಮತ್ತು ದಾವಣಗೆರೆ ಕುರುಬ ಸಮಾಜದ ಎಲ್ಲಾ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ ದಾವಣಗೆರೆ ನಗರದಲ್ಲಿ ಬಿಡುಗಡೆ ಕಾರ್ಯಕ್ರಮವನ್ನು ಜೂನ್ 10 ಮತ್ತು 11 ರಂದು ಅಥವಾ 24 ಅಥವಾ 25 ರಂದು ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಪುಸ್ತಕ ಪ್ರತಿಯೊಬ್ಬ ಕುರುಬ ಸಮಾಜದವರಿಗೆ ತಲುಪುವ ಅವಶ್ಯಕತೆ ಇದೆ. ಈ ಪುಸ್ತಕ ಹಲವು ಸಂಶೋಧಕರ ಶ್ರಮದಿಂದ ಹೊರ ಬಂದಿದೆ. ಇದರಲ್ಲಿ ಸಮಾಜದ ಇತಿಹಾಸ ಪುರುಷರ ಹಾಗೂ ಸಮಾಜದ ಮುಖಂಡರು ಕುರಿತು ಕೂಡ ಮಾಹಿತಿ ಇದೆ. ದಾವಣಗೆರೆ ಜಿಲ್ಲೆಯಲ್ಲಿ ನಡೆದ ಕುರುಬ ಸಮಾಜದ ಐತಿಹಾಸಿಕ ಸಭೆಗಳಿಂದ ರಾಜ್ಯ ಮಟ್ಟದಲ್ಲಿ ಸಮಾಜದ ಮಠ ಆಗಿದೆ, ಸಮಾಜದ ಮುಖಂಡರಾದ ಸಿದ್ದರಾಮಯ್ಯ ಮುಖ್ಯಮಂತ್ರಿ ಆದರೂ ಹೀಗೆ ದಾವಣಗೆರೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳು ರಾಜ್ಯದ ಇತಿಹಾಸ ಪುಟ ಸೇರಿವೆ ಎಂದು ನೆನಪಿಸಿದ ಮಾಜಿ ಸಚಿವ ರೇವಣ್ಣ ಈ ಕಾರ್ಯಕ್ರಮದ ಜೊತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಕಳವಳಕಾರಿಯಾಗಿದೆ. ಈ ಮೀಸಲಾತಿ ಕುರಿತು ಅಂದು ಮಧ್ಯಾಹ್ನ 2 ಗಂಟೆಯಿಂದ ವಿಚಾರ ಸಂಕೀರ್ಣ ಏರ್ಪಡಿಸಲಾಗುವುದು ಈ ಕಾರ್ಯಾಗಾರದಲ್ಲಿ ನಾಡಿನ ವಿಚಾರವಾದಿಗಳು ಭಾಗವಹಿಸುವರು ಈ ಕಾರ್ಯಕ್ರಮದಲ್ಲಿ ವಿದ್ಯಾವಂತರು ವಿಚಾರವಂತವರು ಭಾಗವಹಿಸ ಬೇಕೆಂದರು.

ಇದೇ ಸಂಧರ್ಭದಲ್ಲಿ ಮಾತನಾಡಿದ ಹರಿಹರ ಶಾಸಕ ಎಸ್ ರಾಮಪ್ಪ ಕಾರ್ಯಕ್ರಮದಲ್ಲಿ ಜಿಲ್ಲೆಯ ಸಮಾಜದ ಯುವಕರು ಮತ್ತು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್, ಸಮಾಜದಲ್ಲಿ ಯಾವುದೇ ಶುಭ ಕಾರ್ಯವಾದರೆ ಕುರುಬರಿಂದ ಉದ್ಘಾಟನೆ ಮಾಡಿಸುತ್ತಾರೆ, ಕಾರಣ ಸಮಾಜ ನಡೆದುಕೊಂಡು ಬಂದ‌ ದಾರಿ ಇಂತಹ ವಿಷಯಗಳ ಕುರಿತು ತಿಳಿದುಕೊಳ್ಳುವ ಅವಶ್ಯಕತೆ ಇವತ್ತಿನ ಯುವಕರಿಗೆ ಇದೆ ಎಂದ ಅವರು, ಸ್ಥಳೀಯ ಸಾಹಿತಿಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು ಮತ್ತು ಪ್ರಸ್ತುತ ಎದುರಾಗಿರುವ ಮೀಸಲಾತಿ ಸಮಸ್ಯೆ ಕುರಿತು ಚರ್ಚೆ ಮಾಡುವ ಅವಶ್ಯಕತೆ ಇದೆ ಎಂದ ಅವರು ಸಮಾಜದ ಏಳಿಗೆಗೆ ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮಗಳನ್ನು ವಿವರಿಸಿದರು. ಇದೇ ವೇಳೆ ಸಭೆಯಲ್ಲಿ ನಡೆಯಲಿರುವ ವಿಚಾರ ಸಂಕೀರ್ಣ ಕಾರ್ಯಕ್ರಮಕ್ಕೆ ಸಮಿತಿ ರಚನೆ ಮಾಡಲಾಯಿತು.

ಸಮಿತಿಯ ‌ಗೌರವಧ್ಯಕ್ಷರಾಗಿ ಶಾಸಕ ಎಸ್ ರಾಮಪ್ಪ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಮಾಜದ ಹಿರಿಯ ಮುಖಂಡ ಬಿ ಎಂ ಸತೀಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್ ಎಸ್ ಗಿರೀಶ್. ಕಾರ್ಯಾಧ್ಯಕ್ಷರಾಗಿ ಪ್ರೊ. ಯಲ್ಲಪ್ಪ. ಹದಡಿ ಜೆ ಸಿ ನಿಂಗಪ್ಪ. ಉಪಾಧ್ಯಕ್ಷರಾಗಿ ದೇವೇಂದ್ರಪ್ಪ ಕುಣೆಬೆಳಕೆರೆ, ನಂದಿಗಾವಿ ಶ್ರೀನಿವಾಸ್ , ಬಳ್ಳಾರಿ ಷಣ್ಮುಖಪ್ಪ. ಮಾಜಿ ಮೆಯರ್ ಗೋಣೆಪ್ಪ, ರಾಜನಹಳ್ಳಿ ಶಿವಕುಮಾರ್. ಹಾಲೇಕಲ್ ಅರವಿಂದ, ಇಟ್ಟಿಗುಡಿ ಮಂಜುನಾಥ್, ಲಿಂಗರಾಜ್. ಖಜಾಂಚಿಯಾಗಿ ಡಿ ಡಿ ಹಾಲೇಶಪ್ಪ, ಸಂಘಟನಾ ಕಾರ್ಯದರ್ಶಿಯಾಗಿ ಬಿ ಬಿ ಮಲ್ಲೇಶಪ್ಪ. ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪ್ರಸನ್ನ ಬೆಳೆಕೆರೆ. ವಿನಯ್ ಜೋಗಪ್ಪನವರ್ ಆಯ್ಕೆಯಾಗಿದ್ದು ಇನ್ನೂ ಉಳಿದ ಪದಾಧಿಕಾರಿಗಳನ್ನು ಮುಂದಿನ ಸಭೆಯಲ್ಲಿ ಸಮಾಜದ ಎಲ್ಲಾ ಸಂಘಟನೆಗಳಿಂದ ಆಯ್ಕೆ ಮಾಡಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪ್ರದೇಶ ಕುರುಬ ಸಂಘದ ನಿರ್ದೇಶಕರಾದ ಪಿ ರಾಜಕುಮಾರ್, ರೇವಣ್ಣ. ಜಿಲ್ಲಾ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಕುಂಬಳೂರು ವಿರೂಪಾಕ್ಷಪ್ಪ, ಅಡಾಣಿ ಸಿದ್ದಪ್ಪ, ಪಿ ಗಂಗಾಧರ್. ವಕೀಲರಾದ ವಸಂತಕುಮಾರ್, ಹದಡಿ ಮಾಹಾಂತೇಶ್, ಹಾಗೂ ಕನಕ ನೌಕರರ ಸಂಘದ ಪದಾಧಿಕಾರಿಗಳಾದ ಗಣೇಶ್ ದಳವಾಯಿ, ಎಸ್ ಎಚ್ ಗುರುಮೂರ್ತಿ. ರಂಗನಾಥ್, ಬೀರೇಂದ್ರ. ಕುಬೇಂದ್ರ. ಸೇರಿದಂತೆ ಸಮಾಜದ ಇತರೆ ಮುಖಂಡರು ಭಾಗವಹಿಸಿದ್ದರು. ಸಭೆ ಆರಂಭದಲ್ಲಿ ಇತ್ತೀಚಿಗೆ ನಿಧನ ಹೊಂದಿದ ದಿವಂಗತ ಚನ್ನಯ್ಯ ಒಡೆಯರ್ ಪತ್ನಿ ಹಾಲಮ್ಮನವರಿಗೆ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top