Connect with us

Dvgsuddi Kannada | online news portal | Kannada news online

ದಾವಣಗೆರೆ: ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಈಗಲ್ ಫಿಟ್ನೆಸ್‌ ಗೆ ತಲಾ ಎರಡು  ಚಿನ್ನ, ಬೆಳ್ಳಿ ಪದಕ

ದಾವಣಗೆರೆ

ದಾವಣಗೆರೆ: ಬಾಕ್ಸಿಂಗ್ ಚಾಂಪಿಯನ್‌ ಶಿಪ್‌ ನಲ್ಲಿ ಈಗಲ್ ಫಿಟ್ನೆಸ್‌ ಗೆ ತಲಾ ಎರಡು  ಚಿನ್ನ, ಬೆಳ್ಳಿ ಪದಕ

ದಾವಣಗೆರೆ: ಅಂತರಾಷ್ಟ್ರೀಯ ಓಲಂಪಿಕ್ ಕಮಿಟಿಯಿಂದ ಮಾನ್ಯತೆ ಪಡೆದ ರಾಷ್ಟ್ರೀಯ ಯುವ ಕ್ರೀಡಾ ಮತ್ತು ಶಿಕ್ಷಣ ಫೆಡರೇಷನ್ ವತಿಯಿಂದ  ಫೆಬ್ರವರಿ 26 ಮತ್ತು 27 ರಂದು ಗೋವಾದ ಚೋಗ್ಲೇ ಕ್ರೀಡಾ ಕಾಲೇಜಿನಲ್ಲಿ ನಡೆದ 6 ನೇ ರಾಷ್ಟ್ರೀಯ ಯುವ ಕ್ರೀಡಾ ಚಾಂಪಿಯನ್‌ಶಿಪ್ 2022 ರಲ್ಲಿ ನಗರದ ಈಗಲ್ ಫಿಟ್ನೆಸ್‌ನ ವಿದ್ಯಾರ್ಥಿಗಳು ಬಾಕ್ಸಿಂಗ್ ವಿಭಾಗದಲ್ಲಿ ತಲಾ ಎರಡು  ಚಿನ್ನ , ಬೆಳ್ಳಿ ಪದಕ ಪಡೆದು ದಾವಣಗೆರೆ ಜಿಲ್ಲೆಗೆ ಕೀರ್ತಿ ತಂದು ಕೊಟ್ಟಿದ್ದಾರೆ. ಈ ಗೆಲುವನ್ನು  ‘ಪುನೀತ್ ರಾಜ್‌ಕುಮಾರ್’ ಅವರಿಗೆ ಅರ್ಪಿಸಿದ್ದಾರೆ.

71- 75 ಕೆ.ಜಿ. ವಿಭಾಗದಲ್ಲಿ ಮಲ್ಲಿಕಾರ್ಜುನ್ 30  ಪಾಯಿಂಟ್ ಮತ್ತು 61-65 ಕೆ.ಜಿ. ವಿಭಾಗದಲ್ಲಿ ದೀಕ್ಷಿತ್ ಎಂ.ಎಲ್ 29  ಪಾಯಿಂಟ್‌ಗಳನ್ನು ಪಡೆದು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. 76-80 ಕೆ.ಜಿ. ವಿಭಾಗದಲ್ಲಿ ರಾಮ್‌ಕುಮಾರ್ 24 ಪಾಯಿಂಟ್ ಹಾಗೂ 51-55  ಕೆ.ಜಿ. ವಿಭಾಗದಲ್ಲಿ ಚಿನ್ನು ವಿಕಾಸ್ 22  ಪಾಯಿಂಟ್ ಪಡೆದು ಬೆಳ್ಳಿ ಪದಕಕ್ಕೆ ಭಾಜನರಾಗಿರುತ್ತಾರೆ. ಈ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಈಗಲ್ ಫಿಟ್ನೆಸ್‌ನ ತರಬೇತುದಾರರಾದ ವೆಂಕಿ ಸೆನ್ಸೈ ಮತ್ತು ದಾವಣಗೆರೆಯ ಕ್ರೀಡಾ ಪ್ರೋತ್ಸಾಹಕರಾದ ಶ್ರೀನಿವಾಸ ದಾಸಕರಿಯಪ್ಪ ಹಾಗೂ ಮಾಜಿ ಮೇಯರ್  ಬಿ.ಜಿ. ಅಜಯ್‌ಕುಮಾರ್  ಅಭಿನಂದಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top