Connect with us

Dvgsuddi Kannada | online news portal | Kannada news online

ದಾವಣಗೆರೆ: ಹೆರಿಗೆ ಆದ ಬಳಿಕ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋದ ತಾಯಿ….!

images 61

ದಾವಣಗೆರೆ

ದಾವಣಗೆರೆ: ಹೆರಿಗೆ ಆದ ಬಳಿಕ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟು ಹೋದ ತಾಯಿ….!

ದಾವಣಗೆರೆ: ಹೆರಿಗೆ ಆದ ಬಳಿಕ ತಾಯಿ ಮಗುವನ್ನು ಬಿಟ್ಟು ಹೋದ ಘಟನೆ ನಡೆದಿರುವುದು  ಬೆಳಕಿಗೆ ಬಂದಿದೆ. ಮಾರ್ಚ್ 29 ರಂದು ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ತಾಯಿ‌ ಜನ್ಮ ನೀಡಿದ್ದರು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಿದ್ದ ಹಿನ್ನೆಲೆ ಸರ್ಕಾರಿ ಮಹಿಳಾ‌ ಮತ್ತು ಮಕ್ಕಳ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮಗುವಿನ ಆರೈಕೆ ಮಾಡಲಾಗಿತ್ತು. ಆದರೆ, ಹೆರಿಗೆ ಆಗಿ ಏಳು ದಿನವಾದ್ರೂ ತಾಯಿ ಮತ್ತು ಸಂಬಂಧಿಕರು‌ ಪತ್ತೆ ಆಗಿಲ್ಲ.

ತಾಯಿ ಮತ್ತು ಸಂಬಂಧಿಕರು ಪತ್ತೆ ಆಗದ ಹಿನ್ನೆಲೆ ಬಸವನಗರ ಠಾಣೆಯ ಪೊಲೀಸರಿಗೆ ಆಸ್ಪತ್ರೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ಒಂದು ಕೆಜಿ 50 ಗ್ರಾಂ ತೂಕದ ಗಂಡು ಮಗುವಿಗೆ ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ. ಇದೇ ಆಸ್ಪತ್ರೆಯಲ್ಲಿ ಈ ಮೊದಲು ಒಂದು ಗಂಡು ಮಗ ಅಪರಣ ಆಗಿತ್ತು. ಇದೇ ಆಸ್ಪತ್ರೆ ಯಲ್ಲಿ ಮಾರ್ಚ 16 ರಂದು ಗಂಡು ಮಗು ಅಪಹರಣ ಪ್ರಕರಣ ನಡೆದಿತ್ತು. ಆ ಘಟನೆಯಲ್ಲಿ ಅಪಹರಣಕ್ಕೆ ಒಳಗಾದ ಮಗು ಇನ್ನೂ ಪತ್ತೆಯಾಗಿಲ್ಲ. ಮಗುವಿಗಾಗಿ ತಾಯಿ ಪರಿತಪಿಸುತ್ತಿದ್ದಾರೆ. ಈ ಮಧ್ಯೆ ಇದೀಗ ಹೊಸ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top