ದಾವಣಗೆರೆ: ಮಹಿಳೆಯರನ್ನೇ ಟಾರ್ಗೆಟ್ ಮಾಡಿ, ಹಣಕ್ಕಾಗಿ ಹಿಂಸೆ ನೀಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ರಿಕೆ ವರದಿಗಾರನೆಂದು ಹೇಳಿಕೊಂಡ ಅಜ್ಗರ್ ಪಾಷಾ(42), ಇಸ್ಮಾಯಿಲ್ ಸಾಬ್ ಎಂಬುವರು ಮಹಿಳಾ ಹೋಮ್ ಗಾರ್ಡ್ ಗೆ ಹಣಕ್ಕಾಗಿ ಪೀಡಿಸುತ್ತಿದ್ದರು. ಹಣಕೊಡದಿದ್ದರೆ ಪತ್ರಿಕೆಯಲ್ಲಿ ಬರೆಸಿ ಹೋಮ್ ಗಾರ್ಡ್ ಕೆಲಸದಿಂದ ತೆಗೆಸುತ್ತೇನೆ ಎಂದು ಪೀಡಿಸುತ್ತಿದ್ದರು ಎಂದು ನೊಂದ ಮಹಿಳೆ ಆಜಾದ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಡಿವೈಎಸ್ ಪಿ ನರಸಿಂಹ ತಾಮ್ರಧ್ವಜ ಅವರ ಮಾರ್ದರ್ಶನ ಆಜಾದ್ ನಗರ ಪೊಲೀಸ್ ಠಾಣೆ ಪಿಎಸ್ ಐ ರವಿಂದ್ರ ಕಾಳಭೈರವ ಅವರನ್ನೊಳಗೊಂಡ ಸಿಬ್ಬಂದಿ ಅಜ್ಗರ್ ಪಾಷಾ ನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.



